ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜಿತಪ್ರಸಾದ ಸಮಾಕ್ಷವಾದುದ ಅಶುದ್ಧಿತರೆತ್ತ ಬಲ್ಲರು ? ಮಹಾಮುನಿಗಳೆತ್ತ ಬಲ್ಲರು ? ಅನೇಕ ಕಾಲ ಮಹಾಕ್ಷೇತ್ರದಲ್ಲಿ ನಿಜನಿವಾಸಿಯಾಗಿರ್ದನು
ನಮ್ಮ ಮಡಿವಳನು. ಆ ಮಡಿವಳನ ಧ್ಯಾನದಲ್ಲಿ ಆರೂಢನಾಗಿರ್ದನು ನಮ್ಮ ಬಸವಣ್ಣನು. ಆ ಬಸವಣ್ಣನು ಬಪ್ಪಲ್ಲಿ ಮೈಯೆಲ್ಲ ಕಣ್ಣಾಗಿ
ಉತ್ತಮಾಂಗವೆಲ್ಲ ಕಣ್ಣಾಗಿ
ರೋಮ ರೋಮಾದಿಗಳೆಲ್ಲ ಕಣ್ಣಾಗಿ ಬಂದನಯ್ಯಾ
ಆ ಬಸವಣ್ಣನ ಭಕ್ತಿಯ ಜಡವ ಹರಿಯ ಬಂದನಯ್ಯಾ ನಮ್ಮ ಮಡಿವಾಳಯ್ಯನು. ಇವರಿಬ್ಬರ ನಿತ್ಯಪ್ರಸಾದಿ ನಾನಾದೆನು
ಕೂಡಲಚೆನ್ನಸಂಗಮದೇವಾ