ಗುರುವಿಂದಾಯಿತ್ತೆಂಬೆನೆ ? ಗುರುವಿಂದಾಗದು.
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುವಿಂದಾಯಿತ್ತೆಂಬೆನೆ ? ಗುರುವಿಂದಾಗದು. ಲಿಂಗದಿಂದಾಯಿತ್ತೆಂಬೆನೆ ? ಲಿಂಗದಿಂದಾಗದು. ಜಂಗಮದಿಂದಾಯಿತ್ತೆಂಬೆನೆ ? ಜಂಗಮದಿಂದಾಗದು. ಪಾದೋದಕದಿಂದಾಯಿತ್ತೆಂಬೆನೆ ? ಪಾದೋದಕದಿಂದಾಗದು. ಪ್ರಸಾದದಿಂದಾಯಿತ್ತೆಂಬೆನೆ ? ಪ್ರಸಾದದಿಂದಾಗದು. ತನ್ನಿಂದ ಅಹುದು
ತನ್ನಿಂದ ಹೋಹುದು ಕಾಣಾ ಕೂಡಲಚೆನ್ನಸಂಗಮದೇವಾ.