ಜಗಭರಿತನೆನ್ನ ದೇವ, ಜಗವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಗಭರಿತನೆನ್ನ ದೇವ
ಜಗವ ಹೊದ್ದನೆನ್ನ ದೇವ. ಭಕ್ತನ ಕರಸ್ಥಲಕ್ಕೆ ಬಂದನೆನ್ನ ದೇವ
ಭಕ್ತನನವಗ್ರಹಿಸಿಕೊಂಡನಾಗಿ ಎನ್ನ ದೇವ. ``ಓಂ ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ ಆಸೀನೇಭ್ಯಃ ಯಜಾಮ ದೇವಾನ್ಯದಿಶಕ್ನವಾಮ ಮಮಾಜ್ಯಾಯಸಃ ತಂ ಸಮಾವೃಕ್ಷಿ ದೇವಾ ಎಂದುದಾಗಿ ಎನ್ನ ದೇವ. ಇದು ಕಾರಣ
ಕೂಡಲಚೆನ್ನಸಂಗಮದೇವರು ಅಕ್ಷರಾಕ್ಷರವ ಮೀರಿದ ಘನವು.