ಗುರುಲಿಂಗಮೋಹಿತನಾದಡೆ ಮಾತಾಪಿತರ ಮೋಹವ
ಗೋಚರ
ಲೇಖಕರು: ಲೇಖಕರ ಕೃತಿಗಳು
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಈ ಕೃತಿಯ ಪುಟಗಳು
ಗುರುಲಿಂಗಮೋಹಿತನಾದಡೆ
ಮಾತಾಪಿತರ
ಮೋಹವ
ಮರೆಯಬೇಕು.
ಗುರುಲಿಂಗಭಕ್ತನಾದಡೆ
ಪೂರ್ವಬಂಧುಪ್ರೇಮವ
ಮಾಡಲಾಗದು.
ಗುರುಲಿಂಗಪೂಜಕನಾದಡೆ
ಅನ್ಯಪೂಜೆಯ
ಮಾಡಲಾಗದು.
ಗುರುಲಿಂಗವೀರನಾದಡೆ
ಗುರುಲಿಂಗಾಚಾರದಲ್ಲಿ
ನಡೆಯಬೇಕು.
ಗುರುಲಿಂಗಪ್ರಸಾದಿಯಾದಡೆ
ಗುರ್ವಾಜ್ಞೆಯ
ಮೀರಲಾಗದು.
ಗುರುಲಿಂಗಪ್ರಾಣಿಯಾದಡೆ
ಮಾನವರ
ಸೇವೆ
ಮಾಡಲಾಗದು.
ಇದು
ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ
ಈ
ಆರು
ಸಹಿತ
ಗುರುಲಿಂಗಭಕ್ತಿ.