Library-logo-blue-outline.png
View-refresh.svg
Transclusion_Status_Detection_Tool

ಚಿದಾನಂದಸುಖಮಯವಪ್ಪ ವಸ್ತುವಿಂಗೆ, ಇಂದ್ರಿಯಾನಂದ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಚಿದಾನಂದಸುಖಮಯವಪ್ಪ ವಸ್ತುವಿಂಗೆ
ಇಂದ್ರಿಯಾನಂದ ಹೊದ್ದಿದಡೆ ನಾ ನೊಂದೆನಯ್ಯ. ನಾನು ಬೆಂದೆನಯ್ಯ. ನಾನು ಚಿದಾನಂದಸ್ವರೂಪನು. ಈ ಅನಾನಂದವಿದೇನೋ? ಇದು ಕಾರಣ
ಅನಾಯತವಪ್ಪ ಇಂದ್ರಿಯವಿಕಾರವ ಮಾಣಿಸಯ್ಯ ಎನ್ನ ತಂದೆ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.