ಗುರುವೆ ಲಿಂಗವೆಂದರಿದೆನಾಗಿ
ಲಿಂಗದಲ್ಲಿ ನಿಲವ ಕಂಡೆ. ಲಿಂಗವೆ ಜಂಗಮವೆಂದರಿದೆನಾಗಿ
ಜಂಗಮದಲ್ಲಿ ಲಿಂಗದ ನಿಲವ ಕಂಡೆ. ಜಂಗಮವೇ ನೀವೆಂದರಿದೆನಾಗಿ
ನಿಮ್ಮಲ್ಲಿ ಜಂಗಮದ ನಿಲವ ಕಂಡೆ. ನೀವೇ ಪ್ರಸಾದವೆಂದರಿದೆನಾಗಿ
ಪ್ರಸಾದದಲ್ಲಿ ನಿಮ್ಮ ನಿಲವ ಕಂಡೆ. ಪ್ರಸಾದವೇ
ನಾನೆಂದರಿದೆನಾಗಿ
ಎನ್ನೊಳಗೆ ನಿಮ್ಮ ಮಹಾಪ್ರಸಾದದ ನಿಲವ ಕಂಡೆನಯ್ಯ ಅಖಂಡೇಶ್ವರಾ.