ಗೇಣುದ್ದ ಒಡಲೊಳಗೆ ಬೆಟ್ಟದುದ್ದ ಮಾತು ಹುಟ್ಟಿತ್ತು ನೋಡ. ಬೆಟ್ಟದುದ್ದ ಮಾತೆಲ್ಲ ಏತಕಯ್ಯಯೆಂದರೆ- ಗೇಣುದ್ದ ಒಡಲ ಹೂಣುವದಕ್ಕಾಗಿ ಕಾಣಾ. ವಾಚಾಳತ್ವದಿಂದ ಉದರವ ಹೊರೆವವರೆಲ್ಲಾ ಗುರುವೆ? ಇಂದ್ರಿಯಂಗಳಿಗೊಂದೊಂದು ಮಾತಕಲಿತು ಸದಾಶಿವನ ಸಂಧಿಸಿ ಸರ್ವರಿಗೆ ತೋರಿಹೆನೆಂಬರು
ತಾವೇಕೆ ಕಾಣರೋ? ತಾವು ಕಾಣದೆ
ತಮ್ಮಲ್ಲಿ ವಸ್ತು ವಿವೇಕವಿಲ್ಲದೆ ಅನ್ಯರಿಗೆ ಹೇಳುವ ಬೋಧೆ
ಅದು ಅವಿಚಾರ ಕಾಣ. ಗುರುತತ್ವದ ಬಲ್ಲ ಗುರು ಶುದ್ಧ ಚಿದ್ರೂಪನು. ಚಿನ್ಮಯನು ನೋಡಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.