ಘನಮಹಾಲಿಂಗಕ್ಕೆ ಪೂಜೆಯಾಗಿ, ಮನವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘನಮಹಾಲಿಂಗಕ್ಕೆ ಮನವೆ ಪೀಠವಾಗಿ
ತನುವೆ ಶಿವಾಲಯವಾಗಿ
ನೆನವೆ ಪೂಜೆಯಾಗಿ
ಧ್ಯಾನವೆ ತೃಪ್ತಿಯಾಗಿ
ಅಂಬುದ್ಥಿಯೊಳಗೆ ಮುಳುಗಿದ ಪೂರ್ಣಕುಂಭದಂತೆ
ನಿಮ್ಮ ಅವಿರಳ ದಿವ್ಯ ಮಹಾಬೆಳಗಿನೊಳಗೆ ಮುಳುಗಿ
ನಾನು ನೀನೆಂಬುಭಯದ ಕುರುಹ ಮರೆದು ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ.