ಜಲದೊಳಗಿರ್ದ ಕಿಚ್ಚು ಜಲವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಲದೊಳಗಿರ್ದ ಕಿಚ್ಚು ಜಲವ ಸುಡದೆ
ಜಲವು ತಾನಾಗಿಯೆ ಇದ್ದಿತ್ತು ನೋಡಾ
ನೆಲೆಯನರಿದು ನೋಡಿಹೆನೆಂದಡೆ
ಅದು ಜಲವು ತಾನಲ್ಲ
ಕುಲದೊಳಗಿರ್ದು ಕುಲವ ಬೆರಸದೆ
ನೆಲೆಗಟ್ಟುನಿಂದುದನಾರು ಬಲ್ಲರೊ?ಹೊರಗೊಳಗೆ ತಾನಾಗಿರ್ದು_ಮತ್ತೆ ತಲೆದೋರದಿಪ್ಪುದು
ಗುಹೇಶ್ವರಾ ನಿಮ್ಮ ನಿಲವು ನೋಡಾ.