ಜಲದೊಳಗೆ ಹುಟ್ಟಿದ ಹಲವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಲದೊಳಗೆ ಹುಟ್ಟಿದ ಹಲವು ಬಣ್ಣದ ವೃಕ್ಷ
ಕೊಂಬಿಲ್ಲದೆ ಹೂವಾಯಿತ್ತು
ಇಂಬಿನಲ್ಲಿ ಫಲದೋರಿತ್ತು ! ಜಂಬೂದ್ವೀಪದ ಮುಗ್ಧೆಯ ಅಂಗೈಯ ಅರಳುದಲೆ ಇಂದ್ರನ ವಾಹನವ ನುಂಗಿ
ಬ್ರಹ್ಮರಂಧ್ರದೊಳಗೆ ಆಸನ ಪವನವ ದೃಢಸೂಸಿ ಬೀಸರವೋಗದ ಶಿವಯೋಗ ! ಸಾಕ್ಷೀಭೂತಾತ್ಮದ ಮಾತು ಮಥನವ ನುಂಗಿ ಜ್ಯೋತಿಯೊಳಗಣ ಕರ್ಪುರದ ಬೆಳಗಿನಂತಿದ್ದಿತ್ತು ಗುಹೇಶ್ವರಲಿಂಗದಲ್ಲಿ ಯೋಗ !