ಗುರು ಲಿಂಗ ಜಂಗಮವೇಕವಾದುದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರು ಲಿಂಗ ಜಂಗಮವೇಕವಾದುದೆ ಗುರುವಲ್ಲದೆ
ಪಿತ-ಮಾತೆ
ಸತಿ-ಸುತ
ಅತ್ತೆ-ಮಾವ ಇದಲ್ಲದೆ ಯೋಗಿ-ಜೋಗಿ
ಶ್ರವಣ-ಸನ್ಯಾಸಿ
ಕಾಳಾಮುಖಿ-ಪಾಶುಪತಿ ಎಂಬ ಷಡುದರ್ಶನದ ಶೈವಕರ್ಮಿಗಳ `ಗುರುವು ಗುರುವು' ಎಂಬುದಕ್ಕೆ ನಾಚದವರನೇನೆಂಬೆನಯ್ಯಾ ? ಆ ಮಹಾಘನಗುರುವಿಂಗೆ
ಇಂತಿವರನೆಲ್ಲರ ಸರಿಗಂಡಡೆ ಒಂದೆ ಎಂದು ನುಡಿದಡೆ
ಅಘೋರನರಕ ತಪ್ಪದಯ್ಯಾ ಕೂಡಲಚೆನ್ನಸಂಗಮದೇವಾ.