ಜೀರ್ಣವಿಜಯನಗರಾದರ್ಶಂ

ವಿಕಿಸೋರ್ಸ್ದಿಂದ

ಜೀರ್ಣವಿಜಯನಗರಾದರ್ಶಂ  (1916) 
by ಕೆ. ರಾಮಸ್ವಾಮಯ್ಯಂಗಾರ್

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

Series No. 74.


ಜೀರ್ಣವಿಜಯನಗರಾದರ್ಶಂ

ಬೆಂಗಳೂರು ಡಿಸ್ಟ್ರಿ ಕ್ಟ್‌ ತ್ಯಾಮಗುಂಡ್ಲು
ಎ. ವಿ. ಸ್ಕೂಲ್ ಹೆಡ್ಮಾಸ್ಟರ್
ಕೆ. ರಾಮಸ್ವಾಮಯ್ಯಂಗಾರ್ ರವರಿಂದ ವಿರಚಿತವಾದುದು.

Rule Segment - Fancy2 - 100px

THE G. T. A. PRESS
MYSORE



1916

ಜೀರ್ಣವಿಜಯನಗರಾದರ್ಶಂ[ಸಂಪಾದಿಸಿ]

ಪೂರ್ವಭಾಗ.[ಸಂಪಾದಿಸಿ]

ಅತಿತ್ವರ್ಯದಲ್ಲಿಯೇ ಅಭಿವೃದ್ಧಿಯನ್ನು ಪಡೆದು ಅಚಿರಕಾದಲ್ಲಿಯೇ ಕ್ಷೀಣದಶೆಯನ್ನು ಹೊಂದಿ ಅಸ್ತಮಿಸಿದ ರಾಜ್ಯಗಳ ವಿಜಯನಗರದ ರಾಜ್ಯವು ಒಂದಾಗಿದೆ. ರಮಾರಮಿ ಮುನ್ನೂರು ಸಂವತ್ಸರಗಳು ಈ ರಾಜ್ಯವು ಅತಿವೈಭವದಿಂದ ಮೆರೆಯುತಿತ್ತು. ಪ್ರಸಿದ್ಧ ಯಾತ್ರಾಸ್ಥಾನವಾದ ಹಂಪೆಯು ಈ ವಿಜಯನಗರರಾಜ್ಯಕ್ಕೆ ಮುಖ್ಯ ಪಟ್ಟಣವಾಗಿದ್ದುದು. ಒಂದಾನೊಂದು ಕಾಲದಲ್ಲಿ ಈ ಪ್ರಪಂಚದ ನಗರಗಳಲ್ಲೆಲ್ಲಾ ಸಕಲ ವಿಧಗಳಲ್ಲಿಯ ಅಗ್ರಗಣ್ಯವಾಗಿ ಕಡುಪ್ರಖ್ಯಾತಿಯನ್ನು ತಳೆದಿದ್ದುದು ಈ ವಿಜಯನಗರವೇ. ಈ ನಗರರಾಜ್ಯವು ಪ್ರಕೃತದಲ್ಲಿ ಶಿಥಿಲರೂಪದಿಂದ ಆಯಾಚಿಹ್ನೆಗಳನ್ನು ತೋರಿಸುತ್ತಲಿದೆ. ಈ ಜೀರ್ಣವಿಜಯನಗರವನ್ನೂ, ಅದರಲ್ಲಿನ ವಿಷಯಗಳನ್ನೂ ವರ್ಣಿಸತೊಡಗುವುದಕ್ಕೆ ಮೊದಲು ವಿಜಯನಗರ ಸಾಮ್ರಾಜ್ಯವನ್ನು ಕುರಿತ ಇತಿಹಾಸವನ್ನು ಸಂಗ್ರಹವಾಗಿ ತಿಳಿಸುವುದು ಅಗತ್ಯ.

ಉತ್ತರಹಿಂದೂಸ್ಥಾನದಿಂದ ಮಹಾಪ್ರವಾಹವಾಗಿ ಹೊರಟು, ದಕ್ಷಿಣ ಹಿಂದೂದೇಶದಲ್ಲಿನ ಹಿಂದೂಮತವನ್ನೂ, ಹಿಂದೂರಾಜ್ಯವನ್ನೂ ರೂಂಪಳಿಸುವುದಕ್ಕೆ ಸಿದ್ಧವಾಗಿದ್ದ ಮಹಮ್ಮದೀಯರೆಂಬ ಮಹಾನದಿಯನ್ನು ಇನ್ನೂರೈವತ್ತು ವರುಷಗಳವರೆಗೆ ಅಡಗಿಸಿ, ಹಿಂದೂಮತವನ್ನೂ, ಹಿಂದುಗಳ ಸ್ವಾತಂತ್ರಗಳನ್ನೂ ರಕ್ಷಿಸಿದ ವಿಜಯನಗರಸಾಮ್ರಾಜ್ಯವನ್ನು ವರ್ಣಿಸಲಿಕ್ಕೆ ಸಹಸ್ರಜಿಹ್ವನಾದ ಆದಿಶೇಷನೂ ಶಕ್ತನಾಗನು. ಕ್ರಿ. ಶ. 1307 ರಲ್ಲಿ ಮಹಮ್ಮದೀಯರು ದೇವಗಿರಿರಾಜರನ್ನು ಸೆರೆಹಿಡಿದರು. 1310 ರಲ್ಲಿ ದ್ವಾರಸಮುದ್ರದಲ್ಲಿನ ಬಲ್ಲಾಳರಾಜರ ಹೆಸರಡಗಿಸಿದರು. 1323 ರಲ್ಲಿ ಓರಗಲ್ಲಿನ ಪ್ರತಾಪರುದ್ರರಾಜನನ್ನು ದೆಹಲಿಗೆ ಹಿಡಿದೊಯ್ದರು. ಹೀಗೆ ದಕ್ಷಿಣದೇಶದಲ್ಲಿನ ಹಿಂದೂರಾಜ್ಯಗಳೆಲ್ಲವೂ ತಳಹತ್ತಿದ್ದರಿಂದ ಹಿಂದೂಮತಕ್ಕೂ ದೇಶಸ್ವಾತಂತ್ರಕ್ಕೂ ಆಧಾರಸ್ತಂಭವೇ ಇಲ್ಲದೆ ಹೋಯಿತು. ಹಿಂದೂದೇಶಕ್ಕೆ ಅಂತಹ ವಿಪನ್ನಾವಸ್ಥೆಯು ಪ್ರಾಪ್ತವಾದ ಸಂದರ್ಭದಲ್ಲಿ ಅದನ್ನುದ್ಧರಿಸುವುದಕ್ಕೆ ಅವತರಿಸಿದ ರಾಜ್ಯವೇ ಈ ವಿಜಯನಗರಸಾಮ್ರಾಜ್ಯವು. ಆಕಾಲದಲ್ಲಿ ಈ ಪ್ರಭುತ್ವವು ಹುಟ್ಟದೆ ಹೋಗಿದ್ದರೆ ಹದಿನಾಲ್ಕನೆಯ ಶತಾಬ್ದದಲ್ಲಿಯೇ ಅಂದರೆ ಈಗ್ಗೆ 500 ಸಂವತ್ಸರಗಳಿಗಿಂತ ಮುಂಚೆಯೇ ದಕ್ಷಿಣಹಿಂದೂದೇಶವೆಲ್ಲವೂ ಸಂಪೂರ್ಣವಾಗಿ ತುರುಷ್ಕರಪಾಲಾಗಿ ಹಿಂದೂಮುತವೆಲ್ಲವೂ ತಳಹತ್ತಿ ನಾವೆಲ್ಲರೂ ಮಹಮ್ಮದೀಯರಾಗಿ ಹೋಗುತ್ತಿದ್ದೆವೆಂದು ಹೇಳಿದರೂ ಅತಿಶಯೋಕ್ಕೆಯೆನ್ನಿಸದೆಂದು ವಿಜ್ಞಾನಚಂದ್ರಿಕಾ ಗ್ರಂಥಮಾಲೆಯ ಮಹಮ್ಮದೀಯಮಹಾಯುಗದಲ್ಲಿ ಕಂಠಕವಾಗಿ ಉಪಪಾದಿಸಿರುವರು, ಪಠನಿಯ ಚರಿತ್ರಂಥಗಳ ಕೆಲವು ಈ ವಿಷಯವನ್ನು ಬಹುಸಂಕ್ಷೇಪವಾಗಿ ವಿವರಿಸಿರುವುದರಿಂದ ಇದರ ಸಮಗ್ರ ಚರಿತ್ರೆಯನ್ನು ನಾವು ಶೋಧಿಸಿತಿಳಿಯದೆ ಉದಾಸೀನದಿಂದ ಇರುವುದು ತುಂಬಾ ಶೋಚನೀಯವು.

ವಿಜಯನಗರವು ಬಳ್ಳಾರಿ ಡಿಸ್ಟಿಕ್ಕಿನ ಹೊಸಪೇಟೆಗೆ ಸಮೀಪದಲ್ಲಿ ತುಂಗ ಭದ್ರಾನದಿಯ ದಕ್ಷಿಣತೀರದಲ್ಲಿ ಕಟ್ಟಲ್ಪಟ್ಟಿತ್ತು. ಈ ನದಿಯ ಆಚೆನ ದಡದಲ್ಲಿ ರಾಮನ ಕಾಲದಿಂದಲೂ, ಕಿಷ್ಕಿಂಧೆಯೆಂದು ಪ್ರಸಿದ್ಧಿಯನ್ನು ಹೊಂದಿ ಆನೆಗೊಂದಿ ಎಂದು ಹೆಸರುಗೊಂಡ ಪಟ್ಟಣವಿರುವುದು. 700 ವರುಪಗಳಿಂದಲೂ, ಆನೆಗೊಂದಿ ರಾಜ್ಯವನ್ನು ಹಿಂದುಗಳೇ ಆಳುತ್ತಿರುವರು. ಸಂಗಮನೆಂಬ ರಾಜಕುಮಾರನ ಮಕ್ಕಳಾದ ಹರಿಹರ, ಬುಕ್ಕರಾಯ ರೆಂಬುವರು ಓರುಗಲ್ಲು ರಾಜರ ಹತ್ತಿರ ಕೋಶಾಧ್ಯಕ್ಷರಾಗಿದ್ದು 1323 ರಲ್ಲಿ ಮಹಮ್ಮದೀಯರು ಓರಗಲ್ಲನ್ನು ಹಾಳುಮಾಡಿದಾಗ ಈ ಓರಗಲ್ಲನ್ನು ಬಿಟ್ಟು, ಆನೆಗೊಂದಿ ಸಂಸ್ಥಾನಾಧಿಪತಿಯ ಹತ್ತಿರಕ್ಕೆ ಬಂದರು. ಹರಿಹರನು ಆ ಸಂಸ್ಥಾನಕ್ಕೆ ಮಂತ್ರಿಯಾದನು. ಬುಕ್ಕರಾಯನು ಕೋಶಾಧ್ಯಕ್ಷನಾದನು. ದೆಹಲೀಶ್ವರನಾದ ಮಹಮ್ಮದ್ ತೊಗಲಖನ ಸೋದರಳಿಯನು ತನ್ನ ಸೋದರಮಾವನ ಆಗ್ರಹಕ್ಕೆ ಪಾತ್ರನಾದುದರಿಂದ ಆತನಿಗೆ ಹೆದರಿ ದೆಹಲಿಯಿಂದ ಓಡಿಬಂದು ಆನೆಗೊಂದಿರಾಜನನ್ನು ಆಶ್ರಯಿಸಿದನು. ಇದರಿಂದ ಆ ದೆಹಲೀ ಶರನು ಅತ್ಯಂತ ಕೋಪಾವಿಷ್ಟನಾಗಿ 1334 ರಲ್ಲಿ ಆನೆಗೊಂದಿಯ ಮೇಲೆ ದಂಡೆತ್ತಿ ಬಂದನು, ಆನೆಗೊಂದಿಯ ಅರಸನು ತನಗೆ ಪರಾಭವವಾಗುವುದು ನಿಜವೆಂದು ತಿಳಿದು, ಅದರಿಂದುಂಟಾಗುವ ಅಪಮಾನಗಳನ್ನು ಸಹಿಸಲಾರದೆ ತನ್ನ ಭಾರಾ ಪುತಾದಿಗಳನ್ನು ತನ್ನ ಕೈಗಳಿಂದಲೇ ಸಂಹರಿಸಿ, ಕೋಟೆಯಿಂದ ಹೊರಟು ಬಂದು ರಣಭೂಮಿಯಲ್ಲಿ ಘೋರವಾಗಿ ಕಾದಿ, ವೀರಶಯ್ಯವನೆಯ್ದಿದನು, ದೆಹಲೀಶ್ವರನು ಈ ರೀತಿಯಲ್ಲಿ ಸ್ವಾಧೀನಪಡಿಸಿ ಕೊಂಡ ರಾಜ್ಯದಲ್ಲಿ ತನ್ನ ಕಡೆಯ ಅಧಿಕಾರಿಯನ್ನೊಬ್ಬನನ್ನಿರಿಸಿ ದೆಹಲಿಗೆ ಹೋದನು. ಆನೆಗೊಂದಿಯ ಪ್ರಜೆಗಳೆಲ್ಲರೂ ಈ ಮಹಮ್ಮದೀಯರ ಆ೪ಕೆಯನೊಲ್ಲದೆ ಆ ಅಧಿಕಾರಿಯ ಮೇಲೆ ತಿರುಗಿಬಿದ್ದರು. ದೆಹಲೀಠ ರನು ಇದನ್ನು ಕೇಳಿ ಆನೆಗೊಂದಿರಾಜ್ಯವನ್ನು ಪಾಲಿಸುವುದು ತನಗೆ ಅತಿ ದುರ್ಘಟವೆಂದು ತಿಳಿದು, ಆನೆಗೊಂದಿ ರಾಜವಂಶಸ್ಥರು ಒಬ್ಬರೂ ಇಲ್ಲದ ರಿಂದ ಅದುವರೆಗೆ ತಾನು ಹಿಡಿದುಕೊಂಡುಹೋಗಿ ಸೆರೆಯಲ್ಲಿ ವೃದ್ದ ಆರುಜನ ರಾಜಕುಮಾರರನ್ನು ಕರೆಯಿಸಿ, ಆನೆಗೊಂದಿ ರಾಜನಹತ್ತಿರ ಅದುವರೆಗೂ ಮಂತ್ರಿ ಪದವಿಯನ್ನು ಹೊಂದಿದ್ದ ಹರಿಹರರಾಯನಿಗೆ ರಾಜ್ಯವನ್ನಿತ್ತು ಆತ ನನ್ನು ತನ್ನ ಸಾಮಂತರಾಜನನ್ನಾಗಿ ಒಡಂಬಡಿಸಿಕೊಂಡು ಅವನ ತಮ್ಮ ನಾದ ಬುಕ್ಕರಾಯನಿಗೆ ಮಂತ್ರಿ ಪದವಿಯನ್ನಿತ್ತು, ಉಳಿದ ನಾಲ್ವರನ್ನೂ ದೊಡ್ಡ ಅಧಿಕಾರಿಗಳನ್ನಾಗಿ ನಿಯಮಿಸಿ ಕಳುಹಿಸಿಕೊಟ್ಟನು. ಹರಿಹರನು ರಾಜನಾಗಿಯೂ ಬುಕ್ಕರಾಯನು ಮಂತ್ರಿಯಾಗಿಯೂ ಇದ್ದರು. ಅವರು ಒಂದಾನೊಂದುದಿನ ಚತುರಂಗಬಲಸಮೇತರಾಗಿ ಮೃಗಯಾವಿನೋದಕ್ಕೋ ಸ್ಕರ ತುಂಗಭದ್ರಾ ನದಿಯ ದಕ್ಷಿಣತೀರಕ್ಕೆ ಹೊರಟು, ಅಲ್ಲಿನ ಕಾಡುಗಳಲ್ಲಿ ಬೇಟೆಯಾಡುತ್ತಿರುವಾಗ ಮೊಲಗಳೇ ತಮ್ಮ ಬೇಟೆನಾಯಿಗಳನ್ನು ಅಟ್ಟಿ ಕೊಂಡು ಬಂದುವಂತೆ ! ಈ ವಾರ್ತೆಯನ್ನು ತಮ್ಮ ಕುಲಗುರುಗಳಾದ ವಿದ್ಯಾರಣ್ಯರಿಗೆ ವಿಜ್ಞಾಪಿಸಲು, ಅವರು ಅಲ್ಲಿ ಬಂದುಪಟ್ಟಣವನ್ನು ನಿನ್ನಿಸಿ ದರೆ ಅದು ಜಯಪ್ರದವಾಗುವುದೆಂದು ಹೇಳಿ ಅಲ್ಲಿ ಬಂದು ನಗರವನ್ನು ನಿರಾಣಗೊಳಿಸಿದರು. ಆ ಪ್ರದೇಶವು ನೈಸರ್ಗಿಕ ಪಾಕಾರಪಂಗಣವಾಗಿ ಸುತ್ತಿಕೊಂಡಿರುವ ಬೆಟ್ಟಗಳುಳ್ಳದಾಗಿ ಕಾತ್ರವದುರ್ಭೇದ್ಯವಾಗಿರುವುದು. ಕ್ರಿ. ಶ 1336 ಕೆ ಸರಿಯಾದ ಶಾಲಿವಾಹನಶಕೆ 1258 ನೇ ಧಾತು ಸಂವ ತೃರ ವೈಶಾಖ ಶುದ್ಧ ಪಂಚಮಿಯದಿನ ಈ ನಗರವು ನಿರಿಸಲ್ಪಟ್ಟಿತು, ಹರಿಹರರಾಯನು 1339 ರಿಂದ 1350 ರ ವರೆಗೆ ಈ ವಿಜಯನಗರವನ್ನು ಪಾಲಿಸಿದನು. ಈತನು ತನ್ನ ತಮ್ಮನ ಸಹಾಯದಿಂದ ತನ್ನ ರಾಜ್ಯವನ್ನು ಬಹಳವಾಗಿ ವಿಸ್ತರಿಸಿದನು, ಈತನ ರಾಜ್ಯಭಾರದ ಕಾಲದಲ್ಲಿಯೇ ವಿಜಯ ನಗರ ಸಾಮಾಜ್ಯಕ್ಕೆ ಅಂಕುಶಪ್ರಾಯವಾದ ಭಾಮಿನೀರಾಜ್ಯವು ಸ್ಥಾಪಿಸ ಲ್ಪಟ್ಟಿತು. ಈ ಭಾಮಿನೀರಾಜರಿಗೂ ವಿಜಯನಗರದರಾಜರಿಗೂ ಎಡೆಬಿಡದ ಯುದ್ಧವು ಜರುಗುತ್ತಲೇ ಇತ್ತು

