ವಿಷಯಕ್ಕೆ ಹೋಗು

ಗೋಸುಂಬೆ ಬಣ್ಣಕ್ಕೆ ಹುಳದಂತೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಗೋಸುಂಬೆ
ಹುಳದಂತೆ
ಬಹುವೇಷಧಾರಿಯಲ್ಲ
ಶರಣ.
ಇಂದ್ರಧನುವಿನಂತೆ
ಚಂದದ
ಬಣ್ಣಕ್ಕೆ
ಮೋಹಿಯಲ್ಲ
ಶರಣ.
ಹಿಂದುಮುಂದಣ
ನೆನೆವ
ಹಾರುವನಲ್ಲ
ಶರಣ.
ಆನಂದಭರಿತ
ಶರಣನ
ಏನೆಂದುಪಮಿಸಬಹುದಯ್ಯಾ
ಅಖಂಡೇಶ್ವರಾ.