ಜಗವಾಗಬಲ್ಲ ನೋಡಿರೊ ನೋಡಿರೊ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಜಗವಾಗಬಲ್ಲ
ನೋಡಿರೊ
ನಮ್ಮ
ಶಿವನು.
ಜಗವಾಗಲರಿಯದೆ
ಇರಬಲ್ಲ
ನೋಡಿರೊ
ನಮ್ಮ
ಶಿವನು.
ಅನಂತಕೋಟಿ
ಬ್ರಹ್ಮಾಂಡಗಳ
ನಿಮಿಷಮಾತ್ರದಲ್ಲಿ
ಪುಟ್ಟಿಸಬಲ್ಲ
ನೋಡಿರೊ
ನಮ್ಮ
ಶಿವನು.
ಆ
ಬ್ರಹ್ಮಾಂಡಗಳ
ನಿಮಿಷ
ಮಾತ್ರದಲ್ಲಿ
ಕೆಡಿಸಬಲ್ಲ
ನೋಡಿರೊ
ನಮ್ಮ
ಶಿವನು.
ಇಂತಪ್ಪ
ಶ್ರೀ
ಮಹಾದೇವನ
ಘನವನರಿಯದೆ
ಬರಿದೆ
ದೇವರು
ಉಂಟೆಂದು
ಬೊಗಳುವ
ಭವಭಾರಿಗಳ
ಮುಖವ
ನೋಡಲಾಗದಯ್ಯ
ಅಖಂಡೇಶ್ವರಾ.