ಘ್ರಾಣೇಂದ್ರಿಯವಿಷಯದಿಂದೆ ಮತ್ಸ್ಯಕೆಡುವುದು ಭ್ರಮರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಘ್ರಾಣೇಂದ್ರಿಯವಿಷಯದಿಂದೆ
ಭ್ರಮರ
ಕೆಡುವುದು
ಸಂಪಿಗೆಯ
ಪುಷ್ಪದಲ್ಲಿ.
ರಸನೇಂದ್ರಿಯವಿಷಯದಿಂದೆ
ಮತ್ಸ್ಯಕೆಡುವುದು
ಜಾಲಗಾರನ
ಬಲೆಯಲ್ಲಿ.
ನಯನೇಂದ್ರಿಯವಿಷಯದಿಂದೆ
ಪತಂಗ
ಕೆಡುವುದು
ದೀಪದ
ಜ್ವಾಲೆಯಲ್ಲಿ
ತ್ವಗೀಂದ್ರಯವಿಷಯದಿಂದ
ಗಜ
ಕೆಡುವುದು
ರಾಜನ
ಕೃತಕದಲ್ಲಿ.
ಶ್ರವಣೇಂದ್ರಿಯವಿಷಯದಿಂದೆ
ಎರಳೆ
ಕೆಡುವುದು
ಬೇಟೆಗಾರನ
ಸರಳಿನಲ್ಲಿ.
ಇಂತೀ
ಪ್ರಾಣಿಗಳು
ಒಂದೊಂದು
ವಿಷಯದಿಂದೆ
ಬಂಧನಕ್ಕೊಳಗಾದವು.
ಇಂತಪ್ಪ
ಪಂಚೇಂದ್ರಿಯವಿಷಯವ್ಯಾಪಾರದಲ್ಲಿ
ಲಂಪಟರಾದ
ಮನುಜರು
ಕೆಟ್ಟ
ಕೇಡನೇನೆಂಬೆನಯ್ಯ
ಅಖಂಡೇಶ್ವರಾ
?