ಗುರುವೆ ಸದಾಶಿವ, ಗುರುವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುವೆ ಸದಾಶಿವ
ಗುರುವೆ ಮಹಾಮಹಿಮ
ಗುರುವೆ ಅಕಲ್ಪಿತ ನಿತ್ಯ ನಿರವಯ. ಸಾಕಾರವಿಡಿದು ಗುರುಲಿಂಗವಾದ; ನಿರಾಕಾರವಿಡಿದು ಪ್ರಾಣಲಿಂಗವಾದ; ಉಭಯಸ್ಥಲ ಏಕವಾದಲ್ಲಿ ಭವವಿರಹಿತಭಕ್ತ ಜೀವನ್ಮುಕ್ತನಾದ. ಅಂತು ಗುರು ನಿಂದ ಸ್ಥಾನ
ಕಾಶೀಕ್ಷೇತ್ರ. ಗುರುಚರಣ ಪ್ರಕ್ಷಾಲನೋದಕವೆ ಗಂಗಾತೀರ್ಥ. ಗುರುಲಿಂಗ ಸಾಕ್ಷಾತ್ ಪರಶಿವನಿಂದ ವಿಶೇಷ. ಗುರುದರ್ಶನ ಪರಮಪೂಜೆ
ಗುರುಪಾದ ರುದ್ರಗಾಯತ್ರಿ; ಗುರುವಿನಿಂದತಿಶಯ ಫಲವೇನೂ ಇಲ್ಲ. ಕೂಡಲಚೆನ್ನಸಂಗಯ್ಯಾ
ಎನ್ನ ಪರಮಗುರು ಬಸವಣ್ಣನ ಶ್ರಿಪಾದಕ್ಕೆ ನಮೋ ನಮೋ ಎಂಬೆನು.