ಜಂಗಮ ಘನವೆಂಬೆನೆ? ಬೇಡಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಗಮ
ಘನವೆಂಬೆನೆ?
ಬೇಡಿ
ಕಿರಿದಾಯಿತ್ತು.
ಲಿಂಗ
ಘನವೆಂಬೆನೆ?
ಕಲುಕುಟಿಗನ
ಕೈಯಲ್ಲಿ
ಮೂಡಿಸಿಕೊಂಡು
ಕಿರಿದಾಯಿತ್ತು.
ಭಕ್ತ
ಘನವೆಂಬೆನೆ?
ತನು_ಮನ_ಧನದಲ್ಲಿ
ವಂಚಕನಾಗಿ
ಕಿರಿದಾದ.
_ಇಂತೀ
ತ್ರಿವಿಧದಲ್ಲಿ
ಪರಿಣಾಮವಿಲ್ಲ
ಪರಮಾರ್ಥವಿಲ್ಲ.
ಘನವ
ಬಲ್ಲವರಾರೊ
ಗುಹೇಶ್ವರಾ
?