ಘನತರದಿಷ್ಟಲಿಂಗದಲ್ಲಿ ಉಬ್ಬಿ, ಅನಿಮಿಷದೃಷ್ಟಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘನತರದಿಷ್ಟಲಿಂಗದಲ್ಲಿ ಅನಿಮಿಷದೃಷ್ಟಿ ಬಲಿದು
ಮನ ಕರಗಿ
ತನು ಉಬ್ಬಿ
ಹೃದಯಕಮಲ ಪಸರಿಸಿ
ಸವಾರ್ಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲ ಉಕ್ಕಿ ಹೊರಸೂಸುತ್ತ
ಪರಮಕಾಷೆ*ಯಂತೆ ಚಿತ್ರದ ರೂಹಿನಂತೆ ಪರಬ್ರಹ್ಮಲಿಂಗದಲ್ಲಿ ಬೆರೆದು ಪರವಶಗೊಂಡಿರ್ಪ ಮಹಾಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.