ಹರಿಹರರಾಯನಿಗೆ ಸಂತಾನವಿಲ್ಲದ್ದರಿಂದ ಆತನ ಮರಣಾನಂತರ ಅವನ ಮಂತ್ರಿಯ ಯುವರಾಜನೂ ಸಹೋದರನೂ ಆದ ಬುಕ್ಕರಾಯನೇ ದೊರೆತನಕ್ಕೆ ಬಂದನು. ಈತನ ಆಳ್ವಿಕೆಯಲ್ಲಿಯೇ ತುಂಗಭದ್ರಾ ನದಿಗೆ ದಕ್ಷಿಣದಲ್ಲಿರುವ ರಾಜ್ಯವೂ, ಓಢ್ರ, ಕಳಿಂಗ, ದೇಶಗಳೂ ಜಯಿಸಲ್ಪಟ್ಟು ಜೀರ್ಣವಿಜಯನಗರಾದರ್ಶo MommmmmmmmmmmmmmmmmmmmmmmM M ಇದಕ್ಕೆ ಪ್ರತ್ಯರ್ಥಿಯಾದ ಭಾಮಿನೀ ರಾಜ್ಯಕ್ಕಿಂತ ಮಹೋನ್ನತಸ್ಥಿತಿಗೆ ಬಂತು. ಈ ಬುಕ್ಕ ಭೂಪಾಲನು ವಿಜಯನಗರದಲ್ಲಿ ಅನೇಕ ದಿವ್ಯಮಂದಿರ ಗಳನ್ನೂ, ತಲಾಶಾಲೆಗಳನ್ನೂ, ವಿಪಣಿಮಾರ್ಗವನ್ನೂ, ದೇವಾಲಯಗಳನ್ನೂ ಕಟ್ಟಿನಿ ರಮಣೀಯವಾಗಿಯ, ವಿಸ್ತಾರವಾಗಿಯೂ ಇರುವಂತೆ ಮಾಡಿ ದನು, ಈ ಮಹಾಮಹನ ಮಂತ್ರಿಶೇಖರನಾದ ಬುಜ್ಜೆ ರಾಜನು ತನ್ನೊಡೆ ಯನ ಗೌರವಾರ್ಥವಾಗಿ ಬುಕ್ಕಸಾಗರ, ಅನಂತಸಾಗರ ಎಂಬ ಎರಡು ದೊಡ್ಡ ಕೆರೆಗಳನ್ನು ಕಟ್ಟಿಸಿದನು. ಹರಿಹರರಾಯನ ತಮ್ಮನಾದ ಕಂಪ ಭೂಪಾಲನು ರಾಜನಾಗದೆ ಬುಕ್ಕರಾಯನೇ ಅರಸನಾದುದಕ್ಕೆ ಆತನಕೌಲ್ಯವೇ ಕಾರಣವೆಂದು ತೋರುವುದು. ಅದಲ್ಲದೆ ಹರಿಹರರಾಯನ ಜೀವಿತ ದಲ್ಲಿಯೇ ಬುಕ್ಕಭೂಪತಿಗೆ ಯುವರಾಜ್ಯ ಪಟ್ಟಾಭಿಷೇಕಮಾಡಿದಂತೆ ವಾಚ ಕರು ಮೊದಲೇ ಓದಿರುವರಷ್ಟೆ : ಬುಕ್ಕ ಭೂಪಾಲನ ತರುವಾಯ ಆತನ ಮಗನಾದ ಎರಡನೆಯ ಹರಿಹರರಾ ಮನೇ ರಾಜನಾದನು ಈತನು 1377 ರಲ್ಲಿ ಪಟ್ಟಾಭಿಷಿಕ್ತ ನಾದನು. ಮೈಸೂರು, ಧಾರಾಡ, ಕಾಂಚೇ, ಚಂಗಲ್ಪಟ್ಟು, ತಿರುಚನಾಪಲ್ಲಿ ಮೊದಲಾದ ದೇಶಗಳಲ್ಲಿ ಈತನ ರಾಜದ ಕಾಲ ದಲ್ಲಿನ ಶಾಸನಗಳು ಕಾಣಬರುತ್ತಿರುವುದರಿಂದ ಈತನ ರಾಜ್ಯವು ವಿಸ್ತಾರ ವಾಗಿ ಇದ್ದಂತೆ, ಪೂರ ದನರಪತಿಗಳು ಧರಿಸುತ್ತಿದ್ದ “ ಮಂಡಲೇಶ್ವರ, ಒಡೆಯ ” ಎಂಬ ಮಾಂಡಲಿಕರಾಜರಿಗೆ ತಕ್ಕ ಬಿರುದುಗಳನ್ನು ಬಿಟ್ಟು, “ ಮಹಾರಾಜಾಧಿರಾಜ ರಾಜಪರಮೇಶ್ವರ' ಎಂಬ ಬಿರುದನ್ನು ವಹಿಸಿದ್ದು ದರಿಂದಲೂ, ಈ ಮಹನೀಯನಿಗೆ ಚಕ್ರವರ್ತಿತವು ಬಂದಂತೆಯೂ ವಿಶದ ವಾಗುವುದು, ಈತನು 1404 ರ ವರೆಗೆ ರಾಜ್ಯವನ್ನಾಳಿದನು. ವಿಜಯನಗರನಿರ್ಮಾಣಕ್ಕೆ ಕಾರಣಭೂತರಾಗಿ ಹರಿಹರ, ಬುಕ್ಕ, ದ್ವಿತೀಯ ಹರಿಹರರಿಗೆ ಹಿತಬೋಧಕರಾಗಿ ವಿಜಯನಗರದ ಸಾಮ್ರಾಜ್ಯ ವನ್ನು ಪಾಭವವೈಭವಗಳುಳ್ಳಂತೆ ಮಾಡಿದ ಮಹನೀಯರಾದ ವಿದ್ಯಾರಣ್ಯರ - ೧ ಕರ್ಣಾಟಕ ಗ್ರಂಥಮಾಲೆ ಚರಿತ್ರೆಯನ್ನು ಸ್ವಲ್ಪಮಟ್ಟಿಗೆ ತಿಳಿಸುವುದು ಆವಶ್ಯಕವಾದುದರಿಂದ ಅದ ಸ್ನಲ್ಲಿ ಸಂಗ್ರಹವಾಗಿ ತಿಳಿಸುವೆವು, ಸನ್ಯಾಸಾಶ್ರಮಸ್ಪೀಕಾರಕ್ಕೆ ಮುಂಚೆ ಈ ಮಹನೀಯನಿಗೆ ಮಾಧವಾಚಾರನೆಂದು ಹೆಸರು. ಈ ಮಾಧವಾಚಾ ರರು ಕ್ರಿ. ಶ. 1321 ನೆಯ ಸಂವತ್ಸರದಲ್ಲಿ ಸನ್ಯಾಸಾಶ್ರನವನ್ನು ನೀಕ ರಿಸಿದರು. ಇದರಿಂದ ವಿಜಯನಗರನಿರ್ಮಾಣಕಾಲಕ್ಕೆ ಈ ಮಹಾನು ಭಾವರು ಸನ್ಯಾಸಾಶ್ರಮವನ್ನು ಸ್ವೀಕರಿಸಿ ಹದಿನೈದು ವರುಷಗಳಾಗಿದ್ದ ಎಂದು ತಿಳಿಯಬಹುದು. ಇವರು ಶ್ರೀಭುವನೇಶ್ವರಿಯ ಅನುಗ್ರಹದಿಂದ ವಿಜಯನಗರದಮೇಲೆ ಮರುಗಳಿಗೆಯಹೊತ್ತು ಸುವರ್ಣವೃಷ್ಟಿಯನ್ನು ಸುರಿಸಿದರಂತೆ !! ಯತ್ಯಾ ಶನ ಸ್ವೀಕಾರದಿಂದ ಐಹಿಕ ಸುಖಗಳಲ್ಲಿ ಸ್ವಲ್ಪವೂ ಇಚ್ಛೆ ಯಿಲ್ಲದವರಾಗಿ ದ್ದರೂ, ದೇಶವೆಲ್ಲವೂ ತುರುಷ್ಕರಿಂದ ಅರಾಜಕವಾದುದನ್ನೂ, ತಸ್ಮಾರ್ತ ಕರ್ಮಗಳಲ್ಲವೂ ನಶಿಸುತ್ತಿರುವುದನ್ನೂ, ನೋಡಿ, ಸ್ವದೇಶಸ್ಪಮತಗಳನ್ನು ದರಿಸುವದಕ್ಕಾಗಿ ಕೇವಲ ನಿರಪೇಕ್ಟ್ರಾಬುದ್ದಿಯಿಂದ ಈ ಮಹಾನು ಭಾವರು ವಿಜಯನಗರವೆಂಬ ಹಿಂದೂರಾಜ್ಯವನ್ನು ಸಿಕ್ಕಿಸಿದುದನ್ನು ನೋಡಿ ದರ ಇವರು ಅದ್ವಿತೀಯ ವ.ಹಾಪುರುಷರೆಂದು ಹೇಳ ಬೇಕಾಗಿದೆ. ಈ ಮಾಧವಾಚಾರರು ಅಪ್ರತಿಮ ವಿದ್ವಾಂಸರು. ಇವರ ತಮ್ಮನಾದ ಸಾಯ ಅನ ಸಹಾಯದಿಂದ ಇವರು ಧರಶಾಸ್ತ್ರ, ವೇದಾಂತ, ಜ್ಯೋತಿಶ್ಯಾಸ್ತ್ರ, ವೈದ್ಯ, ವ್ಯಾಕರಣ ಮೊದಲಾದ ಹಲವು ವಿಷಯಗಳ ಮೇಲೆ ಉದ್ದಂಥ ಗಳನ್ನು ಬರೆದು ಲೋಕೋಪಕಾರವನ್ನು ಮಾಡಿದರು. ಇವರು 1895 ನೆಯ ಇಸವಿಯಲ್ಲಿ ನೂರುವರುಷಗಳಿಗೆ ಮಾರಿದ ವಯಸ್ಸಿನಲ್ಲಿದ್ದಾಗ ಸಿದ್ದಿಯನ್ನು ಹೊಂದಿದರು. ಎರಡನೆಯ ಹರಿಹರರಾಯನ ತರುವಾಯ ಎರಡನೆಯ ಬುಕ್ಕರಾ ಯನು 1404 ನೆಯ ವರುಷದಲ್ಲಿ ಪಟ್ಟಾಭಿಷಿಕ್ತನಾದನು, ಈ ರಾಜನು d ಜೀರ್ಣವಿಜಯನಗರಾದರ್ಶ೦ MMww೧ ತನ್ನ ತಂದೆತಾತಂದಿರಂತೆಯೇ ಈ ವಿಜಯನಗರದ ಸಾಮ್ರಾಜ್ಯವನ್ನು ವಿಸ್ತ ರಿಸಿದನು. ಈ ನರಪಾಲನು ನಗರದಲ್ಲಿದ್ದ ಅನೇಕ ತಗ್ಗು ಪ್ರದೇಶಗಳನ್ನು ಮುಚ್ಚಿಸಿ, ಪ್ರಾಕಾರಗಳನ್ನು ಕಟ್ಟಿಸಿದನು. ಈ ಪ್ರಾಕಾರಗಳು ಈಗ ಶಿಥಿಲರೂಪವನ್ನು ಹೊಂದಿವೆ. ತುಂಗಭದ್ರಾ ನದಿಗೆ ಅಣೆಕಟ್ಟೆಯನ್ನು ಕಟ್ಟಿಸಿ, ಪಟ್ಟಣ ದೊಳಕ್ಕೆ ಕಾಲುವೆಗಳನ್ನು ತಿರುಗಿಸಿ, ನಗರದಲ್ಲಿ ಯಾವಾ ಗಲೂ ಜಲಸಮೃದ್ಧಿಯಾಗಿರುವಂತೆ ಮಾಡಿದುದೇ ಈ ಮಹಾಪಟ್ಟಣಕ್ಕೆ ಈ ರಾಜನು ಮಾಡಿದ ಮಹದುಪಕಾರವಾಗಿರುವುದು, ಹೀಗೆ ಪಟ್ಟಣದಲ್ಲಿ ಜಲಸಮೃದ್ಧಿಯಾಗಿರುವುದರಿಂದ ಎಲ್ಲಿ ನೋಡಿದರಲ್ಲಿ ಲತಾವಿಕುಂಜಗಳ, ಪುಪ್ಪೋದ್ಯಾನಗಳ, ದ್ರಾಕ್ಷಾ ತಾಂಬೂಲಾದಿವನಗಳ ಸಮೃದ್ಧಿಯಾಗಿ ವೃದ್ಧಿಯಾಗಿ, ೫ನರಿಗೆ ಸಂಪದಭಿವೃದ್ಧಿಯಾದುದರಿಂದ ಪ್ರಭುವಿಗೆ ನೂತನ ವಾಗಿ ಹನ್ನೆರಡು ಲಕ್ಷ ವರಹಗಳ ಆದಾಯ ಉಂಟಾಯಿತಂತೆ ! ಈ ಕಾಲುವೆಯು ಈಗಲೂ ಅಭಿವೃದ್ಧಿ ಸ್ಥಿತಿಯಲ್ಲಿಯೇ ಇದೆ. ಈತನು 1422ರ ವರೆಗೆ ರಾಜ್ಯವನ್ನಾಳಿದನು. ಎರಡನೆಯ ಬುಕ್ಕರಾಯನ ತರುವಾಯ ಈತನ ಮೊಮ್ಮಗನಾದ ಎರಡನೆಯ ದೇವರಾಯ ಅಥವಾ ಇಮ್ಮಡಿ ದೇವರಾಯನೆಂಬುವನು ಪಟ್ಟಕ್ಕೆ ಬಂದನು. ಈತನ ಆಳ್ವಿಕೆ 1423 ರಿಂದ 1446 ರ ವರೆಗೆ ಇತ್ತು, ಈತನು ಹಲವು ದಿಗ್ವಿಜಯಗಳನ್ನು ಮಾಡಿ ಘನತೆಯನ್ನು ಪಡೆದನು. ಈ ನರಪಾಲ ನಿಗೆ ನಿಂಹಳ, ಕೀರ್ತಿ , ಮೊದಲಾದ ಅನೇಕ ದೇಶಾಧೀಶರು ಸಾಮಂತರಾಗಿ ಪೊಗುದಿಯನ್ನು ಕೊಡುತ್ತಿದ್ದರಂತೆ ! 1443 ರಲ್ಲಿ ಈ ರಾಜಧಿರಾಜನ ಬಳಿಗೆ ಪ್ರತ್ಯಾಚಕ್ರವರ್ತಿಯು ಒಬ್ಬರಾಯಭಾರಿಯನ್ನು ಕಳುಹಿಸಿದ್ದ .ನಂತೆ ! ಇದರಿಂದ ಈ ಮಹನೀಯನ ಸಾಮ್ರಾಜ್ಯವೈಭವವು ಪ್ರಕಾಶ ಪಡುವುದು, Q @. 0 ೧. ಕರ್ಣಾಟಕ ಗ್ರಂಥಮಾಲೆ ಎರಡನೆಯ ದೇವರಾಯನಿಗೆ ನಿಂಹಳ ದೇವಿಯಿಂದ ಮಲ್ಲಿಕಾರ್ಜು ನನು ಹುಟ್ಟಿದನು. ರಾಜನತರುವಾಯ ಈ ವಲ್ಲಿಕಾರ್ಜುನನೇ ಅರಸನಾ ದನು. ಈತನ ಆಳ್ವಿಕೆಯಲ್ಲಿ ರಾಜ್ಯದ ಕೆಲಸಗಳು ಯಾವುವೂ ಇರಲಿಲ್ಲ. ತಿಮ್ಮಣ್ಣ ಧಣಾಯಕನು ಈತನ ಮಂತ್ರಿಯಾಗಿದ್ದನು. ಈ ನರಪಾಲನು 1446 ರಿಂದ 1465 ರ ತನಕ ರಾಜವನ್ನಾಳಿದನು. ಈತನಿಗೊಬ್ಬ ಮಗ ನಿದ್ದನು. ಮಲ್ಲಿಕಾರ್ಜುನನ ತರುವಾಯ ಇವನ ತಮ್ಮನಾದ ವಿರೂಪಾಕ್ಷ ರಾಯನು ಪಟ್ಟವನ್ನೇರಿದನು. ಮಲ್ಲಿಕಾರ್ಜುನನ ಮಗನಿದ್ದರೂ ಈತನ ತಮ್ಮನೇ ರಾಜ್ಯಾಧಿಪತಿಯಾದುದರಿಂದ ಆ ಮಗನ ಗತಿ ಏನಾಯಿತೆಂಬುವದು ವಿಶದವಾಗಿತಿಳಿಯದು, ವಿರೂಪಾಕ್ಷ ರಾಯನು 1465 ರಿಂದ 1478 ರ ತನಕ ಆಳಿದನು. ಈತನು ಸುರಾಪಾನಮತ್ತನಾಗಿ, ಪ್ರಜೆಗಳಿಗೆ ಅಗೋಚರನಾಗಿ, ಯಾವಾಗಲೂ ಅಂತಃಪುರದಲ್ಲಿಯೇ ಇರುತ್ತಿದ್ದನು. ಈತನು ಅತಿ ಮೂರ್ಖ ನಾಗಿ ದಂಡನಾಯಕರಲ್ಲಿ ವಿರೋಧವನ್ನು ಕಟ್ಟಿಕೊಂಡುದರಿಂದ ಈತನ ರಾಜ್ಯದಲ್ಲಿ ತುರುಷ್ಕರು ಪ್ರವೇಶಮಾಡಿ ಅನೇಕ ದುರ್ಗಗಳನ್ನು ಸ್ವಾಧೀನ ಪಡಿಸಿಕೊಂಡರು, ವಿಷಯಾಸಕ್ತನಾದ ಈ ನರಪಾಲನನ್ನು ಇವನ ಹಿರಿಯ ಮಗನಾದ ರಾಜಶೇಖರರಾಯನು ಕೊಲ್ಲಿಸಿದನು. 1478 ರಲ್ಲಿ ಇವನ ತಮ್ಮನಾದ ಎರಡನೆಯ ವಿರೂಪಾಕ್ಷಿರಾಯನು ಈತನನ್ನು ಅಂತ್ಯಗೊಳ್ಳಿ ಸಿದನು. ಆದರೂ ಇಂತಹ ದುಷ್ಟನ ಆಳ್ವಿಕೆಯು ಪ್ರಜೆಗಳಿಗೆ ಅಸಹ್ಯವಾ ಗಿತ್ತು. ಬುಕ್ಕರಾಯನ ವಂಶಸ್ಥರಿಗೆ ಬಂಧುವಾಗಿಯೂ ಸಾಳುವವಂಶಜಾತ ನಾಗಿಯೂ ಇರುವ ಸಾಳುವ ನರಸಿಂಹರಾಜನು ನಗರದಲ್ಲಿ ಯ ಪ್ರಜೆಗಳ ವಿಶ್ವಾಸಪಾತ್ರನಾಗಿದ್ದುದರಿಂದ ಆ ರಾಜನನ್ನು ಹೊರಡಿಸಿ, ತಾನೇ ರಾಜ್ಯಾ ರೂಢನಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಪ್ರಭುವಾದನು ಇದಕ್ಕೆ ಮುಂಚೆ ಜೀರ್ಣವಿಜಯನಗರಾದರ್ಶo ಪರರಾಯರಿಗೆ ಸ್ವಾಧೀನವಾಗಿ ಇವರಿಗೆ ಕೈತಪ್ಪಿ ಹೋಗಿದ್ದ ದೇಶಗಳನ್ನು ಪರಾಕ್ರಮಧುರಂಧರನಾದ ಈ ರಾಜನು ಮರಳ ಜಯಿಸಿ ಸ್ವಾಧೀನಮಾಡಿ ಕೊಂಡನು. ಈತನಿಗೆ ಅಷ್ಟರಲ್ಲಿಯೇ ಅವಸಾನಕಾಲವು ಸವಿಾಪವಾದುದ ರಿಂದ ಉದಯಗಿರಿ, ರಾಯಚೂರು, ಕೊಂಡವೀಡು ಎಂಬ ಮೂರು ದುರ್ಗ ಗಳನ್ನು ಮಾತ್ರ ಹಿಡಿದುಕೊಳ್ಳಲು ಅವಕಾಶ ತಪ್ಪಿತು. ಈ ಮಹಾರಾಜನಿಗೆ ಇಬ್ಬರು ಮಕ್ಕಳಿದ್ದರು. ಈತನ ಅಂತ್ಯ ಕಾಲದಲ್ಲಿ ತನ್ನ ಸೇನಾಪತಿ ಯಾಗಿಯ, ಈಶ್ವರರಾಜನ ಪುತ್ರನಾಗಿಯೂ, ಭಗವದ್ಭಕ್ತಿಪರಾಯಣ ನಾಗಿಯ, ಅತ್ಯಂತ ಪರಾಕ್ರಮಶಾಲಿಯಾಗಿ ಇದ್ದ ಸಾಳವ ನರಸ ರಾಜನನ್ನು ಕರೆಯಿಸಿ, ತನ್ನ ಪುತ್ರದ ಯವನ್ನೂ, ವಿಜಯನಗರದ ಸಾವಾ, ಜ್ಯವನ್ನೂ ಆತನ ಸ್ವಾಧೀನಮಾಡಿ, ಕೀರ್ತಿಶೇಷನಾದನು. ಈ ಸಾಳುವ ನರಸಿಂಹರಾಯನು 1487 ರಿಂದ 1490 ರ ವರೆಗೆ ಆಳಿದನು. ಈ ಸಾಳವ ನರಸಿಂಹರಾಜನು ಲೋಕಾಂತರವನ್ನೆಯಿದ ತರು ವಾಯ ಇವನ ಜೈಷ್ಣ ಪುತ್ರನಾದ ನರಸರಾಜನಿಗೆ ಪಟ್ಟವನ್ನು ಕಟ್ಟಿ ಈತನು ಅಪ್ರಾಪ್ತ ವಯಸ್ಕನಾದುದರಿಂದ ತುಳುವ ನರಸರಾಜನೇ ರಾಜ ಕಾರಗಳನ್ನು ನೋಡಿಕೊಳ್ಳುತ್ತಿದ್ದನು. ಆ ಕಾಲದಲ್ಲಿಯೇ ಯಾರೋ ಒಬ್ಬ ದುಷ್ಟನು ಬಾಲರಾಜನನ್ನು ಕೊಂದುಹಾಕಿ ಆ ತುಳವ ನರಸರಾಜನ ಮೇಲೆ ಅಪವಾದನನ್ನು ಹೊರಿಸಿದನು. ಆ ನರಸರಾಜನು ಈ ಅಪವಾದ ವನ್ನು ತಪ್ಪಿಸಿಕೊಳ್ಳಲೋಸುಗ ಆ ಬಾಲರಾಜನ ತಮ್ಮನಿಗೇನೆ ಪಟ್ಟವನ್ನು ಕಟ್ಟಿದನು. ಈ ಬಾಲರಾಜನು ತಮ್ಮಣ್ಣನನ್ನು ಕೊಂದುಹಾಕಿದ ದುಷ್ಟ ನನ್ನೇ ಗೌರವಿಸಿದುದರಿಂದ ಇವನನ್ನು ಸೆರೆಯಲ್ಲಿಟ್ಟು ನರಸರಾಜನೇ ಅರಸ ನಾದನು. ಆ ಬಾಲರಾಜನ ವಿಷಯವೇನಾಯಿತೆಂಬುವುದು ಗೊತ್ತಾಗಲಿಲ್ಲ. ಈ ತುಳುವ ನರಸರಾಜನು ಆಂಧಕವಿಗಳನ್ನಾದರಿಸಿದನು, ಈತನ ಆಸು ನದಲ್ಲಿದ್ದ ನಂದಿಮಲ್ಲಯ್ಯ ಫುಂಟೆ ಸಿಂಗಯ್ಯ ವರಾಹ ಪುರಾಣ, ಪ್ರಬೋಧ ೧೦ © ® ಕರ್ಣಾಟಕ ಗ್ರಂಥಮಾಲೆ ame ಚಂದ್ರೋದಯ ಎಂಬೆರಡು ಗ್ರಂಥಗಳನ್ನು ತೆಲುಗಿಸಿದರು. ಈ ನರಸಭೆ ಶಾಲನಿಗೆ ತಿಪ್ಪಾಣಿ, ನಾಗಲಾಂಬಿಕೆ, ಓಬಾಂಬಿಕೆ, ಎಂಬ ಮೂವರು ಪತ್ನಿಯ ರಿದ್ದರು. ಇವರಲ್ಲಿ ತಿಪ್ಪಾಜೆಯಿಂದ ವೀರನರಸಿಂಹರಾಜನೂ, ನಾಗಲಾಂಬಿಕೆ ಯಿಂದ ಕೃಷ್ಣರಾಯನೂ, ಓಬಾಂಬಿಕೆಯಿಂದ ಅಚ್ಯುತರಾಜನೂ ಜನಿಸಿದರು. ಈ ನರಸರಾಜನ ತರುವಾಯ ಇವನ ಹಿರಿಯಮಗನಾದ ವೀರನರಸಿಂಹ ರಾಯನು ಕೆಲವು ಕಾಲ ರಾಜ್ಯವನ್ನಾಳಿದನು. ಈ ನರನಾಥನು ಪೂಜ್ಯವಾದ ರಾಜ್ಯವನ್ನಾಳುತ್ತಿದ್ದು ತನ್ನ ಅವಸಾನ ಕಾಲವು ಸವಿಾಪವಾಗಲು, ತನ್ನ ತರುವಾಯ ಈ ರಾಜ್ಯವನ್ನು ಎಂಟು ವರುಷದವನಾದ ತನ್ನ ಮಗನಿಗೆ ಆಗಗೊಳಿಸದೆ ಸಹೋದರನಾದ ಕೃಷ್ಣ ರಾಯನು ಆಕ್ರಮಿಸಿಕೊಳ್ಳುವನೆಂದೆಣಿಸಿ, ಸಕಲವಿಧಗಳಲ್ಲಿಯ ತನಗೆ ಸಹಾಯಕನಾಗಿಯೂ, ಪರಮ ವಿಧೇಯನಾಗಿಯ, ಅನುಚಾತನಾಗಿಯ ಇದ್ದ ಕೃಷ್ಣರಾಯನ ಮೇಲೆ ಅಸೂಯೆಗೊಂಡು, ತನ್ನ ಮಂತ್ರಿ ಶ್ರೇಷ್ಠನಾದ ತಿಮ್ಮರಸನನ್ನು ಕರೆಯಿಸಿ, ಕೃಷ್ಣರಾಯನ ಎರಡು ಕಣ್ಣುಗಳನ್ನು ತಂದು ಕೊಟ್ಟಹೊರತು ಈ ಪಾಣಗಳು ಶಾಂತವಾಗಿ ಹೋಗಲಾರವೆಂದು ಹೇಳಿ ದುಃಖಿಸಲು, ಆ ಮಂತ್ರಿ, ಪುಂಗವನು ಪಟುಪರಾಕ್ರಮ ಧುರಂಧರನಾದ ಕೃಷ್ಣರಾಯನನ್ನು ಕೊಲ್ಲಿಸಿ ರಾಜ್ಯಲಕ್ಷ್ಮಿಯು ಪಡುವ ಸಂಕಟವನ್ನು ನೋಡಲೊಲ್ಲದೆ, ಕೃಷ್ಣರಾಯನನ್ನು ಗುಟ್ಟಾಗಿ ಮರಸಿಟ್ಟು, ಹುಲ್ಲೆಯ ಕಣ್ಣುಗಳೆರಡನ್ನು ತರಿಸಿ ಆ ರಾಜನಿಗೆ ತೋರಿಸುಲು ಅವು ತನ್ನ ತಮ್ಮನ ನೇತ್ರಗಳೇ ಎಂದು ನಂಬಿ ರಾಜನು ಸ್ವರ್ಗಸ್ಥನಾದನು. ಕೃಷ್ಣದೇವರಾಯನು (ಕೃಷ್ಣರಾಯ) ದಕ್ಷಿಣ ಹಿಂದೂದೇಶವ ಸ್ನಾಳಿದ ರಾಜರುಗಳಲ್ಲೆಲ್ಲ ಶ್ರೇಷ್ಠನೆನ್ನಬಹುದು. ಆತನ ಜನ್ಮ ದಿನವು ಇಂತಹುದೆಂದು ಹೇಳಲು ಆಧಾರಗಳು ಯಾವುವೂ ದೊರೆತಿಲ್ಲ ವಾದರೂ ಕ್ರಿ. ಶ 1465 ಕ್ಕೆ ಸರಿಯಾದ ಶಾಲಿವಾಹನಶಕೆ 1387 ನೇ ವಿಕೃತಿಸಂವತ್ಸರ ಜೀರ್ಣವಿಜಯನಗರಾದರ್ಶ೦ ೧೧ vvvvv vWMMMMMwwwMMMMwwwymrwwwmmmwww ಣ ಪುಷ್ಯ ಬಹುಳ ೧೦ ಶುಕ್ರವಾರದದಿನ ಜನ್ನಿಸಿದಂತೆ ರಾಯಬಹದ್ದೂರ್‌ ಕೆ. ವೀರೇಶಲಿಂಗಂ ಪಂಡಿತರು ನಿರ್ದಿಷ್ಟ ಮಾಡಿರುವರು. ವೀರನರಸಿಂಹನು ಮೃತನಾದತರುವಾಯ ಕೃಷ್ಣರಾಯನು ತನ್ನ ತಮ್ಮನಾದ ಅಚ್ಯುತರಾಯನನ್ನೂ, ತನ್ನ ಅಣ್ಣ ನಮಗನಾದ ತಿಮ್ಮರಾಯ ನನ್ನೂ ಚಂದ್ರಗಿರಿ ದುರ್ಗಕ್ಕೆ ಕಳುಹಿ ತಾನು ಶಾಲಿವಾಹನಶಕೆ 1430 ನೇ ಶುಕ್ತ ಸಂವತ್ಸರ ಮಾಘ ಶುದ್ಧ ೧3 ಗೆ ಸರಿಯಾದ ಕ್ರಿ ಶ 1506 ವರುಷದ ಏಬ್ರವರಿ 4 ನೇತಾರೀಕಿನಲ್ಲಿ ಪಟ್ಟಾಭಿಷಿಕ್ತನಾದನು. ಕೃಷ್ಣರಾಯನು ಬಹಳ ಕುಳ್ಯ, ನಿಡುವೂ ಇಲ್ಲದ ಸಾಮಾನ್ಯ ವಾದ ಎತ್ತರ ಉಳ್ಳವನಾಗಿಯೂ, ಸುಂದರಾಕಾರನಾಗಿಯೂ ದೃಢಕಾಯ ನಾಗಿಯ, ತೇಜಃಪುಂಜವಾದ ಮುಖವುಳ್ಳವನಾಗಿಯೂ ಇದ್ದನು. ಅವನ ಮುಖದಮೇಲೆ ಸಿಡುಬಿನ ಕಲೆಗಳು ಕಾಣಬರುತ್ತಿದ್ದವು, ಸುಂದರವಾದ ದಿವನ ವದನಕಮಲವನ್ನು ನೋಡುವವರಿಗೆ ಆತನಲ್ಲಿ ಪೂಜ್ಯ ಬುದ್ಧಿ ಹುಟ್ಟು ತಿತ್ತು. ನಾನಾವಿಧವಾದ ಗರಡಿ ಸಾಧನೆಗಳನ್ನೂ, ಧನುರ್ವಿದ್ಯೆಯನ್ನೂ, ಕತ್ತಿಗಳ ಸಾಧನೆಯನ್ನೂ, ಚೆನ್ನಾಗಿ ಕಲಿತಿದ್ದನು. ಈತನ ವಂಶದವರೂ ಈತನೂ ವೈಷ್ಣವರು. ಇವನು ವಿಷ್ಣು ಭಕ್ತನಾಗಿದ್ದರೂ ಶಿವದೇವಿಯಲ್ಲ. ಇವನು ದಯಾಮಯನಾಗಿದ್ದರೂ ಒಂದೊಂದ ವೇಳೆ ಇವನಿಗೆ ಅಧಿಕವಾಗಿ ಕೋಪಬರುತ್ತಿತ್ತಂತೆ ! ಈತನು ಆಂಧ ದೇಶದವನೆಂದು ಕೆಲವರೂ, ಕರ್ಣಾಟಕನೆಂದು ಕಲ ವರೂ ಹೇಳುತ್ತಿರುವರು. ಇವನು ಯಾವದೇಶೀಯನೇ ಆಗಿರಲಿ, ಇವನ ಕಾಲದಲ್ಲಿ ಆಂಧ್ರಭಾಷೆಯು ಮಹೋನ್ನತಸ್ಥಿತಿಗೆ ಬಂತು, ಇವನು ಆ ಭಾಷೆಯನ್ನು ಬಹಳವಾಗಿ ಆದರಿಸಿದನು. ಆದುದರಿಂದ ಈತನನ್ನು ಆಂಧ್ರ ನೆಂದು ಹೇಳುವುದು ನ್ಯಾಯವಾಗಿದೆ. ಈತನ ತಂದೆ ತಾತಂದಿರು ದೊಡ್ಡ , ವಿದ್ವಾಂಸರಾಗಿದ್ದು ಅನೇಕ ಕಾವ್ಯಗಳ ಕೃತಿಪತಿಗಳಾಗಿದ್ದರು. ಈತನು ® 6 ಕರ್ಣಾಟಕ ಗ್ರಂಥಮಾಲೆ MonwommmmmmmmmmwwwnMow ಸತ್ಕಾವ್ಯಗಳನ್ನು ಬಹಳವಾಗಿ ಬರೆಯಿಸಿದನೆಂಬುದನ್ನು ವಾಚಕರು ಮುಂದೆ ಗ್ರಹಿಸಬಲ್ಲರು. ಕೃಷ್ಣರಾಯನು ಅಡಿಗಡಿಗೆ ತೊಡಕಿಲ್ಲದ ಜಯಗಳನ್ನೇ ಪಡೆಯು ತಿದ್ದನು. ಆತನ ದಿಗ್ವಿಜಯಗಳನ್ನು ವಿವರಿಸಲಿಕ್ಕೆ ಮುಂಚೆ ಆ ದಿಗ್ವಿಜಯ ಗಳ ಕಾರಕನಾಗಿಯ, ರಾಯರಿಗೆ ಬಲಭುಜವಾಗಿಯ, ಪಿತೃ ತುಲ್ಯ ನಾಗಿಯ, ಈತನ ಅಮಾತ್ಯ ಶೇಖರನಾಗಿಯೇ ಇದ್ದ ತಿಮ್ಮರಸನ ವೃತ್ತಾಂತವನ್ನು ತಿಳಿದುಕೊಳ್ಳುವುದು ಅಗತ್ಯವಾದುದರಿಂದ ಅದನ್ನು ಸಂಗ್ರಹವಾಗಿ ತಿಳಿಸುವೆವು. ಈತನು ಆರವೇಲು ಕುಲದವನು. ಮನೆತನದ ಹೆಸರು ಸಾಳುವರು, ತಂದೆ ರಾಚಯ್ಯ, ಈ ತಿಮ್ಮರಸನ ಕೀರ್ತಿಯು ಆಂಧ್ರದೇಶದ ಎಲ್ಲಾ ಕಡೆ ಗಳಲ್ಲಿಯ ಈಗಲೂ ಹರಡಿಕೊಂಡಿದೆ. ಈತನ ಬುದ್ದಿ ವೈಭವಗಳನ್ನು ವಿಶದೀಕರಿಸುವ ಅನೇಕ ಕಥೆಗಳು ಆ೦ಧ್ರದೇಶದಲ್ಲಿ ಪ್ರಸಿದ್ದಿ ಗೊಂಡಿವೆ. ಅವುಗಳಲ್ಲಿ ಒಂದು ಕಥೆಯನ್ನು ದೇಶವಾತೆಯಿಂದ ಉದ್ದರಿಸಿ ಇಲ್ಲಿ ತಿಳಿಸುವೆವು. ಒಬ್ಬ ಬ್ರಾಹ್ಮಣನು ಕಾತೀಹಟ್ಟಣದಲ್ಲಿ ಬಹುಕಾಲದ ತನಕ ವಿದ್ಯಾ ಬ್ಯಾಸಮಾಡಿ ಜಗದೇಕ ಪಂಡಿತನೆಂದು ಹೆಸರುಪಡೆದನು. ಆ ಪಂಡಿತನು ನಮ್ಮ ಆರಾವರ್ತದ ದೇಶಗಳಲ್ಲೆಲ್ಲಾ ಸಂಚರಿಸಿ, ಎಲ್ಲೆಲ್ಲಿ ಪಂಡಿತಸಭೆಗಳು ಇರುವುವೋ ಅಲ್ಲೆಲ್ಲಾ ಹೋಗಿ ಸಮಸ್ತ ಶಾಸ್ತ್ರಗಳಲ್ಲಿಯೂ ಪ್ರಸಂಗ ಗಳನ್ನು ಮಾಡಿ, ಜಯವನ್ನು ಹೊಂದಿ ಸನ್ಮಾನ ಪತ್ರಗಳನ್ನೂ, ಜಯದ ಬಿರುದುಗಳನ್ನೂ ಪಡೆಯುತ್ತಾ ಬಂದನು. ಈತನಿಗೆ ಅಪಜಯವೆಂಬುವುದು ಯಾವುದೋ ತಿಳಿಯದೆಂದು ಹೇಳಬಹುದು, ಈತನು ಎಂದಾದರೂ ಒಂದು ದಿನ ತನ್ನ ಸಭೆಗೆ ಬಂದಾನೇ ಎಂದು ಕೃಷ್ಣರಾಯನು ಅಂದುಕೊಳ್ಳುತಿ ದ್ದನು. ಹೀಗಿರುವಲ್ಲಿ ಒಂದು ದಿನ ಆ ಜಗದೇಕ ಪಂಡಿತನು ರಾಯನ - ಬ - ೩ ಜೀರ್ಣವಿಜಯನಗರಾದರ್ಶo ೧೩ ಸಂದರ್ಶನವನ್ನು ಮಾಡಿಕೊಂಡನು. ಕೃಷ್ಣರಾಯನು ತನ್ನ ಪಂಡಿತಸಭೆಯು ಸೋತುಹೋಯಿತೆಂಬ ಶಾಶ್ವತವಾದ ಅಪಕೀರ್ತಿಯನ್ನು ಹೊಂದಲು ಇಷ್ಟ ಪಡದೆ ಪ್ರಸಂಗಮಾಡದೆಯೇ ಆ ದೊಡ್ಡಪಂಡಿತನನ್ನು ಸನ್ಮಾನಿಸಿ ಕಳುಹ ಬೇಕೆಂದು ಯೋಚಿಸಿ, ಅನೇಕ ಬಹುಮಾನಗಳನ್ನು ತರಿಸಿ ಆತನಿಗೆ ಕೊಟ್ಟು ಇವುಗಳನ್ನು ಸ್ವೀಕರಿಸೆಂದನು. ಅದಕ್ಕಾಪಂಡಿತನು ಒಡಂಬಡದೆ, “ಮಹಾ ರಾಜಾ ! ತಮ್ಮ ದಯೆಯಿಂದ ಇಂತಹ ಬಹುಮಾನಗಳು ಅನೇಕವಾಗಿ ಬಂದಿವೆ, ನಾನೀ ಬಹುಮಾನಗಳಿಗಾಗಿ ಬಂದವನಲ್ಲ, ವಾದಭಿಕ್ಷವನ್ನು ಬಯಸಿ ಬಂದಿರುವನು ” ಎಂದನು. - ಅದಕ್ಕೆ ರಾಯನು ನಿಮ್ಮ ಇಷ್ಟದಂತೆಯೇ ಆಗಬಹುದೆಂದು ಹೇಳಿ, ತನ್ನ ಸಭೆಯ ಪಂಡಿತರನ್ನೆಲ್ಲಾ ಕರೆಯಿಸಿ ಶಾಸ್ತ್ರವಾದಮಾಡಲು ಏರಡಿಸಿ ದನು. ರಾಯನ ಆಸ್ಥಾನಪಂಡಿತರು ಹಿಂದೆಗೆಯದೆ ಹದಿನೈದು ದಿನಗಳ ತನಕ ಆ ಜಗದೇಕ ಪಂಡಿತನ ಸಂಗಡ ಶಾಸ್ತ್ರವಾದಮಾಡಿ ಹೇಗೋ ಆ ಪಂಡಿತನನ್ನು ಸೋಲಿಸಿ ರಾಯರ ಎದುರಿಗೆ ಆತನ ಬಿರುದುಗಳನ್ನೆಲ್ಲಾ ತೆಗೆದು ಇರಿಸಿ, ನಾನು ಜಯಿಸಲ್ಪಟ್ಟೆನೆಂದು ಅನ್ನಿಸಿದರು, ರಾಯನು ಉದಾರಗುಣ ಸಂಪ «ನೂ, ನವರಸರನಿಕನೂ ಆದುದರಿಂದ ಮೊದಲು ತರಿಸಿಟ್ಟಿದ್ದ ಬಹುಮಾನ ಗಳನ್ನೆಲ್ಲಾ ಆ ಪಂಡಿತನಿಗೆ ಕೊಟ್ಟು ಸನ್ನಾನಮಾಡಿ ಕಳುಹಿಸಿದನು. ತರು ವಾಯ ಆ ಕೃಷ್ಣರಾಯನು ತನ್ನ ಆಸ್ಥಾನಪಂಡಿತರು ಇಂತಹ ಮಹಾಪಂಡಿತ ನನ್ನು ಜೈಸಿದರಲ್ಲಾ ಎಂಬ ಸಂತೋಷದಿಂದ “ ನಿಮಗೆ ಬೇಕಾದುದನ್ನು ಕೇಳಿಕೊಳ್ಳಿರಿ ಕೊಡುವೆನು ” ಎಂದು ತನ್ನ ಪಂಡಿತರಿಗೆ ಹೇಳಿದನು, ಈ ಪಂಡಿತರಲ್ಲಿ ಅನೇಕರಿಗೆ ತಮ್ಮ ವಿದ್ಯಾ ಪಾಂಡಿತ್ಯದ ಮದದಿಂದ ರಾಯರಲ್ಲಿ ಮಂತ್ರಿತ ವನ್ನು ಪಡೆಯಬೇಕೆಂಬ ಆಸೆಯು ಬಹುಕಾಲದಿಂದ ಬಲವಾಗಿ ನೆಲೆಗೊಂಡಿತ್ತು. ಇದಲ್ಲದೆ ಈ ಪಂಡಿತರಿಗೆ ರಾಯರ ಮಂತ್ರಿಯಾದ ತಿನ್ನು ರಸಸ ಮೇಲೆ ಸ್ವಲ್ಪ ಅಸೂಯೆಯ ಮನಸ್ಸಿನಲ್ಲಿ ಬಾಧಿಸುತ್ತಿತ್ತು. ೧ ಕರ್ಣಾಟಕ ಗ್ರಂಥಮಾಲೆ wmmmmmmmmmmmmm. ಇಂತಹ ಪಂಡಿತರಲ್ಲಿ ನಾಲ್ಕಾರುಜನ ಸೇರಿ “ ಮಹಾಪ್ರಭುವೇ ? ತಮ್ಮ ದಿವಾನರು ತಿಮ್ಮರಸರು ಧರಶಾಸ್ತ್ರವಿರುದ್ಧವಾಗಿ ರಾಜ್ಯಾಂಗಗಳನ್ನು ನೆರೆ ವೇರಿಸುತ್ತಿರುವರು. “ ರಾಜಾರಾಷ್ಟ್ರಕೃತಂ ಪಾಪಂ ಎಂದರೆ ರಾಷ್ಟ್ರ ದಲ್ಲಿ ಬೆಳದಪಾಪವು ರಾಯನನ್ನು ಹೊಂದುವುದೆಂದು ಧರಶಾಸ್ತ್ರಗಳು ಮೊರೆಯಿಡುತ್ತಿರುವುವು. ಆದುದರಿಂದ ಮಹಾಸ್ವಾಮಿಯವರು ನಮಗೆ ಮಂತ್ರಿಪದವಿಯನ್ನು ದಯಪಾಲಿಸಿದರೆ ಇದುವರೆಗೆ ಬೆಳೆದಿರುವ ಪಾಸ ಗಳನ್ನು ಪೂಣ್ಯಕ್ರಗಳಿಂದ ಪರಿಹರಿಸಿ ನಮ್ಮ ರಾಷ್ಟ್ರ ದಲ್ಲಿ ಪಾಪಮಹಾ ದೇವತೆಯು ಅಡಿಯಿಡದಂತೆ ಧರಶಾಸ್ತ್ರ ಸಮ್ಮತದಿಂದ ರಾಜ್ಯ ಪರಿಪಾಲನೆ ಮಾಡುತ್ತಾ ಬರುವವು. ” ಎಂದು ರಾಯರೊಂದಿಗೆ ಬಿನ್ನವಿಸಿದರು. ಆಗ ರಾಯರು ತನ್ನ ಮನಸ್ಸಿನಲ್ಲಿ “ ಓಹೋ, ಮೋಸವಾಯಿತಲ್ಲಾ! ನಾನು ಕೋರಿಕೊಳ್ಳರೆಂದು ಇವರಿಗೇಕೆ ಹೇಳಿದೆನು ? " ಎಂದು ಸ್ವಲ್ಪ ಹೊತ್ತು ಚಿಂತಿಸಿ ಯಾವ ರೀತಿಯಿಂದಲಾದರೂ ಇವರಭಿಪ್ರಾಯವನ್ನು ಬಿಡಿಸಿ ನಾನು ತಪ್ಪಿಸಿಕೊಳ್ಳುವೆನೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು “ ಪಂಡಿತೋತ್ತಮರಿರಾ ! ನಾನು ಪದವಿಯಿಂದ ತಿಮ್ಮರಸನನ್ನು ತಪ್ಪಿಸ ಬೇಕಾದ ಸಂದರ್ಭದಲ್ಲಿ ಹೊಸದಾಗಿ ಉದ್ಯೋಗದಲ್ಲಿ ಪ್ರವೇಶಿಸಲಿಷ್ಟವುಳ್ಳ ವರಿಗೆ ಒಂದು ಪ್ರಶ್ನೆಯನ್ನು ಕೊಡುವೆನು. ಅದಕ್ಕೆ ಸರಿಯಾದ ಉತ್ತರವ ನ್ನಿತ್ತರೆ ಅಂತವರಿಗೆ ನನ್ನ ಮಂತ್ರಿ ಪದವಿಯನ್ನು ಕೊಡುವೆನು. ಇಲ್ಲದಿದ್ದರೆ ಅಧಿಕಾರವನ್ನು ಕೊಡಲಾಗುವುದಿಲ್ಲ” ಎಂದು ಹೇಳಿದನು ನಮಗೆ ಆ ಪ್ರಶ್ನೆಯನ್ನು ಕೊಟ್ಟರೆ ನಾವು ಅದಕ್ಕೆ ಸರಿಯಾದ ಉತ್ತರವನ್ನು ಕೊಡ ಬಲ್ಲವೆಂದು ಪಂಡಿತರು ಕೇಳಿಕೊಂಡರು. ಎಷ್ಟಾದರೂ ರಾಯನು ಕ್ಷತ್ರಿ ಯೋತ್ತಮನೂ, ಸೂಕ್ಷ್ಮ ಬುದ್ಧಿಯುಳ್ಳವನೂ, ಧೀರನೂ ಆದುದರಿಂದ ಸ್ವಲ್ಪಹೊತ್ತು ಆಲೋಚಿಸಿ, ಪಂಡಿತರನ್ನು ಕುರಿತು “ ಮಹನೀಯರು ಗಳಿರಾ? (1) ಬದುಕಿದರೆ ಬದುಕುವವನು, (2) ಸತ್ತರೆ ಬದುಕುವವನು, ಎದರಿಂದ ಜೀರ್ಣವಿಜಯನಗರಾದರ್ಶ೦ ೧೫ - (3) ಅಧಮನು, (4) ಅಧಮಾಧಮನು, (5) ನೀಚನು ಇವರಯ್ಯರನ್ನು ನೀವು ಕರೆದುಕೊಂಡು ಬಂದರೆ ತಪ್ಪದೆ ನನ್ನ ಮಂತ್ರಿತ್ವವನ್ನು ನಿಮಗೆ ನಿಮಗೆ ಕೊಡುವೆನು, ” ಎಂದು ಹೇಳಿದನು. ಆಗಲಾಪಂಡಿತರು, ಮಹಾಪ್ರ ಭುವೇ ಬುದ್ಧಿಯವರು ಕುಶಾಗ್ರಮದ್ಧಿಯುಳ್ಳವರು, ತಾವು ಹಾಕಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಹೇಳುವುದು ಸುಲಭವಾದ ಕೆಲಸವಲ್ಲ. ಪ್ರಶ್ನೆ ಯು ಸ್ವಲ್ಪ ಕಠಿಣವಾಗಿಯೇ ಇರುವಂತೆ ಕಾಣುತ್ತಿದೆ. ಇದಕ್ಕೆ ತಕ್ಕ ಉತ್ತ ವನ್ನು ಹೇಳಬೇಕಾದರೆ ಕನಿಷ್ಠ ಪಕ್ಷ ಆರುತಿಂಗಳ ಅವಧಿ ಬೇಕಾಗುವು ದೆಂದು ಅರಿಕೆಮಾಡಿಕೊಂಡರು. ರಾಯರು ಆ ಮಾತನ್ನು ಕೇಳಿ ಈ ಪಂಡಿ ತರು “ ನಿತ್ಯವೂ ಏನು ಮಹಾರಾಯ ; ನಮ್ಮ ಮಂತ್ರಿತ್ವದ ವಿಷಯವೇನು ಮಾಡಿದೆ ?” ಎಂದು ಕೇಳುತ್ತಾ ಪೀಡಿಸದಂತೆ ಆರುತಿಂಗಳು ಕಳೆದುಹೋ ಗುವುದಲ್ಲವೆ? ಆ ತರುವಾಯ ನೋಡಿಕೊಳ್ಳೋಣವೆಂದೆಣಿಸಿ ಹಾಗೆಯೇ ಆಗಬಹುದೆಂದು ಅವರಿಗೆ ಅಪ್ಪಣೆಕೊಟ್ಟು ಕಳುಹಿದನು. ತರುವಾಯ ಪಂಡಿತರು ತಮ್ಮ ಮನೆಗೆ ಹೋಗಿ ಎರಡು ಮೂರು ದಿನಗಳು ಕಳೆದಮೇಲೆ ರಾಯರು ಕೊಟ್ಟ ಪ್ರಶ್ನೆಗಳನ್ನು ಬಿಡಿಸುವ ಆಲೋಚನೆಗಾಗಿ ಒಂದು ಮಹಾಸಭೆಯನ್ನು ಸಮಾವೇಶ ಮಾಡಿಸಿದರು. ಆ ಸಭೆಯಲ್ಲಿ ಮೊದಲನೆಯ ಪ್ರಶ್ನೆ ” ಬದುಕಿದರೆ ಬದುಕತಕ್ಕವನು ಯಾವನು ? !” ಎಂದು ಚರ್ಚೆ ಜರುಗಲಾರಂಭಿಸಿತು. ಅದಕ್ಕೆ ಹದಿನೆಂಟು ವರಸದ ಹರೆಯದ ಹುಡುಗನನ್ನು ಏರ್ಪಡಿಸಿ “ ಇವನಿ ಗೇನು ಅಳಿಗಾಲಬಂದೀತೆ ? ಬದುಕಿದರೆ ಬದುಕದೆ ಏನು ? ಇನ್ನೂ ಆರು ಮಾಸಗಳ ಅವಧಿ ಇರುವುದಲ್ಲವೇ ? ಅಷ್ಟರೊಳಗೆ ಅವನನ್ನು ಚೆನ್ನಾಗಿ ಪೋಷಿಸಿ ಇವನಿಂದ ದಂಡೆಗಳುತೆಗಿಸಿ ಒಳ್ಳೇಕಸರತ್ತು ಮಾಡಿಸಿದರೆ ಆರು ತಿಂಗಳವೇಳಗೆ ಕೋಣನಂತೆ ಬಲಿತು ರಾಜರಮುಂದೆ ಇಡಲಿಕ್ಕೆ ತಕ್ಕವ ನಾಗುವನು. ” ಎಂದು ನಿಶ್ಚಯಿಸಿದರು. ಇನ್ನು ಎರಡನೆಯ ಪ್ರಶ್ನೆ. ೧ ಕರ್ಣಾಟಕ ಗ್ರಂಥಮಾಲೆ ಜmmmmmmmm

