Library-logo-blue-outline.png
View-refresh.svg
Transclusion_Status_Detection_Tool

ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ ಆರೋಗಿಸಿ ಕೊಡುವುದು ನೋಡಾ ! ಜಂಗಮದಾಪ್ಯಾಯನವೆ ಲಿಂಗದಾಪ್ಯಾಯನ ನೋಡಾ ! ಜಂಗಮತೃಪ್ತಿಯೆ ಲಿಂಗತೃಪ್ತಿನೋಡಾ ! ಜಂಗಮವಾರೋಗಿಸಿ ಡರ್ರನೆ ತೇಗಿದಡೆ ಂಗೈಯಲೆರಗುವುದು ನಮುಕ್ತಿಫ ನೋಡಾ ! ಜಂಗಮಮುಖದಲು ತೃಪ್ತನಾದನೆಂದು `ಬಾರಯ್ಯಾ ಬಸವ್ಡ ಎಂದು ಕೈವಿಡಿದು
ತೆಗೆದಪ್ಪಿ ಮುದ್ದಾಡಿ
ತಕ್ಕೈಸಿಕೊಂಡು
ನಿನ್ನ ಹೊರಗಿರಿಸಲಾರೆನೆಂದು ತನ್ನ ಹೃದಯಕಮಲದಲ್ಲಿ ಇಂಬಿಟ್ಟುಕೊಂಡು ಕೂಡಲಚೆನ್ನಸಂಗಯ್ಯಂಗೆ ಬಸವ ಪ್ರಾಣಲಿಂಗವಾದ.