ಗುರುವಾದುದು ತಪ್ಪು, ಲಿಂಗವಾದುದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವಾದುದು ತಪ್ಪು
ಲಿಂಗವಾದುದು ತಪ್ಪು
ಜಂಗಮವಾದುದು ತಪ್ಪು. ಈ ತ್ರಿವಿಧ ಭೇದದ ಸಂಬಂಧದ ಸಕೀಲವ
ಸಂಚದ ನಿಕ್ಷೇಪವ ಅರಿತರೆ ಈ ಲೋಕವೇನು ? ಆ ಲೋಕವೇನು ? ಈರೇಳುಭುವನ ಹದಿನಲ್ಕುಲೋಕದ ನಿಸ್ಸಾರಾಯವ ಬಿಟ್ಟು
ತನ್ನೊಳಗೆ ಇದ್ದ ಲಿಂಗಸಾರಾಯದ ಯೋಗಿಯಾದರೆ ಸರ್ವಾಂಗವೆಲ್ಲವೂ ಲಿಂಗ
ಇದ್ದುದೆ ಕೈಲಾಸ
ಕೂಡಲಚೆನ್ನಸಂಗಮದೇವ