ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ ಕಾಯಪುರದ ಒಂದು ಪಟ್ಟಣವ ಸಾಧಿಸುವನೆಂಬರಿಗೆ ಸಾಧ್ಯವಿಲ್ಲ ಭೇದಿಸುವೆನೆಂಬರಿಗೆ ಭೇದ್ಯವಲ್ಲ ಮರಹು ಮಹಾಕತ್ತಲೆಗಳೆಂಬ (ಕ)ರಿಗಳು ಕುಹಕವೆಂಬ ಕೊತ್ತಳ
ಮಹಾಪಾಶ ಉನ್ಮತ್ತ ಅಹಂಕಾರವೆಂಬುದೊಂದು ಆಳು ಕುದುರೆ ಇದನಾರು ಸಾಧಿಸಬಲ್ಲರಯ್ಯಾ ಪ್ರಾಣಪಂಚಾಕ್ಷರಿಯನೆ ನಿರ್ಮಿಸಿಕೊಂಡು ಹಿಂದಣಬೇರ ಕಟ್ಟೊರಿಸಿ ಕಿತ್ತು
ಮುಂದಣ ಭವಾಂಬುಧಿಯನೆಲ್ಲ ಬಿಟ್ಟು ಮನವೆಂಬ ಬಿಲ್ಲಿಗೆ ತನುವೆಂಬ ಹೆದೆಯ ಮಾಡಿಕೊಂಡು ಗುರುವೆಂಬ ಗುರಿಯ ನೋಡಿಕೊಂಡು
ಏಕಭಾವದಲ್ಲಿ ಎಸೆವುತ್ತಿರಲು ಭವಹರಿದು
ಕಾಲಕರ್ಮದ ಶಿರವರಿದು ಅಂಗವಿಕಾರವೆಂಬ ಅರಸು ಸತ್ತು
ಪಂಚಭೂತಗಳೆಲ್ಲ ಪ್ರಳಯಕ್ಕೊಳಗಾದವು. ಅಷ್ಟಮದಂಗಳ ನಷ್ಟವಾಯಿತ್ತು ಕೋಟೆ ಕೋಳು ಹೋಯಿತ್ತು
ಪಟ್ಟಣ ಸಾಧ್ಯವಾಯಿತ್ತು ಒಳಕೋಟೆಗೆ ಕಿಚ್ಚನ್ನಿಕ್ಕೆ
ಪೃಥ್ವಿ ವಿಶ್ವವೆಲ್ಲ ಬೆಂದು ಬೆಳಕಾಯಿತ್ತು_ ಇಂತಪ್ಪ ಗುರು-ಲಿಂಗ-ಜಂಗಮಕ್ಕೆ ಸಮವಾಗಿ ಸಿಕ್ಕಿತ್ತು ಸಂಸಾರಬಯಲು ಇಂತಪ್ಪ ಆ ಪ್ರಸಾದವನಾರು ಬಲ್ಲರೆಂದರೆ ಪ್ರಭುವಿನ ಬಳಿಯ ಬಸವಣ್ಣಂಗಲ್ಲದೆ ಅಳವಡದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕೂಡಲಚೆನ್ನಸಂಗಮದೇವಾ