ಚಂದ್ರಚಕೋರಿ - ಅಂದಗಾತಿ ಕಣ್ಣ ತುಂಬ

ವಿಕಿಸೋರ್ಸ್ದಿಂದ

ಹಾಡು : ಅಂದಗಾತಿ
ಸಂಗೀತ : ಎಸ್.ಎ.ರಾಜ್‌ಕುಮಾರ್‌
ಗಾಯನ : ಹರಿಹರನ್‌ & ಕೋರಸ್
ಸಾಹಿತ್ಯ : ಎಸ್.ನಾರಾಯಣ್

ಅಂದಗಾತಿ ಕಣ್ಣ ತುಂಬ ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ ಬಣ್ಣ ಬಣ್ಣ ಚಿತ್ತಾರ||೨||

ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ

ಜನನ ಜನನ ಜನ ಜನನ ಜನನ ಜನ
ಜನನನನನನ ಜನನನನನನ ||೨||

ಅಂದಗಾತಿ ಕಣ್ಣ ತುಂಬ ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ ಬಣ್ಣ ಬಣ್ಣ ಚಿತ್ತಾರ

ಧೀಂತ ಚಕಧಿಂ ತಕ ಚಕಧಿಂ
ಧೀಂತ ಚಕಧಿಂ ತಕ ಚಕಧಿಂ
ಧೀಂತ ಚಕಧಿಂ ತಕ ಚಕಧಿಂ
ಧೀಂತ ಚಕಧಿಂ ತಕ ಚಕಧಿಂ

ಗಮಗಮ ಗಮಗಮ
ರಿಮರಿಮ ರಿಮರಿಮ
ಸರಿಸನಿಸ
ಸಸ ಸಮಗಮಗಮ ಗಮರಿಪಗರಿಗ
ಸರಿಸನಿಸ

ಸ ರಿ ಗ ಆ...

ಪೂರ್ಣಚಂದ್ರನೆದೆಯಿಂದ ಬೆಳ್ಳಿತುಣುಕು ಚದುರಿತ್ತು
ಅಂದವಾದ ಬೊಂಬೆಯೊಂದು ಅದರಿಂದ ಮೂಡಿತ್ತು
ಅಮರಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮ ಮೈಮರೆತು ಶರಣಾದ

ಓ… ಓ… ಓ… ಓ… ಓ…
ಓ… ಓ… ಓ… ಓ… ಓ…

ಮಿಂಚು ಮಿಂಚುವ ಸಿಂಚನವೆ
ಮಿಡಿಯುವ ಹೃದಯಕೆ ಕಂಪನವೆ
ಭಾವನೆ ಅಲೆಗಳ ಇಂಚರವೆ
ಗಂಧದ ಚಲುವಿನ ಆದರವೆ
ಕೋಟಿ ತಾರೆ ಒಟ್ಟಿಗೆ ಸೇರಿ
ವೇದ ಮಂತ್ರ ಘೋಷವ ಸಾರಿ
ಜೀವ ತುಂಬಿ ತಂದರು ನಿನ್ನಾ
ಪ್ರೀತಿಸಲು ನನ್ನಾ

ಅಂದಗಾತಿ ಕಣ್ಣ ತುಂಬ ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ ಬಣ್ಣ ಬಣ್ಣ ಚಿತ್ತಾರ

ಧಿರನ ನನ ಧಿರನ
ನನ ಧಿರನನ ಧಿರನನ
ಧಿರನ ನನ ಧಿರನ
ನಗಿನ ನಗಿನ ನನ
ಧಿರನನ ಧಿರನನ

ಚಂ ಚಂ ಚಂ

ಮೇಘದೂತ ಕಾವ್ಯದಲಿ
ಶಾಕುಂತಲೆ ಪುಟಗಳಲಿ
ಕಾಳಿದಾಸ ಮರೆತು ಹೋದ
ಪದವೊಂದು ನೀನೇನಾ
ಇಂದ್ರಲೋಕ ವೈಭವದಿ
ಕೋಟಿ ಸುಖದ ಸ್ವಪ್ನದಲಿ
ಕೊರತಿವೊಂದು ಬಂತು
ಅದು ನೀನೇನಾ ನೀನೇನಾ

ಓ… ಓ… ಓ… ಓ… ಓ…
ಓ… ಓ… ಓ… ಓ… ಓ…

ಪದಗಳೆ ನಾಚುವ ಕವನವು ನೀ
ಕವಿಗಳಿಗೆಟುಲದ ಕಲ್ಪನೆ ನೀ
ಕುಂಚವೆ ನಾಚುವ ಚಿತ್ರವು ನೀ
ಬಣ್ಣಗಳಿಲ್ಲದೆ ಮಿನುಗುವೆ ನೀ
ಏನ ಹೇಳಿ ಹೊಗಳಲಿ ನಿನ್ನ
ಮಾತುಗಳೇ ಮುಗಿದವು ಚಿನ್ನ
ಮೌನವಾಗಿ ನಿಂತರು ನಿನ್ನ
ಅಂದವು ಕಾಡುತಿದೆ

ಅಂದಗಾತಿ ಕಣ್ಣ ತುಂಬ ಚೆಲ್ಲಿ ಚೆಲ್ಲೊ ವಯ್ಯಾರ
ಸೂರ್ಯಕಾಂತಿ ಕೆನ್ನೆ ತುಂಬ ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬ ನಾಗಿಣಿ ಶೃಂಗಾರ
ನಗುವಿನ ತುಂಬ ಹುಣ್ಣಿಮೆ ಸಿಂಧೂರ
ನಿನ ತುಂಬಿಕೊಂಡ ನನ್ನ ಎದೆಯಲ್ಲಿ ಝೇಂಕಾರ

ಜನನ ಜನನ ಜನ ಜನನ ಜನನ ಜನ
ಜನನನನನನ ಜನನನನನನ ||೨||