ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘಟನಾಘಟನಸಮರ್ಥನಪ್ಪ ಶ್ರಿಗುರುವಿನ ಪ್ರಸಾದದಿಂದಲ್ಲದೆ
ಮಾಯೆಗೆ ಮರುಳಾದ ನರಜೀವಿಗಳ ಬಹಿರಂಗದ ಬರಿಯಸಂಸ್ಕಾರ ಮಾತ್ರದಿಂದ ಭವಿ ಭಕ್ತನಪ್ಪನೆ ? ಸೊಡ್ಡಳದೇವನ ಶುಭವಪ್ಪ ನೋಟದಿಂದ ಇಟ್ಟಿಯ ಹಣ್ಣುಗಳು ಸಿಹಿಯಾದುವಲ್ಲದೆ
ಲೋಕದ ಕಾಕುಮಾನವರ ನೋಟಮಾಟದಿಂದ ಸಿಹಿಯಾದುವೆ ? ಅದು ಕಾರಣ_ಅಂತಪ್ಪ ಸಾಮಥ್ರ್ಯವಿಲ್ಲದೆ ಕಡುಪಾತಕಿಗಳ ಹಿಡಿದು ತಂದು
ಲಿಂಗವ ಕೊಡಲು ಕಡೆತನಕ ಭವಿಗಳಾಗಿರ್ಪರಲ್ಲದೆ ಭಕ್ತರಾಗಲರಿಯರಯ್ಯಾ ಕೂಡಲಚೆನ್ನಸಂಗಯ್ಯಾ.