ವಿಷಯಕ್ಕೆ ಹೋಗು

ಜಗನ್ನಾಥದಾಸರು

ವಿಕಿಸೋರ್ಸ್ದಿಂದ

ಜಗನ್ನಾಥದಾಸರು(೧೭೨೮-೧೮೦೯) ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗವಟ್ಟಿಯಲ್ಲಿ, ೧೭೨೮ರಲ್ಲಿ (ಕೀಲಕನಾಮ ಸಂವತ್ಸರ - ಶ್ರಾವಣ ಶುದ್ಧ ಬಿದಿಗೆ) ಜನಿಸಿದರು. ಮಾಧ್ವ ಬ್ರಾಹ್ಮಣ ಮನೆತನ ಇವರದು. ತಂದೆ ನರಸಿಂಹಾಚಾರ್ಯರು, ತಾಯಿಯ ಹೆಸರು ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ. ತಂದೆತಾಯಿಗಳ ಒಬ್ಬನೇ ಮಗನಾಗಿದ್ದು, ಗೃಹಸ್ಥಾಶ್ರಮ ಸ್ವೀಕರಿಸಿರಲಿಲ್ಲವೆಂದು ತಿಳಿದುಬಂದಿದೆ. ವರದೇಂದ್ರ ತೀರ್ಥರು ಮತ್ತು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದ್ದರೆಂದು ತಿಳಿದುಬಂದಿದೆ. ಜಗನ್ನಾಥ ವಿಠಲ ಎಂಬುದು ಜಗನ್ನಾಥದಾಸರ ಅಂಕಿತ. ಚಂದ್ರಭಾಗಾ ನದಿಯಲ್ಲಿ ದೊರೆತ ಫಲಕದಿಂದ ಈ ಅಂಕಿತ ದೊರಕಿತೆಂದು ಹೇಳಲಾಗುತ್ತದೆ. ಮಾನ್ವಿಯಲ್ಲಿ ಜಗನ್ನಾಥದಾಸರ ಬೃಂದಾವನವನವಿದೆ.

ವಿಕಿಸೋರ್ಸ್‌ನಲ್ಲಿ ಇವರ ಕೃತಿಗಳು

[ಸಂಪಾದಿಸಿ]