Library-logo-blue-outline.png
View-refresh.svg
Transclusion_Status_Detection_Tool

ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ, ಮುಂದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜಾಗ್ರಪ್ರಸಾದಿಗಳ ಪ್ರಸಾದಿಗಳೆಂದೆನ್ನೆ
ಮುಂದೆ ಸ್ವಪ್ನಪ್ರಸಾದಿಗಳುಂಟಾಗಿ. ಸ್ವಪ್ನಪ್ರಸಾದಿಗಳ ಪ್ರಸಾದಿಗಳೆಂದೆನ್ನೆ
ಮುಂದೆ ಸುಷುಪ್ತಿಪ್ರಸಾದಿಗಳುಂಟಾಗಿ. ಸುಷುಪ್ತಿಪ್ರಸಾದಿಗಳ ಪ್ರಸಾದಿಗಳೆಂದೆನ್ನೆ
ಮುಂದೆ ಲಿಂಗಪ್ರಸಾದಿಗಳುಂಟಾಗಿ. ಈ ಒಂದರಲ್ಲು ನಿಯತರಲ್ಲಾಗಿ ನಾವು ಭಕ್ತರು
ನಾವು ಶರಣರು
ನಾವು ಹಿರಿಯರೆಂಬ ಮಧುಭುಂಜಕರ ಮೆಚ್ಚುವನೆ
ನಮ್ಮ ಕೂಡಲಚೆನ್ನಸಂಗಮದೇವ ?