ಜಾತಿಪೂರ್ವಾಶ್ರಯವ ಅಜ್ಞಾನ ಕಳೆದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಾತಿಪೂರ್ವಾಶ್ರಯವ ಕಳೆದು
ಸೂತಕ ಪಾತಕಂಗಳನಳಿದು
ಅಂಗತ್ರಯಗಳಲ್ಲಿ ಮುಸುಕಿದ ಅಜ್ಞಾನ ತಾಮಸವ ಜರಿದು
ಲಿಂಗತ್ರಯಂಗಳ ಸಂಗಸಮರಸವನರಿದ ಶರಣಂಗೆ ಉತ್ಪತ್ತಿ-ಸ್ಥಿತಿ-ಲಯಂಗಲಿಲ್ಲ ನೋಡಾ ! ಅದೇನು ಕಾರಣವೆಂದೊಡೆ : ಇಷ್ಟಲಿಂಗದಲ್ಲಿ ಉತ್ಪತ್ತಿ
ಪ್ರಾಣಲಿಂಗದಲ್ಲಿ ರಕ್ಷಣೆ
ಭಾವಲಿಂಗದಲ್ಲಿ ಬಯಲನೈದಿದ ಮಹಾಶರಣಂಗೆ ಹುಟ್ಟುಹೊಂದುಗಳು ನಷ್ಟವಾದುವಯ್ಯ ಅಖಂಡೇಶ್ವರಾ.