ಛಲವಿರಬೇಕು ಹಿಡಿದು ಶಿವಭಕ್ತಿಯ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ ಹಿಡಿದುಬಿಡೆನೆಂಬ
ಛಲವಿರಬೇಕು ನಿತ್ಯನೇಮದಲ್ಲಿ ಹಿಡಿದು ಬಿಡೆನೆಂಬ
ಛಲವಿರಬೇಕು ಶೀಲವ್ರತದಲ್ಲಿ ಹಿಡಿದು ಬಿಡೆನೆಂಬ
ಛಲವಿರಬೇಕು ನಮ್ಮ ಅಖಂಡೇಶ್ವರಲಿಂಗವ ಕೂಡ
ಎಂದೆಂದೂ ಅಗಲಬಾರದೆಂಬ ನೈಷೆ*ಯಲ್ಲಿ.