ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಚಂದ್ರಮಂಡಲದಲ್ಲಿ ರವಿ ಅಗ್ನಿಯೋಕುಳಿಯನಾಡುವದ ಹಿಂದಳ ಕೇರಿಯವರು ಕಂಡು ಮುಂದಳೂರವರಿಗೆ ಮೊರೆಯ ಹೇಳುತ್ತಿದಾರೆ ನೋಡಿರೇ. ಮುಂದಳೂರವರೆಲ್ಲಾ ರವಿಯೋಕುಳಿಯ ಸಂಗದಿಂದ ಮಂಗಳ ಮುಂಗಳವೆನುತ ಶಿವಲಿಂಗೈಕ್ಯರಾದುದ ಕಂಡೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.