  • ಸತ್ತರೆ ಬದುಕುವನು.” ಆಹಾ ! ಅದೆಲ್ಲಿಯಾದರೂ ಉಂಟೆ ? ಸತ್ತರೆ ಅವನು ಬದುಕುವುದು ಹೇಗೆ, ಏನು ಪಂಡಿತರೇ ? ಇದು ಬಹು ವಿಚಿತ್ರ ವಾಗಿದೆ. ಗ್ರಂಥಗಳನ್ನೆಲ್ಲಾ ಒಮ್ಮೆ ತಿರುವಿಹಾಕಿದಹೊರತು ಈ ಸಂದೇಹವು ತೀರದು.” ಎಂದು ಪಂಡಿತರು ನಿಶ್ಚಯಿಸಿ, ಆ ವಿಷಯವನ್ನು ಹಾಗೆಯೇ ಉಳಿಸಿದರು. ಮೂರನೆಯ ಪ್ರಶ್ನೆ ಅಧಮನನ್ನು ಕುರಿತು..--ಲೌಕೀಕ ವಿರುದ್ದವಾಗಿ ತೋರುವ ಹೀನವೃತ್ತಿಗಳಲ್ಲಿ * ಸೀತಾರಾಮಾಭ್ಯಾನನು ಎಂದು ಮನಮನೆಗೂ ಹೋಗಿ ನಿತ್ಯ ಯಾತ್ರೆ ಮಾಡುವ ಉಂಛವೃತ್ತಿಯ ಬ್ರಾಹ್ಮಣನೊಬ್ಬನನ್ನು ನಿಯಮಿಸಿದರು. ಏತಕ್ಕೆಂದರೆ ಈತನಿಗಿಂತ ಕಡಿಮೆ ಅಂತಸ್ತಿನ ಅಧಮಾಧಮನೊಬ್ಬನಿರುವನು ಆದುದರಿಂದ ಅಧಮನಲ್ಲಿ ಅಕ್ಕಿ ಸಂಪಾದಿಸಿ ಅಟ್ಟುಣ್ಣುವ ಪ್ರಜ್ಞೆಯೊಂದು ಅತಿಶಯೋಕ್ತಿಯಾಗಿ ಪಂಡಿತರು ಭಾವಿಸಿದರು. ನಾಲ್ಕನೆಯವನು ಅಧಮಾಧಮನು-ಇವರು ಊರಲ್ಲಿ ರುವ ಹತ್ತು ಮಂದಿ ಗೃಹಸ್ಥರ ಮನೆಗಳಲ್ಲಿ ಊಟದವೇಳೆಗೆ ಸರಿಯಾಗಿ ತನ್ನ ಭೋಜನನಿಮಿತ್ತವಾಗಿ ಮನೆಯಲ್ಲಿ ಒಂದು ಹೆಚ್ಚಿದೆಲೆಯನ್ನು ಅಣಿ ಮಾಡಿಟ್ಟು, ಜೋಳಿಗೆ ಕಟ್ಟಿಕೊಂಡುಹೋಗಿ " ಭವತಿಭಿಕ್ಷಾಂದೇಹಿ ಎಂದು ಬೀದಿಬೀದಿಯಲ್ಲಿ ಸಾರುತ್ತಾ ಮಾಧವಾಕರವೆತ್ತುವನೊಬ್ಬನನ್ನು ಏರ್ಪಡಿಸಿದರು. ಐದನೆಯವನು ನೀಚನು, ಬೀದಿಗಳಲ್ಲಿ ಬಿಸಾಡಿರುವ ಎಂಜ ಲೆಲೆಗಳಲ್ಲಿನ ಉಚ್ಛಿಷ್ಟಾನ್ನವನ್ನು ತಿನ್ನುವನೊಬ್ಬನನ್ನು ಏರ್ಪಡಿಸಿದರು.

