ಜಗತ್ತೆಂಬ ಯಂತ್ರದ ಹಾಹೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಜಗತ್ತೆಂಬ ಯಂತ್ರದ ಹಾಹೆ ಹೇಂಗೆಂದರಿಯಲು ಅಜ್ಞಾನವೆಂಬ ತುಷದ ಚೋಹವ ತೊಡಿಸಿ
ಅಹಂ ಮಮತೆಯೆಂಬ ಸೊಕ್ಕನಿಕ್ಕಿ
ಬಾರದ ಭವದ ಬಟ್ಟೆಯಲ್ಲಿ ಬರಿಸಿ
ಕಾಣದ ಕರ್ಮ ದುಃಖವ ಕಾಣಿಸಿ
ಉಣ್ಣದ ಅಪೇಯವನುಣಿಸಿ
ಮಾರಾರಿ ವಿನೋದಿಸಿದೆಯಯ್ಯಾ
ಕೂಡಲಸಂಗಮದೇವಾ.