ಗುರುವೆಂಬ ತೆತ್ತಿಗನು ಲಿಂಗವೆಂಬಲಗನು
ಗೋಚರ
ಲೇಖಕರು: ಅಕ್ಕ ಮಹಾದೇವಿ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಗುರುವೆಂಬ ತೆತ್ತಿಗನು ಲಿಂಗವೆಂಬಲಗನು ಮನನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದಿದೆ ಗೆಲಿದೆ ಕಾಮನೆಂಬವನ
ಕ್ರೋಧಾದಿಗಳು ಕೆಟ್ಟು
ವಿಷಯಂಗಳೋಡಿದವು. ಅಲಗು ಎನ್ನೊಳು ನಟ್ಟು ಆನಳಿದ ಕಾರಣ ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ.