ಚಿತ್ತನ ಮನೆಯಲ್ಲಿ ಸತ್ತಿಪ್ಪವನಿವನಾರೋ?
ಗೋಚರ
ಲೇಖಕರು: ತೊಂಟದ ಸಿದ್ಧಲಿಂಗೇಶ್ವರ ಶಿವಯೋಗಿಗಳು
ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಚಿತ್ತನ ಮನೆಯಲ್ಲಿ ಸತ್ತಿಪ್ಪವನಿವನಾರೋ? ಸತ್ತವನ ನೋಡಿ
ಎತ್ತಹೋದರೆ
ಎತ್ತಹೋದವ ಸತ್ತು
ಸತ್ತವನೆದ್ದು ಕೂಗುತ್ತಿದ್ದಾನೆ. ಈ ಚಿತ್ರವನೇನೆಂಬೆನೋ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.