ಪಂಡಿತರು ಆಗ್ಗೆ ಬಿಟ್ಟಿದ್ದ ಎರಡನೆಯ ಪ್ರಶ್ನೆ ಎಂದರೆ ಸತ್ತರೆ ಓದು ಕುವನನ್ನು ಕುರಿತು ತಮ್ಮ ಮನೆಗಳಲ್ಲಿ ಗೆದ್ದಲು ತಿಂದುಹೋಗಿ ಉಳಿದಿ ರುವ ಪುರಾತನದ ತಾಳೇ ಒಲೆಯ ಪುಸ್ತಕಗಳನ್ನು ಅಹೋರಾತ್ರಿಗಳಲ್ಲಿ ಯ ಬೇಸರವಿಲ್ಲದೆ ಹುಡುಕಿನೊಡಿದರೂ ಎಲ್ಲಿಯ ಆ ವಿಚಾರವೆ ಬರೆದಿದಲಿಲ್ಲ. ಕುಯುಕ್ತಿಯು ಗ್ರಂಥಗಳಲ್ಲಿರುವುದೆ ? ಎಂದು ಆ ಪಂಡಿತರು ಯೋಚಿಸ ಲಾರದೆಹೋದರು ಮತ್ತು ಸತ್ತರೆ ಬದುಕುವವನನ್ನು ತಮ್ಮರಸನೇ ಆಗಲಿ ಜೀರ್ಣವಿಜಯನಗರಾದರ್ಶb - ೧೭ • : ಅವರಪ್ಪನೇ ಆಗಲಿ ಯಾರೂ ತರಲಾರರೆಂತಲೂ ಅಂತವನು ಈ ಪ್ರಪಂಚ ದಲ್ಲಿ ಇರುವುದು ಅಸಾಧ್ಯವೆಂತಲೂ ಅವರು ನಿಶ್ಚಯಿಸಿದರು ಹೀಗೆ ಆರು ತಿಂಗಳು ಕಳೆದು ವು, ಪಂಡಿತರು ತಮಗೆ ರಾಯರು ಕೊಟ್ಟ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳೊಂದಿಗೆ ದರ್ಬಾರಿಗೆ ಬರಬೇಕೆಂದು ರಾಜಾಜ್ಞೆಯಾ ಯಿತು ರಾಯರ ಪ್ರಶ್ನೆಗಳಿಗೆ ಪಂಡಿತರು ಕೊಡುವ ಉತ್ತರಗಳನ್ನು ಕೇಳುವುದಕ್ಕೆ ಪುರಜನರು ಹಲವರು ಗುಂಪುಗುಂಪಾಗಿ ರಾಜಸಭೆಗೆ ಬಂದು ಕಿಕ್ಕಿರಿದು ನಿಂತಿದ್ದರು. ಒಡೋಲಗದಲ್ಲಿದ್ದ ರಾಯರು ಪಂಡಿತರ ಕುಶಲ ವನ್ನು ಕ೪ ತರುವಾಯ ತಾವು ಕೊಟ್ಟಿದ್ದ ಪ್ರಶ್ನೆಗಳ ವಿಷಯವೇನಾ ಗಿದೆ ? ಎಂದು ಕೇಳಿದರು, ಆಗಲಾಪಂಡಿತರು “ ಬದಕಿದರೆ ಬದುಕೆತಕ್ಕೆವನು ” ಇವನು ಎಂದು ತಾವು ಕರೆದು ತಂದಿದ್ದವನನ್ನು ರಾಬರ ಮುಂದೆ ನಿಲ್ಲಿಸಿ ಅವನ ಎದೆಯಮೇಲಣ ವಸ್ತ್ರವನ್ನು ತೊಲಗಿಸಿ “ ಮಹಾಪ್ರಭುವೇ ! ತೆರಣೆ ಹಿಡಿದ ಮಂಚದ ಕಾಲುಗಳ ಹಾಗೆ ಇವನ ತೆಳುಗಳು ಹೇಗಿವೆಯೋ ? ಬಲಿತಿರುವ ಇವನ ಎದೆಯು ಹೇಗಿದೆಯೋ ? ಪರಾಂಬರಿಕೆಯಾಗಲಿ, ಬದು ಕಿದರೆ ಬದುಕದೆ ಇವನಿಗೇನು ತವು ? ಎಂದು ಬಿನ್ನವಿಸಿದರು, ಉಳಿದ ನಾಲ್ಕು ಪ್ರಶ್ನೆಗಳಿಗೆ ಬರತಕ್ಕ ಉತ್ತರಗಳ ಸ್ವಭಾವವನ್ನು ರಾಯರು ಕೂಡಲೇ ಗ್ರಹಿಸಿ ತಡೆಯಲಶಕ್ಯವಾಗಿ ಬರುತ್ತಿರುವ ನಗೆಯನ್ನು ಪ್ರಯಾ ಸದಿಂದ ತಡೆದುಕೊಂಡು “ ಸತ್ತರೆ ಬದುಕುವನೆಲ್ಲಿ. ? ?” ಎಂದು ಕೇಳಿದರು. ಅದಕ್ಕಾಪಂಡಿತರು ಅವನನ್ನು ತರಿಸುವುದಕ್ಕೆ ತಿಮ್ಮರಸನಿಗಲ್ಲಿ, ತ್ರಿನೇತ್ರನಿ ಗಾದರೂ ಶಕ್ಯವಲ್ಲವೆಂದು ಬಹು ಹಟದಿಂದ ತಿಳಿಸಿದರು, ಪಂಡಿತರ ಉತ್ತರ ಗಳನ್ನು ಸರಿಯಾಗಿ ಕೇಳದಿದ್ದರೆ ಅವರ ಮನಸ್ಸು ಕೊರಗಿ ಅವಮಾನ ಪಡುವರೆಂದು ತಿಳಿದು, ರಾಯರು ಉಳಿದ ಪ್ರಶ್ನೆಗಳಿಗೂ ಉತ್ತರಗಳನ್ನು ಕೇಳಿ ತಿಳಿದುಕೊಂಡರು. ಅವುಗಳೆಲ್ಲವೂ ಆಭಾಸವಾಗಿರುವುದೆಂದರೆ ಪಂ. ೧೮ ಕರ್ಣಾಟಕ ಗ್ರಂಥಮಾಲೆ MMMMwwwsworwwn• m ತರಿಗೆ ಕಪಬಂದೀತೆಂದು ತಿಳಿದು ರಾಯರು ಮಾತನಾಡದೆ ಇದ್ದ ರು. ಆಮೇಲೆ ಪಂಡಿತರ ಉತ್ತರಗಳು ಸಮಂಜಸವಾಗಿಲ್ಲವೆಂದು ರುಜು ಮಾಡ ಅಕ್ಕ ರಾಯರು ತಮ್ಮ ಮಂತ್ರಿವಯ್ಯನಾದ ತಿಮ್ಮರಸನಿಗೆ ಹೇಳಿಕಳುಹಿದರು. ಆತನು ಒಡನೆಯೇ ಅಲ್ಲಿಗೆ ಬಂದನು. ರಾಯರು ಮಂತ್ರಿಗೆ ಆ ಪ್ರಶ್ನೆಗೆ ಳನ್ನು ಹೇಳಿ, ಅವರೈವರನ್ನು ಸಭೆಗೆ ಬರಮಾಡುವುದೆಂದು ವಿಜ್ಞಾಪಿಸಿ ದರು. ಕೂಡಲೇ ತಿಮ್ಮರಸನು ಅಲ್ಲಿದ್ದ ಒಬ್ಬ ಗುಮಾಸ್ತೆಯನ್ನು ಕರೆದು ಇಂತಿಂತವರನ್ನು ಕರೆದುಕೊಂಡು ಬಾ. ಎಂದು ಹೇಳಿಕಳುಹಿದನು. ಇಂತಹ ದೊಡ್ಡದಾದ ಸಭೆಗಳಲ್ಲಿ ಯಾವುದಾದರೂ ಒಂದು ಪ್ರಶ್ನೆಗೆ ಪೂರ್ಣವಾದ ಉತ್ತರ ಕೊಟ್ಟವರಲ್ಲಿ ಅರ್ಧಮರ್ಥವಾಗಿ ಉತ್ತರ ಹೇಳದ ವರಿಗೆ ಸ್ವಲ್ಪ ಕೋಪ ಅಸೂಯೆ, ದ್ವೇಷ ಮೊದಲಾದ ಕೆಲವು ಗುಣ7 ಳುಂ ಟಾಗುವುದು ಸಹಜ, ಹಾಗೆಯೇ ಪಂಡಿತರಿಗೆ ಮಂತ್ರಿಯ ಮೇಲೆ ತಡೆಯ ಕೂಡದ ಸಿಟ್ಟು ಬಂದು ಅವರೇ ತೀವ್ರವಾಗಿ ಪ್ರಶ್ನೆಗಳನ್ನು ಕೇಳ ತೊಡ ಗಿದರು. ತಿಮ್ಮರಸನ ಉತ್ತರಗಳು-(೧) ಬದುಕಿದರೆ ಬದುಕುವನು ವೈದ್ಯ ನು, ಏಕೆಂದರೆ, ರೋಗಿಗೆ ಬಂದರೋಗವನ್ನು ಕುದುರಿಸಿ ಆ ರೋಗಿಯಿಂದ ಹಣಸಂಪಾದಿಸಿ ಬದುಕ ತಕ್ಕವನು, ಆದ್ದರಿಂದ ರೋಗಿ ರು ಬದುಕಿದ ಹೊರತು ವೈದ್ಯನಿಗೆ ಜೀವನ ಜರುಗಲಾರದೆಂದು ಅರ್ಥವು, (೨) ಸತ್ತರೆ ಬದುಕುವವನು ಇವನು ಆಪರ ಕರ್ಮವನ್ನು ಮಾಡಿಸತಕ್ಕ ಪುರೋಹಿ ತನು, ಊರಿನಲ್ಲಿ ಯಾರಾದರೂ ಸತ್ತುಹೋದಾಗ ಹೊರತು ಉಳಿದವೇಳೆ ಯಲ್ಲಿ ಇವನನ್ನು ಯಾರೂ ಕರೆಯರು, ಆದ್ದರಿಂದ ಒಬ್ಬನು ಸತ್ಯ ಹೊರತು ಇವನಿಗೆ ಜೀವನವು ಜರುಗದು, (೩) ಅಧವನು, ಇವನು ಏನೂ ಕೈಲಾ ಗದವನಾಗಿ ಅಕ್ಕತಂಗಿಯರ ಸಂರಕ್ಷಣೆಯಲ್ಲಿರುತ್ತಾ ಮನೆಯಲ್ಲಿ ಅವರು ಮೂಡಿಸುವ ಕೆಲಸಗಳನ್ನೆಲ್ಲಾ ಮಾಡುತ್ತಾ ಅವರಿಂದಲೂ ಭಾವಮೈದುನ - ಬ

