ವಿಷಯಕ್ಕೆ ಹೋಗು

ಗುರುವಿಂಗೆ ನೀನೆ ಕರ್ತ,

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಗುರುವಿಂಗೆ ನೀನೆ ಕರ್ತ
ಲಿಂಗಕ್ಕೆ ನೀನೆ ಕರ್ತ
ಜಂಗಮಕ್ಕೆ ನೀನೆ ಕರ್ತ
ಪ್ರಸಾದಕ್ಕೆ ನೀನೆ ಕರ್ತ
ಉಪದೇಶಕ್ಕೆ ನೀನೆ ಕರ್ತ. ಕೂಡಲಸಂಗಮದೇವರು ಸಾಕ್ಷಿಯಾಗಿ
ಎನಗೆಯೂ ನೀನೆ ಕರ್ತನಾದ ಕಾರಣ
ನಾನು ಬೇಕೆನಲಮ್ಮೆ ಬೇಡೆನಲಮ್ಮೆ ಕಾಣಾ
ಚೆನ್ನಬಸವಣ್ಣಾ.