ಗುರು ನೆನೆದ ಕರುಣಿಸಿಕೊಟ್ಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರು ಕರುಣಿಸಿಕೊಟ್ಟ ಮಂತ್ರವೆ ಸಕಲಬಯಕೆಯನುಂಟುಮಾಡುವುದಲ್ಲದೆ
ತನ್ನ ತಾ ನೆನೆದ ಮಂತ್ರವು ಸಿದ್ಧಿಯನುಂಟುಮಾಡದು ನೋಡಾ ! ಗುರುಕೊಟ್ಟ ಲಿಂಗವೆ ಮುಕ್ತಿಯನೀವುದಲ್ಲದೆ
ತನ್ನ ತಾನೆ ಕಟ್ಟಿಕೊಂಡ ಲಿಂಗವು ಮುಕ್ತಿಯನೀಯದು ನೋಡಾ ! ಇದು ಕಾರಣ
ಗುರೂಪದೇಶವ ಪಡೆಯಲರಿಯದೆ ಬರಿದೆ ಭಕ್ತರೆನಿಸಿಕೊಂಬ ಶೈವಮತದ ಭವಿಗಳಿಗೆ ಭವಜಾಲದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.