• • ಜೀರ್ಣವಿಜಯನಗರಾದರ್ಶo

೧೯ wommmmmmmmmm. ರಿಂದಲೂ ಟೀಪೆಟ್ಟುಗಳನ್ನು ತಿನ್ನುತ್ತಿರುವನು. (8) ಅಧಮಾಧಮನು, ಇವನು ತನಗೆ ಯಾವ ವಿಧವಾದ ಪ್ರಯೋಜನವೂ ಇಲ್ಲದೆ ಅತ್ತೆ ಮನೆಯ ವರ ಹತ್ತಿರ ಇದ್ದು ಹೊಟ್ಟೆ ಹೊರೆದುಕೊಳ್ಳುತ್ತಾ ತನ್ನ ಹೆಂಡತಿಯಿಂದಲೂ ಭಾವಮೈದುನ ಮೊದಲಾದವರಿಂದಲೂ ಮಾತುಗಳನ್ನು ಕೇಳುತ್ತಾ ಹೀನ ರಾಗಿ ಬದುಕುವನು. (೫) ನೀಚನು ಇವನು ತನ್ನ ತಾಯಿಯಿಂದಲೂ ಅಕ್ಕತಂಗಿಯರಿಂದಲೂ, ಭಾರೆಯರಿಂದಲೂ, ದ್ರವ್ಯಾರ್ಜನೆಗಾಗಿ ಹೇಳ ಬಾರದ ನೀಚ ಕೃತ್ಯಗಳನ್ನು ಮಾಡಿಸುವವನು. ತಿಮ್ಮರಸನು ಈ ಮಾತುಗಳನ್ನು ವಿವರಿಸಿದಮೇಲೆ ಪಂಡಿತರ ಮೋರೆಗಳು ಚಿಕ್ಕದಾಗಿ ಅಂತಹ ಮಹಾಸಭೆಯಲ್ಲಿ ತಮಗೆ ಆದ ಅವ ಮಾನಕ್ಕೆ ಬಹಳ ನೊಂದುಕೊಂಡು ಖಿನ್ನರಾಗಿ ಏನೂಮಾತನಾಡದೆ ಮೌನ ವಾಗಿದ್ದರು. ಆಗ ರಾ ಯರು ಪಂಡಿತರ ಕಡೆಗೆ ತಿರುಗಿ ಇಂತೆಂದರು. - ಪಂಡಿತೆಷ್ಟರಿರಾ ! ಲೌಕಿಕ ವ್ಯಾಪಾರಗಳಿಗೂ ಪಂಡಿತವ್ಯಾಪಾರಗೆ ೪ಗೂ ಇರುವ ವ್ಯತ್ಯಾಸಕ್ಕೆ ಕೋಪಿಸುವಿರಾ ! ಯಾವ ವೃತ್ತಿಯವರು ಯಾವ ಕೆಲಸಮಾಡಬೇಕೊ ಆ ವೃತ್ತಿಯನ್ನು ನಡಿಸಿದರೆ ಪ್ರಕಾಶಿಸು ವುದು, ತಿಮ್ಮರಸನು ನಿಮ್ಮ ಪಾಂಡಿತ್ಯ ಕೃತ್ಯಕ್ಕೆ ಕೈಹಾಕಿದರೂ, ನೀವು ಆತನ ಲೌಕಿಕ ವ್ಯಾಪಾರಗಳನ್ನು ನಡಿಸುವೆನೆಂದು ಯತ್ನಿಸಿದರೂ ಅಭಾಸ ವಾಗಿ ಹೋಗುವುದೆಂದು ಹೇಳಿ ಮಂತ್ರಿ ಪದವಿಯನ್ನು ಪಡೆಯಬೇಕೆಂದು ಪಂಡಿತರ ಮನಸ್ಸಿನಲ್ಲಿದ್ದ ಅಭಿಪ್ರಾಯವನ್ನು ತಿಮ್ಮರಸನ ಬುದ್ಧಿ ಬಲದಿಂದ ದೃಷ್ಟಾಂತಪೂರ್ವಕವಾಗಿ ಓಡಿಸಿಬಿಟ್ಟರು. - ವಾಚಕರೇ ! ತಿಮ್ಮರಸನ ಬುದ್ದಿ ವೈಭವವನ್ನು ಕೇಳಿದಿರಾ ? ಇವರ ಬುದ್ಧಿ ವಿಶೇಷವನ್ನು ಕುರಿತು ಇನ್ನೂ ಹಲವು ಕಥೆಗಳು ಆಂಧ್ರ ದೇಶದಲ್ಲಿ ಈಗ್ಗ ಪ್ರಚುರದಲ್ಲಿವೆ. ಈ ಮಂತ್ರಿಯು ತನ್ನ ಬಾಲ್ಯದಲ್ಲಿ ಬಹಳ ಬಡತನದಿಂದ ಕೆಲವು ದಿನಗಳ ತನಕ ದನಗಳನ್ನು ಮೇಯಿಸುತ್ತಿದ್ದು ೨೦ ಕರ್ಣಾಟಕ ಗ್ರಂಥಮಾಲೆ ಒmmmmmmmmmmmmmmmmmmmmmmmmmmmmmwww ಗುತ್ತಿ, ಚಂದ್ರಗಿರಿ, ಪೆನಗೊಂಡೆ ಮೊದಲಾದ ಸ್ಥಳಗಳಲ್ಲಿ ಮಾಧಕ ವೃತ್ತಿಯಿಂದ ಜೀವಿಸುತ್ತಾ ವಿದ್ಯೆಯನ್ನು ಕಲಿತುಕೊಂಡು ಅಲ್ಲಿಯ ದುರ್ಗಾ ಧೀಶರನ್ನಾಶ್ರಯಿಸಿ ತನ್ನ ಮೇಧಾವಿಶೇಷದಿಂದ ಕ್ರಮೇಣ ದೊಡ್ಡ ಸಾಮ್ರಾಜ್ಯಕ್ಕೆ ಮಂತ್ರಿಯಾದನು. ಈ ಮಂತ್ರಿ ಶ್ರೇಷ್ಠನು ನರಸರಾಜ, ವೀರನರಸಿಂಗರಾಜ ಇವರ ಬಳಿಯಲ್ಲಿ ಮಂತ್ರಿಯಾಗಿದ್ದು ರಾಜ್ಯಭಾರವ ನ್ನೆಲ್ಲಾ ವಹಿಸಿಕೊಂಡು ರಾಜರ ಮತ್ತು ಪ್ರಜೆಗಳ ಗೌರವಕ್ಕೆ ಪಾತ್ರನಾ ದನು. ತರುವಾಯ ಕ್ರಮೇಣ ಕೃಷ್ಣರಾಯರ ಬಳಿಯಲ್ಲಿಯೂ ಮಂತ್ರಿ ಯಾಗಿ ರಾಯರಿಗೆ ಬಲಭುಜವಾಗಿದ್ದು ಕೊಂಡು ತನ್ನ ಮನೋಬಲದಿಂದ ರಾಯರಿಗೆ ಸೌಖ್ಯ ವಿಷಯಗಳನ್ನೂ ಅಧಿಕವಾಗಿ ಪ್ರಖ್ಯಾತಿಯನ್ನೂ ಉಂಟು ಮಾಡಿದನು. ರಾಯರ ಈ ಅಮಾತ್ಯ ಶೇಖರನನ್ನು “ ಅಪ್ಪಾಜಿ” ಎಂದು ಕರೆಯುತ್ತಿದ್ದರು, ಕೃಷ್ಣರಾಯರು ಮೊದಲು ೧೫೧೩ ನೇ ವರ್ಷದಲ್ಲಿ ದಕ್ಷಿಣದಿಕ್ಸಿ ಜಯ ಯಾತ್ರೆಗಾಗಿ ಹೊರಟು ಮೈಸೂರು ಮಂಡಲದಲ್ಲಿನ ಶಿವನಸಮುದ್ರ, ಉಮ್ಮತ್ತೂರು, ಶ್ರೀರಂಗಪಟ್ಟಣ ಇವುಗಳನ್ನು ಜಯಿಸಿ, ತರುವಾಯ ಗಂಗವಂಶದ ರಾಜರನ್ನು ಸೋಲಿಸಿ ಮೈಸೂರು ದೇಶವನ್ನೆಲ್ಲಾ ಸ್ವಾಧೀನ ಪಡಿಸಿಕೊಂಡನು. ಈ ದೇಶವನ್ನು ಜಯಿಸಿದ ಸಂಗತಿ ಪಾರಿಜಾತಾಪಹರಣ ದಲ್ಲಿನ ಈ ಶ್ಲೋಕದಿಂದ ತಿಳಿಯಬಹುದು. - ಶಾ| ಸಮ್ಮರ್ದಕ್ಷಮಧಿನಿಬಂಧನವಿಧಾ ಸಂಕ್ರಂದನಾಚಾರ್ ಶೂ ರಮ್ಮ ನ್ಯಾಚಲವಜ್ರಪಾತ ಜಗತೀ ರಕ್ಷಾಂಬುಜಾಕ್ಷಾಧಿರ | ಥ್ಯ ಮ್ಯಾರ್ಗಸ್ಥದಶಾಸ್ಯರಾಜ್ಯ ಸಮಸಹ್ಯ ಪೊದ್ಭರಾತೀವಭಾ - ಸುಮ್ಮತ್ತೂರಿಶಿವಂಸಮುದ್ರಪುರವಪೂನ್ನೂಲನಾಡಂಬರಾ || ಮತ್ತು ಕರ್ಣಾಟರಾಜ್ಯದ ಸಣ್ಣ ಸಣ್ಣ ನಾಡುಗಳನ್ನು ಜಯಸಿ ತನಗೆ ಪ್ರತಿನಿಧಿಯಾಗಿ ಆಳಲು ಜಕ್ಕರಾಯನನ್ನು ನಿಯಮಿಸಿಕೊಂಡನು. ಲ 0 || ಣ ಣ ಜೀರ್ಣವಿಜಯನಗರಾದರ್ಶ೦ ೨೧ MMmmmmmmmmmmmmmmmmmmmmmmmmmmmmmmmmmm ಬ ಬ ಮಲಯಾಳ, ಚೇರ, ಚೋಳ, ಪಾಂಡ್ಯರಾಜ್ಯಗಳನ್ನು ಜಯಿಸಿ ಈ ದೇಶಗ ಳನ್ನು ಮರುಭಾಗಗಳಾಗಿ ವಿಭಜಿಸಿ, ಒಂದೊಂದು ಭಾಗಕ್ಕೆ ಒಬ್ಬೊಬ್ಬ ನನ್ನು ತನ್ನ ಪ್ರತಿನಿಧಿಯಾಗಿ ನಿಯಮಿಸಿದನು. ೧೫೧೫ ನೆಯ ಸಂವತ್ಸರದಲ್ಲಿ ಪೂರ್ವ ದಿಗ್ವಿಜಯ ಯಾತ್ರೆ ಹೊರಟು ಕೊಂಡವೀಡು, ಬೆಲ್ಲ೦ಕೋಟೆ, ವಿನಕೊಂಡ, ಬೆಜವಾಡ, ಕೊಂಡಪಲ್ಲಿ, ವೇಗಿದೇಶದಲ್ಲಿರುವ ಜಮ್ಮುಲೋಯಿ, ತೋನಸೀಮೆ, ರಾಜಮಹೇಂದ್ರ ಮೊದಲಾದ ದೇಶಗಳನ್ನು ಜಯಿಸಿ ೧೫{೧೬ ನೇ ಸಂವತ್ಸರದಲ್ಲಿ ವಿಶಾಖ ಪಟ್ಟಣಮಂಡಲಕ್ಕೆ ಸೇರಿದ ಭೀಮನಪಟ್ಟಣಕ್ಕೆ ಐದು ಹರಿದಾರಿ ದೂರದಲ್ಲಿ ರುವ ಬೊಟ್ಟನೂರಿನ ಹತ್ತಿರ ಬಂದು ಕಲ್ಲಿನ ಜಯಸ್ತಂಭವನ್ನು ನೆಡಿಸಿ ಆ ಮಂಡಲದಲ್ಲಿನ ವೀರಪಲ್ಲಿ ತಾಲ್ಲೂಕಿನಲ್ಲಿದ್ದ ವಡ್ಡಾದಿಯನ್ನು ಜಯಿಸಿ ಉತ್ಕಲ ದೇಶದ ಕಟಕದ ತನಕ ಹೋಗಿ ಆ ಪಟ್ಟಣವನ್ನು ಸುಟ್ಟುಬಿಡಲು ಕಳಿಂಗದೇಶಾಧೀಶನಾಗಿ ಓತ ದೇಶವನ್ನು ಆಳುತ್ತಿದ್ದ ಪ್ರತಾಪರುದ್ರ ದೇವನು ತನ್ನ ಮಗಳಾದ ತಿರುಮಲಾದೇವಿಯನ್ನು ಮದುವೆ ಮಾಡಿಕೊಟ್ಟು ಸಂಧಿಮಾಡಿಕೊಂಡನು, ಇದರಿಂದ ಕೃಷ್ಣರಾಯರು ತಾವು ಜಯಿಸಿದ ರಾಜ ಮಹೇಂದ್ರದವರೆಗೂ ಇರುವ ಕಳಿಂಗದೇಶವನ್ನು ಮರಳಿ ಪ್ರತಾಪರುದ್ರ ದೇವನಿಗೆ ಕೊಟ್ಟು ಅದೇ ವರುಷದಲ್ಲಿ ಕಾಂಚೇ ಪುರವನ್ನು ಪ್ರವೇಶಿಸಿ ದರು. ಈ ಮಹಾರಾಯನೂ ಇವನ ಪಟ್ಟದರಸಿಯ ಹಲವು ಕಡೆಗಳಲ್ಲಿ ತಮ್ಮ ವಿಜಯವನ್ನು ಪ್ರಕಾಶಿಸಿ, ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ದಾನ ಧರಗಳನ್ನು ಮಾಡಿದರು, ಹೀಗೆ ಮಾಡಿದ್ದಕ್ಕೆ ದೃಷ್ಟಾಂತವಾಗಿ ಈತನು ನಿಂಹಾಚಲದ ದರ್ಶನಕ್ಕೆ ಬಂದಿದ್ದಾಗ ಭಾತ್ಯಾಸಹಿತನಾಗಿ ಮಾಡಿದ ದಾನ ಗಳ ವಿವರಣೆಯು ಸಿಂಹಾಚಲ ದೇವಾಲಯದ ಏಳನೆಯ ಸ್ಥಂಬದ ಮೇಲೆ ಕೆತ್ತಲ್ಪಟ್ಟಿರುವ ಶಾಸನದಿಂದ ಗೊತ್ತಾಗುವುದು, ಅದರ ಭಾಷಾಂತರವನ್ನು ಇಲ್ಲಿ ಉದ್ಧರಿಸಿದೆ. . - ಲ ಣ وو ಕರ್ಣಾಟಕ ಗ್ರಂಥಮಾಲೆ wwwmmmmmmmmmmmmmmmmmmm - ಶ್ರೀ ಮಹಾರಾಜಾಧಿರಾಜ ಪರಮೇಶ್ವರ ಮೂರುರಾಯರ ಗಂಡ ಆದಿರಾಯವಿಜಯ ಭಾಸಾಗೀತಪ್ರವರರಾಯ ಗಂಡ ಯವನರಾಜ್ಯ ಸಂಸ್ಥಾಪ ನಾಚಾರ ಶ್ರೀ ವೀರಸ ಶಾಪ ಕೃಷ್ಣದೇವಮಹಾರಾಜರು ವಿಜಯನಗರದಲ್ಲಿ ನಿಂಹಾಸನಾರೂಢರಾಗಿ ಪೂರ್ವ ದಿಗ್ವಿಜಯಯಾತ್ರೆಗೆ ದಯಮಾಡಿ, ಉದಯ ಗಿರಿ, ಕೊಂಡವೀಡು, ಕಂಠಸಲ್ಲಿ, ರಾಜಮಹೇಂದ್ರ ಮೊದಲಾದ ದುರ್ಗಗ ಳನ್ನು ಸಾಧಿಸಿ ನಿಬ್ಬಾದಿಗೆ ದಯಮಾಡಿ, ಸಸಿ ವಿಜಯಾಭ್ಯುದಯ ಶಾಲಿವಾಹನಶಕ ವರ್ಷಗಳು ೧೮೩v • ಸರಿಯಾದ ಧಾತುನಾಮಸಂವತ್ ರದ ಜೈಷ್ಣ ಬಹುಳ ದ್ವಾದಶಿ ಸ್ಥಿರವಾರದಂದು ಸಿಂಹಾದ್ರಿನಾಥನ ದರ್ಶನ ಮಾಡಿ, ತನ್ನ ತಾಯಿ ನಾಗದೇವಮ್ಮನವರಿಗೂ ತಮ್ಮ ತಂದೆ ನರಸರಾಜ ರಿಗೂ ಪುಣ್ಯವಾಗಲೆಂದು ದೇವರಿಗೆ ಸಮರ್ಪಿಸಿದ ಕಂಠಮಾಲೆ ಬಂದಕ್ಕೆ ಮುತ್ತುಗಳು - ವಮಾಣಿಕ್ಯಗಳ ಕಡಗಗಳ ಜತೆ ಒಂದು, ಶಂಖ ಚಕ್ರಗಳ ಪದಕ ಬಂದು, ಭಂಗಾರದ ತಟ್ಟೆ ಒಂದಕ್ಕೆ ತಣಕ ೪೪.೦೯೦ ಗದ್ಯಾಣ, ಹೊನ್ನು ೨೦೦೦ ತಮ್ಮ ದೇವಿ ಜೆನ್ನಾ ದೇವಮ್ಮನವರಿಂದ ಸಮ ರ್ಪಿಸಿದ ಪದಕ ಬಂದ ಗದ್ಯಾಣ ೫೦೦ ತಿರುಮಲದೇವಮ್ಮನವರಿಂದ ಸಮರ್ಪಿಸಿದ ಪದಕ ಒಂದಕ್ಕೆ ಗದ್ಯಾಳಿ 8{c೦ ಇಷ್ಟನ್ನು ಸಮರ್ಪಿಸಿದ್ದಕ್ಕೆ ದಾನಶಾಸನ, ಕೃಷ್ಣದೇವರಾಯರು ಮೇಲಿನ ಶಾಸನದಲ್ಲಿ ಮೂಗು ರಾಯರ ಗಂಡ ಎಂದು ಹೆಸರಿಸಲ್ಪಟ್ಟಿರುವನಲ್ಲವೆ ? ಈತನು ಓಡ ರಾಜರಾದ ಗಜ ಪತಿಗಳನ್ನೂ, ತುರುಸ್ಕರಾಜರಾದ ಅಶ್ವಪತಿಗಳನ್ನೂ ಅಂದ್ರರಾಜರಾದ ನರ ಪತಿಗಳನ್ನು ಜಯಿಸಿದುದರಿಂದ ಈತನಿಗೆ ಮರುರಾಯರ ಗಂಡನೆಂಬ ಬಿರುದುಬಂದಿದೆ, ಮತ್ತು ಈ ರಾಯನಿಗೆ ಅನೇಕ ಬಿರುದುಗಳಿದ್ದವು ಆದರೆ ಅವುಗಳನ್ನು ಇಲ್ಲಿ ವಿವರಿಸುವುದು ಅಪಕೃತವಾದುದು ಈ ರಾಯರಿಗೆ ತಿರುಮಲಾದೇವಿ, ಅನ್ನಪೂರ್ಣಾದೇವಿ ಎಂಬ ಇಬ್ಬರು ರಾಣಿಯರು ಇದ್ದರು ಎಂಬುದು ಈತನ ವಿರಚಿಸಿದ ವಿಷ್ಣು ಚಿತ್ರೀ 0 ಜೀರ್ಣವಿಜಯನಗರಾದರ್ಶo ೨೩ ೧/ ಯದ ಒಂದು ಪದ್ಯ ದಿಂದ ಗೊತ್ತಾಗುವುದು, ಅನ್ನಪೂರ್ಣಾದೇವಿಗೆ ಚೆನ್ನಾ ದೇವಿ ಎಂಬ ಮತ್ತೊಂದು ಹೆಸರು ಇತ್ತು. ಈತನ ದಿಗ್ವಿಜಯವು ಹಲವು ಆಂಧಗ್ರಂಥಗಳಲ್ಲಿ ಬಹಳ ವಾಗಿ ಬಣ್ಣಿಸಲ್ಪಟ್ಟಿದೆ. ಅವುಗಳನ್ನೆಲ್ಲಾ ತೆಗೆದು ಬರೆಯುವುದು ಅನಾವಶ್ಯಕ. - ಈ ಮಹನೀಯನ ಪಾಂಡಿತ್ಯವನ್ನೂ ಈತನ ಆಸ್ಥಾನದಲ್ಲಿ ಅಪ್ಪ ದಿಗ್ಗಜಗಳೆಂದು ಪ್ರಸಿದ್ಧಿಗೊಂಡಿದ್ದ ಎಂಟು ಮಂದಿ ಪಂಡಿತರ ಪಾಂಡಿತ್ಯ ನನ್ನ ಸಂಗ್ರಹವಾಗಿ ತಿಳಿಸುವೆವು ಈ ವಿಷಯವನ್ನು ಹೇಳುವುದಕ್ಕೆ ಮುಂಚೆ ಇವರ ಹಿಂದಿನ ಧೋರೆಗಳ ಆಸ್ಥಾನದಲ್ಲಿದ್ದ ಪಂಡಿತರ ವಿಚಾರ ವಾಗಿ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ. ನಮ್ಮ ಹಿಂದೂದೇಶದಲ್ಲಿನ ಉತ್ತಮ ಗ್ರಂಥಗಳೆಲ್ಲವೂ ಮೊತ್ತ ಮೊದಲು ಸಂಸ್ಕೃತಭಾಷೆಯದ್ಧಿಯೇ ರಚಿಸಲ್ಪಟ್ಟವು. ಈ ಭಾಷೆಯಲ್ಲಿ ಐಹಿಕಾಮುಕ ಸುಖಗಳನ್ನು ಉಂಟುಮಾಡತಕ್ಕ ಗ್ರಂಥರಾಣಿಗಳ ಸ್ಕೃತಿಸೂತ್ರಗಳ, ಇತಿಹಾಸಪುರಾಣಾದಿಗಳೂ, ಧರ್ಮಶಾಸ್ತ್ರಗಳ, ವೈದ್ಯ ಮಂತ್ರ ತಂತ್ರಾದಿಗಳ, ಗಣಿಸಲಶಕ್ಯಗಳಾಗಿವೆ. ಅವುಗಳಲ್ಲಿ ಶ್ರೀಮದ್ರಾಮಾಯಣವೂ, ಮಹಾಭಾರತವೂ ಸಮಸ್ತ ಧರ್ಮಗಳನ್ನೂ, ಬೋಧಿಸತಕ್ಕವುಗಳಾದುದರಿಂದ ಪೂರ್ವದಲ್ಲಿದ್ದ ರಾಜ ರುಗಳು ಅವುಗಳನ್ನು ಇತರ ಭಾಷೆಗಳಲ್ಲಿ ದೊಡ್ಡ ಕವಿಗಳಿಂದ ಭಾಷಾಂ ತರಿಸುತ್ತಾ ಬಂದರು. ರಾಜಮಹೇಂದ್ರ ನಗರಾಧಿಪನಾಗಿಯ ಕಾವ್ಯಗೀತಪ್ರಿಯನಾಗಿ ಯ ಇದ್ದ ರಾಜರಾಜನರೇಂದ್ರನೆಂಬ ವಿಷ್ಣುವರ್ಧನನು, ತನ್ನ ಆಸ್ಥಾನ ದಲ್ಲಿ ಬಹು ಜನ ಪಂಡಿತರನ್ನು ಸೇರಿಸಿಕೊಂಡಿದ್ದನು. ಈತನಿಗೆ ಯಾವಾ ಗಲೂ ಭಾರತವನ್ನು ಕೇಳುವುದರಲ್ಲಿ ಅಭಿರುಚಿ ಹೆಚ್ಚು, ಆದುದರಿಂದ ಹಲವು ಭಾಷೆಗಳಲ್ಲಿ ಹಲವು ವಿಧಗಳಾಗಿ ಬಹುಜನರಿಂದ ಹೇಳಲ್ಪಡು ಅ @ ೨೪ ಕರ್ಣಾಟಕ ಗ್ರಂಥಮಾಲೆ Mow ಬ ತಿದ್ದ ಮಹಾಭಾರತದ ಕಥೆಯನ್ನು ಕೇಳುತ್ತಲಿದ್ದರೂ ಈತನು ಅಪ್ಪ ರಿಂದ ತೃಪ್ತನಾಗದೆ ತೆಲುಗು ಭಾಷೆಯಲ್ಲಿಯ ಕೇಳಬೇಕೆಂಬ ಆಕೆ ಹುಟ್ಟಿತು. ಆಗ ತನ್ನ ಸಭೆಯಲ್ಲಿದ್ದ ವಿದ್ವಜ್ಜನರಲ್ಲಿ ಬ್ರಾಹ್ಮಣೋತ್ತಮ ನಾಗಿಯೂ ವಿಫಲಶಬ್ದ ಶಾಸನನಾಗಿಯ, ಸಕಲಶಾಸ್ತ್ರಜ್ಞನಾಗಿಯೂ ಇದ್ದ ನನ್ನಯ ಭಟ್ಟನೆಂಬುವನನ್ನು ಕರೆದು ತನ್ನ ಅಭಿಪ್ರಾಯವನ್ನು ತಿಳಿಸಿ ಮಹಾ ಭಾರತವನ್ನು ತೆಲುಗಿಸಬೇಕೆಂದು ಪ್ರಾರ್ಥಿಸಿದನು. ಆ ಮಹಾ ಪಂಡಿತನು ಅರಣ್ಯ ಪಕ್ಷದ ತನಕ ಬರೆದು ಮೃತನಾದನು, ಮತ್ತೊಬ್ಬ ಉದ್ದಾಮಪಂಡಿತನಾದ ತಿಕ್ಕನಸೋಮಯಾಜಿ ಎಂಬುವನು ಈ ಅರಣ್ಯ ಪಕ್ಷದ ಶೇಪವನ್ನು ಮಾತ್ರ ಬಿಟ್ಟು ವಿರಾಟಸರದಿಂದ ಪ್ರಾರಂಭಿಸಿ ಹದಿ ನೈದು ಪಕ್ಷಗಳನ್ನು ತೆಲುಗಿಸಿದನು. ಅರಣ್ಯ ಪಕ್ಷವನ್ನು ಸ್ವಲ್ಪಮಟ್ಟಿಗೆ ಭಾಷಾಂತರಿಸಿದ್ದರಿಂದ ನನ್ನಯ ಭಟ್ಟನಿಗೆ ಹುಚ್ಚು ಹಿಡಿದು ಸತ್ತನೆಂದು ತಿಳಿದು ತಾನು ಅದನ್ನು ಬರೆದರೆ ತನಗೂ ಹಾಗೆಯೇ ಆಗುವುದೋ ಏನೋ ಎಂಬ ಭಯದಿಂದ ಈತನು ಆ ಭಾಗಕ್ಕೆ ಕೈ ಹಾಕಲಿಲ್ಲ. ಆದುದರಿಂದ ಕೆಲವುಕಾಲದ ತನಕ ಆಂಧ್ರಭಾರತವು ಪೂರ್ಣವಾಗದೆ ಕೊರತೆಯಲ್ಲಿಯೇ ಇತ್ತು. ಆ ಕಾಲದಲ್ಲಿ ಬರೆಯಲ್ಪಟ್ಟ ಕೆಲವು ಓಲೆಯಗರಿಯ ಪ್ರತಿಗಳಲ್ಲಿ ವನರರವು ಅಸಮಾಗ್ರವಾಗಿಯೇ ಕಾಣಬರುತ್ತಿದೆ. ಈ ಕವಿಗೆ ಹಿಡಿದ ಭಯವೇ ಆಮೇಲೆ ಅರಣ್ಯ ಪರ ಶೇಷವನ್ನು ಬರೆದ ಯಾವಗಡ ಕವಿಗೆ ಹತ್ತಿ, ತಾನು ಅದನ್ನು ತೆಲುಗಿಸಲಪೇಕ್ಷೆಯಿದ್ದರೂ ತನ್ನ ಹೆಸರನ್ನಿಟ್ಟರೆ ನನ್ನಯ ಭಟ್ಟನಹಾಗೆಯೇ ತನಗೆ ಕೇಡುಮಡುವುದೆಂದು ಹೆದರಿ, ಉಳಿದ ಭಾಗವನ್ನು ರಾಜರಾಜನರೇಂದ್ರನಿಗೆ ಅಂಕಿತನಾಡಿ, ನನ್ನಯ ಭಟ್ಟನಹೆಸರಿ ನಿಂದಲೇ ವಿರಚಿಸಿದನು. ಈತನೂವನಸರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ತಲುಗಿಸಿರುವನು. ಈತನ ಕವಿತಾಶೈಲಿಯು ಮೃದುವಾಗಿಯ ಮಧುರವಾಗಿಯೂ ಇರುವುದು, ಈಗಲೂ ಭಾರತವನ್ನು ಓದತಕ್ಕವರು ಜೀರ್ಣವಿಜಯನಗರಾದತFo ೨೫ ಲ ಅರಣ್ಯಪರದಲ್ಲಿ ಸ್ವಲ್ಪ ಭಾಗವನ್ನು ಬಿಟ್ಟು ಪಾರಯಣಮಾಡುವ ಅಭ್ಯಾಸ ವನ್ನಿಟ್ಟುಕೊಂಡೇ ಇರುವರು, ಈ ಯರಾಪಗಡ ಕವಿಗೆ ಪ್ರಬಂಧ ಪರಮೇಶ್ವರನೆಂಬ ಬಿರಿದುಇದ್ದಿತು. ರಂಗನಾಥನೆಂಬ ಕವಿಯು ರಾಮಾಯಣವನ್ನು ದ್ವಿ ಪದಕಾವ್ಯವಾಗಿ ವಿರಚಿಸಿದನು. ಕೃಷ್ಣಾಮಂಡಲದಮನ ಮೂರು ಸಂಸ್ಥಾನಕ್ಕೆ ಪ್ರಭುವಾದ ವಿಠಲರಾಜಪುತ್ರನಾದ ಬುಕ್ಕರಾಜನಿಗೆ ಈ ಕೃತಿಯು ಅಂಕಿತವಾಗಿಮಾಡ ಲ್ಪಟ್ಟಿದ್ದರೂ ಇದಕ್ಕೆ ಬುಕ್ಕರಾಮಾಯಣವೆಂದು ಯಾರೂ ಹೆಸರಿಸದೆ ರಂಗ ನಾಥರಾನಾ ಯಣವೆಂತಲೇ ರೂಢಿ ಮಾಗಿ ಹೇಳುವರು. ಭಾಸ್ಕರನೆಂಬ ಕವಿ ಯೊಬ್ಬನು ರಾಮಾಯಣವನ್ನು ಸದ್ಯಕಾವ್ಯವಾಗಿ ತೆಲುಗಿಸಿದನು. ಬಮ್ಮೊರ ಪೋತನನೆಂಬ ಕವಿಯ ಭಾಗವತವನ್ನು ಭಕ್ತಿರಸಗ್ರಧಾನವಾಗಿ ಆ೦ಧಿಕ ರಿಸಿದನು. ಇನ್ನೂ ಹಲವರು ಕವೀಶ್ವರರು ಅಕಾಲದಲ್ಲಿ ಪುರಾಣದ ಕಥೆಗ ಳನ್ನು ತೆಲುಗಿಸಿ ಕೀರ್ತಿಯನ್ನು ಪಡೆದರು. ಆ ಕಾಲದ ಮಹಾರಾಜರುಗಳು ಕವೀಶ್ವರರನ್ನು ಮನ್ನಿಸಿ ಅದರಣೆ ಯಿಂದ ಪೋಷಿಸುತ್ತಿದ್ದುದರಿಂದ ಅವರು ಪುರಾಣೇತಿಹಾಸಗಳನ್ನು ಸಂಸ್ಕೃ ತದಿಂದ ಆಂಧ್ರಕ್ಕೆ ಭಾಷಾಂತರಿಸುತ್ತಿದ್ದರು. ಆದುದರಿಂದ ಆಗಿನ ಕವಿಗಳು ಸಂಸ್ಕೃತಾಂಧ ಭಾಷೆಗಳಲ್ಲಿ ಅಸಮಾನ ಪಾಂಡಿತ್ಯವುಳ್ಳವರಾಗಿ ಕಾವ್ಯನಿ ರ್ಮಾಣಕೌಶಲ್ಯದಲ್ಲಿ ಹೆಸರುಗೊಂಡ ) ವಿಶೇಷವಾಗಿ ನೀತಿಬೋಧಕಗಳಾ ಗಿಯ ಭಕ್ತಿದಾಯಕಗಳಾಗಿ ಯ ಇರುವ ಗ್ರಂಥ ಗಳನ್ನು ಬರೆಯುತ್ತಾ ಬಂದರು. ಕೇವಲಾನಂದದಾಯಕಗಳಾದ ಕಾವ್ಯಗಳನ್ನು ತೆಲುಗಿಸಿದ ಕವಿ ಗಳಲ್ಲಿ ಶ್ರೀನಾಥನು ಮುಖ್ಯನು. ಈತನು ಶೃಂಗಾರನೈಪಧ, ಕಾಶೀಖಂಡ ಭೀಮಖಂಡ, ಮರುದ್ರಾಜಚುತ್ತೆ, ಪಂಡಿತಾರಾಧ್ಯ ಚರಿತ್ರೆ, ಶಾಲಿವಾಹನ ಸಪ್ತಶತಿ, ವೀಧಿನಾಟಕ ಹರಿವಿಲಾಸ ಮುಂತಾದ ಗ್ರಂಥಗಳನ್ನು ರಚಿಸಿ ದ್ದಾನೆ. ಇವನ ಕವಿತ್ವವು ಸಂಸ್ಕೃತ ಭೂಯಿಷ್ಟವಾಗಿಯೂ, ರಸವತ್ತಾ ಗಿಯಂ ಇರುವುದು, ಶೈಲಿಯು ಅಷ್ಟೇನೂ ಸುಲಭವಾದುದಲ್ಲ. ದಲಿ ೨೬ ಕರ್ಣಾಟಕ ಗ್ರಂಥಮಾಲೆ MMMMwwwMMMMvvvvv wwwMMMMMMMMAM ಕೆಲವು ಕಾಲ ಕಳೆದಮೇಲೆ ಕ್ರಿ. ಶ. ೧೪೦೪ ರಿಂದ ೧೪೦೦ ರ ವರಿಗೆ ವಿಜಯನಗರವನಾಳಿದ ಪ್ರಥಮದೇವರಾಯ ಅಥವ ಎರಡನೆಯ ಬುಕ್ಕರಾ ಯನ ಕಾಲದಲ್ಲಿ ಆಂಧ್ರಭಾಷೆಯು ಅಭಿವೃದ್ಧಿಯನ್ನು ಹೊಂದಿತು. ಇವನ ಕಾಲದಲ್ಲಿ ಜನ್ನಯ್ಯನೂ ಈತನ ಮಗನಾದ ಸಿದ್ದನ್ನನೂ ಮಂತ್ರಿಗಳಾಗಿ ದ್ದರು. ಸಿದ್ದನ್ನನೆಂಬ ಮಂತ್ರಿಗೆ ಆಂಧ್ರಭಾಷೆಯಲ್ಲಿ ಬಹಳ ಪ್ರೇಮವಿ ದ್ದುದರಿಂದ ಈತನು ಅನೇಕ ಗ್ರಂಥಗಳನ್ನು ಬರೆಯಿಸಿದನು, ವಿಕ್ರಮಾರ್ಕೆ ಚರಿತ್ರೆಯು ಇವನ ಕಾಲದಲ್ಲಿ ರಚಿತವಾಯಿತು. ಕಿ. ಶ. ೧೬ರ್v ರಿಂದ ೧೪೦ ರವರಿಗೆ ವಿಜಯನಗರ ಸಾಮ್ರಾಜ್ಯ ವನಾಳಿದ ಸಾಳುವ ನರಸಿಂಹರಾಜನು ಆಂಧ್ರಭಾಷೆಯಲ್ಲಿ ಬಹಳ ಅಭಿ ಮಾನವುಳ್ಳವನಾಗಿ ಕವಿಗಳ ನ್ನಾದರಿಸುತ್ತಲಿದ್ದುದರಿಂದ ಈ ಕಾಲದಲ್ಲಿ ಭಾಷೆಯು ತುಂಬಾ ಅಭಿವೃದ್ಧಿಗೆ ಬಂತು. ಈ ಕಾಲದಲ್ಲಿ ಭಾರತೀ ತೀರ್ಥರ ಶಿಷ್ಯನಾವ ಬಲವ.ರಿವಿನ ವೀರಭದ್ರನೆಂಬ ಪ್ರಖ್ಯಾತ ಕವಿಯು ಜೈಮಿನಿಭಾರತವನ್ನು ಆ೦ಧಭಾಷೆ ಮಲ್ಲಿ ವಿಂಚೆಸಿದುದಲ್ಲದೆ ಇನ್ನೂ ಕೆಲವು ಗ್ರಂಥಗಳನ್ನು ಬರೆದನು. ೧೪ro ರಿ:ದ ೧}{೦೯ ರ ವರಿಗೆ ವಿಜಯನಗರ ಸಾಮ್ರಾಜ್ಯವನ್ನು ವಹಿಸಿದ್ದ ತುಳುವ ನರಸರಾಜನು ಕೊಡ ಪೂರ್ವರಾಜರಂತೆಯೇ ಭಾಷಾಭಿ ಮಾನಿಯಾಗಿ ಕವಿಗಳಿಂದ ಹಲವು ಗ್ರಂಥಗಳನ್ನು ಬರೆಯಿಸಿದನು, ೧೫೦೯ ರಿಂದ ೧೫೩೦ ರ ವರೆಗೆ ವಿಜಯನಗರ ಸಿಂಹಾಸನಾಧಿಷ್ಟಿತನಾಗಿ ಪೂರ್ವ ದಕ್ಷಿಣಾದಿ ದಿಗ್ವಿಜಯಗಳಲ್ಲಿ ಪ್ರಖ್ಯಾತನಾದ ಶ್ರೀಕೃಷ್ಣರಾಯನ ಕಾಲದ ಅಂತು ಆಂಧ್ರಭಾಷೆಯು ಅತ್ಯುಚ್ಛಯಸ್ಥಿತಿಗೆ ಬಂತು. ಈ ಮಹನೀ ಯನು ಕವಿವರಕೃದಯ ಪುಂಡರೀಕಗಳಿಗೆ ಬಾಲಭಾನುವಾಗಿಯ, ಅಪ್ರತಿ ಹತಪ್ರತಾಪನಾಗಿಯ, ತನ್ನ ಉದ್ದುಂಡ ಭುಜದಂಡವನ್ನು ಮೆರೆಯಿಸಿ ಮ ಶಮ್ಮದಿ'ಯರ ಪಾಲಿಗೆ ಸಿಂಹಾವಲೋಕನದಂತೆ ರಾಜ್ಯವನ್ನಾಳುತ್ತಿ ಜೀರ್ಣವಿಜಯನಗರಾದರ್ಶo ೨೭ © * ದ್ದಾಗ ಭಾಷಾಭಿವೃದ್ಧಿಯಾಗುವುದರಲ್ಲಿ ಅತಿಶಯವೇನಿದೆ, ಸಂಸ್ಕೃತಭು ಜಿಗೆ ಭೋಜವಿಕ್ರಮರಂತೆಯ, ಆ೦ಗ್ಲೆಯ ಭಾಷೆಗೆ ಎಲಿಜಬೆತ್ ರಾಣಿ ಯಂತೆಯ ಆಂಧ್ರಭಾಷೆಗೆ ಈ ಕೃಷ್ಣರಾಯನು ಪೋಷಕನಾಗಿದ್ದುದರಿಂದ ಈತನಿಗೆ ಆಂಧ್ರಛೋಜನೆಂಬ ಸುಪ್ರಸಿದ್ದ ನಾಮವು ಬಂತು. ಈತನು ಸ್ವತಃ ಮದಾಲಸಾಚರಿತ್ರೆ, ಸತ್ಯಾನ, ಸಕಲ ಕಥಾಸಾರಸಂಗ್ರಹ ಜ್ಞಾನಚಿಂತಾಮಣಿ, ರಸಮಂಜರಿ, ವಿಷ್ಣು ಚಿತ್ತೀನಿಯ ಮೊದಲಾದ ಹಲವು ಗ್ರಂಥಗಳನ್ನು ವಿರಚಿಸಿದನು. ಈತನ ಸಭೆ ಯಲ್ಲಿ ಇದ್ದ ಅಷ್ಟ ದಿಗ್ಗಜ ಗಳೆಂಬ ಕವಿಗಳು:-ಅಲ್ಲಸ ನಿಪೆದ್ದನ್ನ, ನಂದಿತಿಮ್ಮನ್ನ, ರಾಮಭದ್ರ, ಧೂರ್ಜಟ, ಮಲ್ಲಮ್ಮ, ಸರನ್ನ ರಾವ ರಾಗಭೂಷಣ, ತೆನ್ನಾಲರಾಮಕೃಷ್ಣ ಇವರ. ಈ ಎಂಟು ಮಂದಿಯಲ್ಲಿ ಅಂಧಕವಿತಾಪಿತಾಮಹನೆಂದು ಹೆಸರು ಗೋಂಡ ಅಲ್ಲನಾಸಿಪೆದ್ದನ್ನನೇ ಬಹುಪ್ರಸಿದ್ದನು. ಮಹಾರಾಜನು ಈತ ನನ್ನು ಬಹಳ ವಾಗಿ ಪ್ರತಿ ಸುತ್ತಿದ್ದನು ಪ್ರಸಿದ್ಧವಾದ ಮನುಚರಿತ್ರೆಯು ಇವನ ಕಾವ್ಯಗಳಲ್ಲಿ ಮುಖ್ಯವಾದುದು. ನಂದಿತಿಮ್ಮಣ್ಣನೆಂಬುವನಿಗೆ ಮುಕ್ಕುತಿಮ್ಮನ್ನನೆಂಬ ಹೆಸರು ಉ೦ಟು ಈತನು ಪಾರಿಜಾತಾಪಹರಣ ಎಂಬ ಕಾವ್ಯವನ್ನು ವಿರಚಿಸಿದನು, ಈತನ ಶೈಲಿಯ) ಅತಿ ಮಧುರವೆಂಬು ವುದಕ್ಕೆ “ ಮುಕುತಿಮ್ಮನಾರು ಮುದ್ದು ಪಲುಕು ” ಎಂಬ ವಾಕ್ಯವೇ ಹೆಸರುಗೊಂಡಿದೆ (೩) ರಾಮಭದ-ಈತನು ಸಕಲ ಕಥಾಸಾರಸಂಗ್ರಹ, ರಾಮಾಭ್ಯುದಯ ಮೊದಲಾದ ಕಾವ್ಯಗಳನ್ನು ರಚಿಸಿರ ವನು. (8) ಧರ್ಜಟ-ಈತನು ಕಾಳ ಹಸ್ತಿ ಮಾಹಾತ್ಮವನ್ನು ರಚಿಸಿದನು. (M) ಮಲ್ಲನ್ನ-ಈ ತನು ರಾಜಶೇಖ ತಚರಿತ್ರವೆಂಬ ಕಾವ್ಯವನ್ನು ಸಾಂಗವಾಗಿ ವಿರಚಿಸಿದನು. (೬) ಪಿಂಗಳಸೂರನ್ನ -ಈತನು ರಾಸುವ ಪಾಂಡವೀಯ ಪ್ರಭಾವತಿಪ್ರದ್ಯುಮ್ನ, ಕಳಾಪೂರ್ಣೋದಯ ಎಂಬ ಕಾವ್ಯತ್ಯಯ ೨೮ ಕರ್ಣಾಟಕ ಗ್ರಂಥಮಾಲೆ MMMovian 9 ಣ ವನ್ನು ವಿರಚಿಸಿದನು. ಪ್ರೌಢಕಾವ್ಯರಚನೆಯಲ್ಲಿ ಈಕನ ಪಾಂಡಿತ್ಯವು ಸರ್ವತೋಮುಖವಾಗಿತ್ತು (೭) ರಾಮರಾಜಭೂಷಣನು-ಭಟ್ಟ ಮೂರ್ತಿ ಯಂಬುದು ಇವನ ವಾಸ್ತವವಾದ ಹೆಸರು. ರಾಮರಾಜರ ಆಸ್ಥಾನದಲ್ಲಿದ್ದು ದರಿಂದ ಇವನಿಗೆ ಈ ಬಿರುದು ನಾವು ಬಂತೆಂದು ಹೇಳುವರು. ವಿಖ್ಯಾತ ವಾದ ವಸುಚರಿತ್ರೆಯನ್ನು ಬರೆದವನು ಇವನೇ, ಈ ಕಾವ್ಯವು ಆಂಧ) ಗ್ರಂಥಗಳಲ್ಲಿ ಅಗ್ರಗಣ್ಯವೆನಿಸಿಕೊಂಡಿದೆ. ಈ ಕವಿಯ ಹರಿಶ್ಚಂದ್ರ ನಲೋಪಾಖ್ಯಾನವೆಂಬ ದೋ ಥ-ಕಾವ್ಯವನ್ನೂ, ನರಸಭೂಪಾಲೀಯವೆಂಬ ಅಲಂಕಾರಗ್ರಂಥವನ್ನೂ ಬರೆದಿರುವನು. () ತೆನ್ನಾಲರಾಮಲಿಂಗಈತನು ವಿಕಟಕವಿಯೆಂದು ಹೆಸರುಗೊಂಡ ರಾಮಕೃಷ್ಣನು. ಇವನು ಪಾಂಡುರಂಗ ಮಹಾತ್ಮ ವನ್ನು ರಚಿಸಿರುವನು. ಕೃಷ್ಣರಾಯನು ವಿಜಯನಗರದಲ್ಲಿ ಹೊಸದೇವಾಲಯಗಳನ್ನೂ ಅರ ಮನೆಗಳನ್ನೂ, ಕಾಲುವೆಗಳನ್ನೂ ಸಿಕ್ಕಿಸಿ, ಹಂನೇ ವಿರೂಪಾಕ್ಷದಲ್ಲಿನ ಹಂಪಾಪತಿದೇವಾಲಯಕ್ಕೆ ಬಂದು ಗೋಪುರವನ್ನು ಕಟ್ಟಿಸಿದನು. ಪೂರ ದಿಗ್ವಿಜಯ ಯಾತ್ರೆ ಯಾವ ತರುವಾಯ ಕೃಷ್ಣಸ್ವಾಮಿಯ ದೇವಾಲಯವೆಂಬ ಹೊಸಗುಡಿಯನ್ನು ಕಟ್ಟಿಸಿದನು. ಆಗೇ ವರುಷದಲ್ಲಿ ಹಜಾರರಾಮಸ್ವಾ ಮಿಯ ದೇವಾಲಯವೊಂದನ್ನು ಕಟ್ಟಿಸಿದನು. ದೇವಾಲಯಗಳಲ್ಲೆಲ್ಲಾ ಅತ್ಯು ತಮವೆನಿಸಿಕೊಂಡ ಕೆತ್ತನೆಯ ಕೆಲಸದಲ್ಲಿ ಹೆಸರುಗೊಂಡು ಶಿಲ್ಪಶಾಸ್ತ್ರ ನೈಪುಣ್ಯವನ್ನೂ ಪ್ರಕಟಿಸುವ ವಿಠಲಸ್ವಾಮಿಯ ದೇವಾಲಯವೊಂದನ್ನು ಕಟ್ಟಿಸಲಾರಂಭಿಸಿದನು ಈತನ ಈಚೆಗೆ ಬಂದ ದೊರೆಗಳು ಇದನ್ನು ಅಭಿ ವೃದ್ಧಿ ಮಾಡಿದರು ೧೫೦೫ ರಲ್ಲಿ ಉ ನರಸಿಂಹನೆಂದಂದು ವಿಗ್ರಹವನ್ನು ಶಿಲೆಯಲ್ಲಿ ಕೆತ್ತಿಸಿದನು ಈ ವಿಗ್ರಹವು ಬಲುದೊಡ್ಡದಾಗಿ ನೋಟಕರಿಗೆ ಭಯಂಕರವಾಗಿದೆ. ಈ ಪುಸ್ಸು ಕದ ಉತ್ತರ ಭಾಗದಲ್ಲಿ ಈ ದೇವಾಲಯದ ಮತ್ತು ಇತರ ದೇವಾಲಯಗಳ ವಿಗ್ರಹಗಳು, ಬುರುಜುಗಳು ಪ್ರಕಾರ - ೨ ಇ ಜೀರ್ಣವಿಜಯನಗರಾದತto ೨೯ wwwmmmmmmmmmmmm - ಢ ಗಳು ಮುಂತಾದವುಗಳ ಪ್ರಕೃತಸ್ಥಿತಿಯನ್ನು ವಾಚಕರು ಸುಲಭವಾಗಿ ತಿಳಿಯ ಬಹುದು, ಕೃಷ್ಣರಾಯರು ತಮ್ಮ ತಾಯಿಯಾದ ನಾಂಗಲಾಂಬಿಕೆಯ ಹೆಸರಿನಲ್ಲಿ ನಾಗಲಾ ಪುರವೆಂಬ ಸುಂದರವಾದ ಪಟ್ಟಣವನ್ನು ಕಟ್ಟಿಸಿದರು. ೧೫೦೦ ರಲ್ಲಿ ವಿಜಯ ನಗರವನ್ನು ನೋಡಲಿಕ್ಕೆ ಬಂದಿದ್ದ ಪೋರ್ಚು ಗೀಸ್ ನೊಬ್ಬನೂ, ಆತನ ಹಿಂದೆ ಬಂದಿದ್ದ ಪೆಯಿಕ್' ಎಂಬುವನೂ ವಿಜ ಯನಗರವನ್ನು ಹಲವಿಧವಾಗಿ ಬಣ್ಣಿಸಿರುವರು. ( ಈತನರಾಜ್ಯದಲ್ಲಿ ಒಂಭೈನೂರು ಮೈಲುಗಳ ಸಮುದ್ರತೀರವಿ ರುವುದು, ಈ ರಾಜನು ಯುದ್ಧ ಮಾಡುವುದಕ್ಕಾಗಿ ಹತ್ತು ಲಕ್ಷ ಸೈನ್ಯಗ ಳನ್ನು ಎಲ್ಲಿ ಬೇಕಾದರೆ ಅಲ್ಲಿ ಸಿದ್ದವಾಗಿರುವಂತೆ ಮಾಡಿ ಕೊಂಡಿದ್ದಾನೆ. ಈ ಸೇನೆಯಲ್ಲಿ ಅಂಜು ಸುರಕಿಯು ಒಬ್ಬನಾದರೂ ಇಲ್ಲ, ಎಂಟು ಸಾವಿರ ಆನೆ ಗಳನ್ನೂ ಐನೂರು ಕುದುರೆಗಳನ್ನೂ ಸಿದ್ಧವಾಗಿಟ್ಟು ಕೊಂಡು, ನಗರದಲ್ಲಿನ ಹುಟ್ಟುವಳಿಯನ್ನು ಅದಕ್ಕಾಗಿ ವೆಚ್ಚ ಮಾಡುತ್ತಿರುವನು ” ಅ೦ದ್ರ ಕವಿವ ಕ್ಯರ ಹೃದಯ ಕಮಲಗಳಿಗೆ ಬಾಲಾರ್ಕನಾಗಿಯ ಸಂಸ್ಕೃತಾಂಧವಿದ್ಯಾ ಭೋಜನಾಗಿಯೂ, ಮನುಚರಿತ್ರಾದಿ ಉತ್ತಮ ಗ್ರಂಥಗಳಿಗೆ ಪತಿಯಾ ಗಿಯೂ, ತನ್ನ ಉದ್ದಂಡ ಭುಳಾದಂಡವು ಮೆರೆಯಲು ತುರುಷ್ಕರ ಪಾಲಿನ ನಿಂಹಾವಲೋಕನನಾಗಿ ರಾಜ್ಯವನ್ನಾಳುವನಾಗಿಯ, ಸಮರವಿಜಯನಾ ಗಿಯ, ಆಂಧ್ರದೇಶಕ್ಕೂ ಆಂಧ್ರ ರಾಜರಿಗೂ ಆಂಧ್ರಭಾಷೆಗೂ ಒಪ್ಪವಿಟ್ಟವ ನಾಗಿಯೂ ಇದ್ದ ಶ್ರೀಕೃಷ್ಣ ದೇವನಹಾರಾಜನು ೧೫೩೦ ನೆಯ ಇಸವಿ ಯಲ್ಲಿ ಕೀರ್ತಿಶೇಷನಾದನು. ಈ ಮಹನೀಯನು ಅಸ್ತಮಿಸಿದತರುವಾಯ ಈತನಿಗೆ ಪುತ್ರ ಸಂತಾನ ವಿಲ್ಲದ್ದರಿಂದ ಈತನ ಸಹೋದರನಾದ ಅಚ್ಯುತರಾಯನು ವಿಜಯನಗದ ಸಿಂಹಾಸನವನ್ನು ಹತ್ತಿ ೧೫೩೦ ರಿಂದ ೧೫೪೦ ರ ತನಕ ಆಳಿದನು, ದುರ್ಬಲ ನಾದ ಈತನು ವಿಷಯಾಸಕ್ತನಾಗಿ ಅಂತಃಪುರವನ್ನು ಬಿಟ್ಟು ಹೊರಕ್ಕೆ ಹೊರಡದೆಯೇ ಇದ್ದುದರಿಂದ ಪ್ರಜಾನುರಾಗಕ್ಕೆ ದೂರವಾಗಿದ್ದನು. ೩೦ ಕರ್ಣಾಟಕ ಗ್ರಂಥಮಾಲೆ ಲ ಣ ಅಚ್ಚುತರಾಯನ ತರುವಾಯ ಇವನ ಸಹೋದರನಾದ ಸದಾಶಿವ ರಾಯನು ರಾಜ್ಯಾರೂಢನಾದನು. ಈತನೂ ಪರಾಕ್ರಮ ಹೀನನಾಗಿದ್ದುದ ರಿಂದ ಹೆಸರಿಗೆ ಮಾತ್ರ ಇವನು ರಾಜನಾಗಿದ್ದರೂ ಕೃಷ್ಣರಾಯನ ಅಳಿಯ ರಾಮರಾಜನೆ: ರಾಜ್ಯ ಪರಿಪಾಲನೆ ಮಾಡುತಿದ್ದುದರಿಂದ ಕೊನೆಗೆ ಇವನೇ ಅರಸನಾದನು. ಈ ರಾಮರಾಜನಿಗೂ ಬಹಮನಿ ಧೋರೆಗಳಿಗೂ ವಿರೋಧವು ಹೆಜ್ಜೆ ಹಲವು ಯುದ್ದಗಳಾದುವು. ವಿಭಾಗಗಳಾಗಿ ಒಡೆದು ಹೋಗಿದ್ದ ಭಾಮಿನೀ ರಾಜ್ಯಗಳ ಪ್ರಭುಗಳೆಲ್ಲರೂ ಏಕೀಭವಿಸಿ ೧೫೬೫ ರಲ್ಲಿ ದಂಡೆತ್ತಿ ಬಂದರು. ಭಾಮಿನಿ: ವಿಜಯನಗರ ರಾಜ್ಯಗಳಿಗೆ ತಾಳೀಕೋಟೆಯ ಹತ್ತಿರ ಫರ ವಾದ ಯುದ್ಧ ನಡೆದು ರಾಮರಾಜನು ಹತನಾದನು, ಹಿಂದುಗಳು ಸೋತು ಹೋದರು. ಹೀಗೆ ಸೋತುಹೋದ ಸೈನಿಕರು ವಿಜಯನಗರಕ್ಕೆ ಹೋಗಿ ತನ್ನ ಭಾರಾ ಪುತ್ರಾದಿಗಳನ್ನೂ ಸಾಧ್ಯವಾದಷ್ಟು ಧನಧಾನ್ಯಗಳನ್ನು ತೆಗೆ ದುಕೊಂಡು ಪಟ್ಟಣವನ್ನು ಬಿಟ್ಟು ಓಡಿಹೋದರು. ಈ ಯುದ್ಧ ಜದದ ಮೂರನೆಯದಿನ ಮಹಮ್ಮದೀಯ ಸೈನಿಕರು ಹೋಗಿ ವಿಜಯ ನಗರವನ್ನು ಧ್ವಂಸಮಾಡಿ ಘೋರ ಕೃತ್ಯಗಳನ್ನು ನಡಿಸಿ, ಕೊಳ್ಳೆ ಹೊಡೆದುಕೊಂಡು ಹೋದರು ಸುತ್ತಮುತ್ತಲೂ ಇದ್ದವರು ಊಟ ಮಾಡಿಕೊಂಡು ಪಟ್ಟಣ ವನ್ನು ಹಾಳುಮಾಡಿದರು. ಉಳಿದ ಪುರವಾಸಿಗಳು ಆ ಊರ ಬಿಟ್ಟು ತಮಗೆ ಅನುಕೂಲವಿದ್ದ ಕಡೆಗಳಿಗೆ ಓಡಿಹೋದರು. ವಿಜಯ ನಗರವು ವಿಜನಸ್ಥಾನ ವಾಯಿತು. ಆಹಾ! ಎಷ್ಟೋ ವೈಭವದಿಂದ ಹೊಳೆಯುತ್ತಿದ್ದ ಈಪಟ್ಟಣವು ಸ್ಪಲ ಕಾಲದಲ್ಲಿಯೇ ಯಾವಗತಿಗೆ ಬಂತು ? * ಜಾತಸ್ಯ ಮರಣಂಧುವಂ ?” ಎಂಬ ವಾಕ್ಯವು ಸುಳ್ಳಲ್ಲ. ಮುಂದೆ ಈ ಶಿಥಿಲ ವಿಜಯನಗರದ ಪ್ರತಿಬಂದು ಸ್ಥಳ ನನ್ನೂ ಸಮಗ್ರವಾಗಿ ನೋಡೋಣ. ಟ ಜೀರ್ಣವಿಜಯನಗರಾದರ್ಶo ೩೧ ವಿಜಯನಗರವನ್ನಾಳಿದ ಅರಸರ ಪಟ್ಟಿ (ಮೈಸೂರು ಗೆಜೆಟಿಯರ್.) ೧ನೇ ಹರಿಹರರಾಯ (ಹಕ್ಕರಾಯ) ಕ್ರಿ. ಶ. ೧೩೩೬-೧೩೫೦ ೧ ನೇ ಬುಕ್ಕರಾಯ ... ... ೧೩೫೦–೧೬೩೯ ೨ ನೇ ಹರಿಹರರಾಯ ... ೧೩೭೯- ೧೪೦೫ ೧ ನೇ ದೇವರಾಯ (೦ ನೇ ಬುಕ್ಕರಾಯ) ೧೬೦೬- ೧೪೧೫ ೧ ನೇ ವಿಜಯರಾಯ ೧೪೧೬ - ೧೪೧೭ ೧ ನೇ ದೇವರಾಯ ೧೪೧೭ - ೧೪೪ ಮಲ್ಲಿಕಾರ್ಜುನ (೨ ನೇ ವಿಜಯರಾಯ) ೧೪೪೬- ೧8೩೭ ವಿರೂಪಾಕ್ಷರಾಯ ೧೪೬v-೧೪ರ್೭ ಸಾಳುವ ನರಸಿಂಹರಾಯ ... ೧೪೭೯-೧೦v೬ ಇಮ್ಮಡಿ ನರಸಿಂಹರಾಯ ೧೪vv-೧೫ov ಕೃಷ್ಣರಾಯ ೧೬೦v-೧೫೦೯ ಅಚ್ಚು ತರಾಯ | ೧೫೩೦-೧೫೪೦ ಸದಾಶಿವರಾಯ (ರಾಮರಾಜ ೧+{೬೫ ರ ತನಕ, ತಿರುಮಲರಾಯ) ೧೫{೬& ರಿಂದ ೧೫೬೪ ೧ ನೇ ಶ್ರೀರಂಗರಾಯ ೧೫೭೪-೧೫{v೫ ೧ ನೇ ವೆಂಕಟಪತಿರಾಯ ೧೫{v೫-೧೬೧೪ ರಾಮದೇವ ೧೬೧೫-೧೬.೦೫ ೨ ನೇ ವೆಂಕಟಪತಿರಾಯ ೧೬೦೬ -೧೬೩೯ ೨ ನೇ ಶ್ರೀರಂಗರಾಯ ೧೬೩೯- ೧೬೬೪ ಈ ಕಾಲಮಾನದ ಪಟ್ಟಿಗೂ, ಈ ಪುಸ್ತಕದಲ್ಲಿನ ವಿವರಣೆಗೂ ಸ್ವಲ್ಪ ಹೆಚ್ಚು ಕಡಿಮೆ ಯಿರಬಹುದು, ಶಾಸನಗಳ ಆಧಾರದಿಂದ ವಿವರಿಸಿರುವ ಈ ಪಟ್ಟಿಯು ಬಹುಮಟ್ಟಿಗೆ ವಾಸ್ತವವೆಂದು ನಂಬಬಹುದು.

