ಜಂಗಮವೆ ಲಿಂಗ, ಲಿಂಗವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮವೆ ಲಿಂಗ
ಲಿಂಗವೆ ಜಂಗಮವೆಂದು ತೋರಿ ನಿಜಲಿಂಗೈಕ್ಯನಾದೆಯಲ್ಲಾ ನಿಜಗುರು ಬಸವಣ್ಣಾ. ಪ್ರಸಾದವೆ ಕಾಯ
ಕಾಯವೆ ಪ್ರಸಾದವೆಂಬುದ ಎನ್ನ ಸರ್ವಾಂಗದಲ್ಲಿ ಪ್ರತಿಷಿ*ಸಿ
ಎನ್ನನಾಗುಮಾಡಿ ಮುಂದುವರಿದೆಯಲ್ಲಾ ಬಸವಣ್ಣಾ. ನಿಜಲಿಂಗವ ಎನ್ನಂಗದಲ್ಲಿ ಸ್ಥಾಪಿಸಿ ಎನ್ನ ನಿನ್ನಂತೆ ಮಾಡಿ ನಿಜಲಿಂಗದೊಳು ನಿರವಯವಾದೆಯಲ್ಲಾ ಬಸವಣ್ಣಾ. ಎನ್ನ ಮನವ ಮಹದಲ್ಲಿ ಲಯಮಾಡಿ ನಿರ್ವಯಲಾಗಿ ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ. ನಿಮ್ಮ ಒಕ್ಕುಮಿಕ್ಕಪ್ರಸಾದವನಿಕ್ಕಿ ನಿರಂತರದಲ್ಲಿ ಆಗುಮಾಡಿ ನಾಗಾಯವ್ವೆಯನಿಂಬುಕೊಂಡೆಯಲ್ಲಾ
ಬಸವಣ್ಣಾ. ಎನ್ನ ಮನ ನಿಮ್ಮ ಪಾದದಲ್ಲಿ ಕರಗಿತ್ತಯಾ
ಬಸವಣ್ಣಾ. ಕೂಡಲಚೆನ್ನಸಂಗಯ್ಯಂಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾಗಿ ಹೋದೆಯಲ್ಲಾ ಸಂಗನಬಸವಣಾ