ಗುರುವ ಭವಿಯೆಂಬೆ
ಲಿಂಗವ ಭವಿಯೆಂಬೆ
ಜಂಗಮವ ಭವಿಯೆಂಬೆ
ಪ್ರಸಾದವ ಭವಿಯೆಂಬೆ. ಅದೇನು ಕಾರಣವೆಂದರೆ; ಇವಕ್ಕೆ ಉಪದೇಶವ ಕೊಟ್ಟವರಿಲ್ಲವಾಗಿ
ಇವಕ್ಕೆ ಸಾಮಿಪ್ಯ ಸಂಬಂಧವಿಲ್ಲಾಗಿ. ಅದೆಂತೆಂದಡೆ; `ನಾಸ್ತಿ ತತ್ವಂ ಗುರೋಃ ಪರಂ ಎಂಬುದಾಗಿ. ಅದಕ್ಕೆ ಮತ್ತೆಯೂ; ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಎಂಬುದಾಗಿ. ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ಭವಿಯಾಗಿ ಭವಿಯ ಬೆರಸಬೇಕು.