ಚಂದ್ರಮನ ಕಾಂಬಡೆ ಆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಚಂದ್ರಮನ
ಕಾಂಬಡೆ
ಆ
ಚಂದ್ರನಿಂದೊದಗಿದ
ಬೆಳಗೆ
ಮುಖ್ಯ.
ಸೂರ್ಯನ
ಕಾಂಬಡೆ
ಆ
ಸೂರ್ಯನಿಂದೊದಗಿದ
ಬೆಳಗೆ
ಮುಖ್ಯ.
ಜ್ಯೋತಿಯ
ಕಾಂಬಡೆ
ಆ
ಜ್ಯೋತಿಯಿಂದೊದಗಿದ
ಬೆಳಗೆ
ಮುಖ್ಯ.
ರತ್ನವ
ಕಾಂಬಡೆ
ಆ
ರತ್ನದಿಂದೊದಗಿದ
ಬೆಳಗೆ
ಮುಖ್ಯ.
ನಮ್ಮ
ಗುಹೇಶ್ವರಲಿಂಗವ
ಕಾಂಬಡೆ
ಆ
ಮಹಾವಸ್ತುವಿನ
ಪರಮ
ಪ್ರಕಾಶದಿಂದೊದಗಿದ
ಭಸಿತವೇ
ಮುಖ್ಯ
ಕಾಣಿರಣ್ಣಾ.