ವಿಷಯಕ್ಕೆ ಹೋಗು

ಜಂಗಮ ಜಂಗಮವೆಂದಡೆ ಜಂಗಮವೆಂದು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು
ಜಂಗಮದ ಘನವನಾರು ಅರಿಯರಲ್ಲ. ಜಂಗಮವೆಂದಡೆ ನಿರ್ನಾಮ ನಿರ್ದೇಹಿ ; ಜಂಗಮವೆಂದಡೆ ನಿರ್ಜಡ ನಿರಾವರಣ ; ಜಂಗಮವೆಂದಡೆ ನಿಃಸೀಮ ನಿರ್ಜಾತ ; ಜಂಗಮವೆಂದಡೆ ನಿರುಪಮ ನಿರ್ಭೇದ್ಯ ; ಜಂಗಮವೆಂದಡೆ ನಿರಾಳ ನಿರಾಲಂಬ ; ಜಂಗಮವೆಂದಡೆ ನಿರಂಜನ ನಿರ್ವಯಲು. ಇಂತಪ್ಪ ಸಚ್ಚಿದಾನಂದ ನಿತ್ಯಪರಿಪೂರ್ಣ ಜಂಗಮದ ಪರಮಪ್ರಸಾದವ ಕೊಂಡು ಎನ್ನ ಪ್ರಾಣದ ತೊಡಕ ಹರಿದೆನಯ್ಯ ಅಖಂಡೇಶ್ವರಾ.