ಗುರು ಉಂಟೆಂಬವಂಗೆ ಗುರುವಿಲ್ಲ
ಲಿಂಗ ಉಂಟೆಂಬವಂಗೆ ಲಿಂಗವಿಲ್ಲ
ಜಂಗಮ ಉಂಟೆಂಬವಂಗೆ ಜಂಗಮವಿಲ್ಲ
ಪ್ರಸಾದ ಉಂಟೆಂಬವಂಗೆ ಪ್ರಸಾದವಿಲ್ಲ. ಗರುವಿಲ್ಲವೆಂಬವಂಗೆ ಗುರು ಉಂಟು
ಲಿಂಗವಿಲ್ಲವೆಂಬವಂಗೆ ಲಿಂಗ ಉಂಟು
ಜಂಗಮವಿಲ್ಲವೆಂಬವಂಗೆ ಜಂಗಮವುಂಟು
ಪ್ರಸಾದವಿಲ್ಲವೆಂಬವಂಗೆ ಪ್ರಸಾದವುಂಟು. ಇದು ಕಾರಣ
ಕೂಡಲಚೆನ್ನಸಂಗಯ್ಯಾ
ತಾನಿಲ್ಲೆಂಬವಂಗೆ ತಾನುಂಟು.