ಜಂಗಮಲಿಂಗಮೋಹಿತನಾದಡೆ ತನ್ನ ಕುಲಗೋತ್ರಮೋಹವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮಲಿಂಗಮೋಹಿತನಾದಡೆ
ತನ್ನ
ಕುಲಗೋತ್ರಮೋಹವ
ಮರೆಯಬೇಕು.
ಜಂಗಮಲಿಂಗಭಕ್ತನಾದಡೆ
ಪೂರ್ವಕುಲವ
ಬೆರಸಲಾಗದು.
ಜಂಗಮಲಿಂಗಪೂಜಕನಾದಡೆ
ಮಾನವರನು
ಉಪಧಾವಿಸಲಾಗದು.
ಜಂಗಮಲಿಂಗವೀರನಾದಡೆ
ಅರ್ಥವ
ಕಟ್ಟಲಾಗದು.
ಜಂಗಮಲಿಂಗಪ್ರಸಾದಿಯಾದಡೆ
ಬೇಡಿದಡೆ
ಇಲ್ಲೆನ್ನಲಾಗದು.
ಜಂಗಮಲಿಂಗಪ್ರಾಣಿಯಾದಡೆ
ಲಾಂಛನದ
ನಿಂದೆಯ
ಕೇಳಲಾಗದು.
ಇದು
ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ

ಆರು
ಸಹಿತ
ಜಂಗಮಲಿಂಗಭಕ್ತಿ.