ಗುರುಭಕ್ತಿಯ ಆರಿಗೆಯೂ. ಮಾಡಿದರೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಭಕ್ತಿಯ ಮಾಡಿದರೆ ಮಾಡಬಹುದು ; ಲಿಂಗಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಲಿಂಗಭಕ್ತಿಯ ಮಾಡಿದರೆ ಮಾಡಬಹುದು ; ಜಂಗಮಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಜಂಗಮಭಕ್ತಿಯ ಮಾಡಿದರೆ ಮಾಡಬಹುದು
ಪ್ರಸಾದಭಕ್ತಿಯ ಮಾಡಬಾರದಯ್ಯ ಆರಿಗೆಯೂ. ಇಂತೀ ಚತುರ್ವಿಧ ಭಕ್ತಿಯ ಭೇದವನರಿದು ಇಂಬುಗೊಂಡ ಸಂಗನಬಸವಣ್ಣನೆಂಬ ಸದ್‍ಭಕ್ತಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.