ಘಟದೊಳಗಿದ್ದ ಪದಾರ್ಥವು, ಆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘಟದೊಳಗಿದ್ದ ಪದಾರ್ಥವು
ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು. ಹಾಗೆ_ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರಬಲದಿಂದ ಹೊರಹೊರಟಲ್ಲದೆ
ಅಂತರಂಗದಲಿರ್ದ ಭವರೋಗ ಮಾಣದು. ಇದು ಕಾರಣ
ಕೂಡಲಚೆನ್ನಸಂಗಮದೇವಾ. ಅರ್ಚನ ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ.