ಜಂಗಮಭಕ್ತನು ಗಂಡನು?್ಳ ಸಜ್ಜನಸತಿಯಂತಿರಬೇಕು.
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಜಂಗಮಭಕ್ತನು ಗಂಡನು?್ಳ ಸಜ್ಜನಸತಿಯಂತಿರಬೇಕು. ಹೊಯ್ದಡೆ ಬಯ್ದಡೆ ಜರಿದಡೆ ಕೋಪಿಸಿದಡೆ ನಿಂದಿಸಿದಡೆ ಅಳಲಿಸಿದಡೆ ಬಳಲಿಸಿದಡೆ ಹುರುಡಿಸಿದಡೆ_ ಇಂತಿವು ಮೊದಲಾಗಿ ಏನೊಂದು ಮಾಡಿದಡೆಯೂ ಮನದಲ್ಲಿ ಮರುಗಿದಡೆ ಇದಿರುತ್ತರ ಕೊಟ್ಟಡೆ ಆ ಸಜ್ಜನಸತಿಯ ಗುಣಕ್ಕೆ ಕೊರತೆಯಹುದು. ಆ ಪುರುಷನೆ ದೈವವೆಂದರಿವುದು
ಅವನ ಗುಣವ ನೋಡದೆ
ತನ್ನ ಗುಣವ ಬಿಡದೆ ಇದ್ದಡೆ ಪತಿವ್ರತೆ ಎನಿಸುವಳು
ಮೇಲೆ ಮುಕ್ತಿಯಪ್ಪುದು. ಈ ಪತಿವ್ರತೆಯಂತೆ ಜಂಗಮದಾಸೋಹವ ಮಾಡುವ ಭಕ್ತರು ಜಂಗಮ ಮಾಡಿದಂತೆ ಮಾಡಿಸಿಕೊಂಬುದು
ನಿರುತ್ತರದಲ್ಲಿಪ್ಪುದು. ಹೀಂಗಿರದೆ
ಜಂಗಮಕ್ಕೆ ಇದಿರುತ್ತವ ಕೊಟ್ಟಡೆ
ಅವರಿಗೆ ಮಾಡುವ ಭಕ್ತಿಯ ಸಾಮಾನ್ಯವ ಮಾಡಿದಡೆ ತಾ ಹಿಂದೆ ಮಾಡಿದ ಭಕ್ತಿಯೆಲ್ಲ ಬೆಂದುಹೋಗಿ ಮುಂದೆ ನರಕಕ್ಕೆ ಗುರಿಯಹುದು ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