• • • ೩ 49 ಕರ್ಣಾಟಕ ಗ್ರಂಥಮಾಲೆ ಜೀರ್ಣ ವಿಜಯನಗರಾದರ್ಶ ಉತ್ತರಭಾಗ. ಈ ವಿಜಯನಗರವು ಪೂರ್ವಕಾಲದಲ್ಲಿ ವಿದೇಶೀಯರಿಂದ ಹೇಗೆ ಅಭಿ ವರ್ಣಿಸಲ್ಪಟ್ಟಿತೋ ಆ ವಿಷಯವನ್ನು ಸ್ವಲ್ಪಮಟ್ಟಿಗೆ ತಿಳಿಸಿ, ಪ್ರಕೃತದಲ್ಲಿ ನೋಟಕರಿಗೆ ಕಾಣಬರುವ ಸ್ಥಿತಿಯನ್ನು ತರುವಾಯ ಬರೆಯುವುದು ಉತ್ತ ನವೆಂದು ತಿಳಿದು ಹಾಗೆಯೇ ತಿಳಿಸಲಾಗುವುದು: - ಕ್ರಿ. ಶ. ೧೪೦೦ ರಲ್ಲಿ ಈ ದೇಶಕ್ಕೆ ಬಂದು ವಿಜಯನಗರವನ್ನು ನೋಡಿದ 'ನಿಕೊಲೋಡೆಯ ಕೊಂಟೆ' ಎಂಬ ಇಟಲಿ ದೇಶಿಯ ನೊಬ್ಬನು ಈ ನಗರದ ವೈಭವವನ್ನು ಲ್ಯಾರ್ಟ ಭಾಷೆಯಲ್ಲಿ ಹೀಗೆ ಅಭಿವರ್ಣಿಸಿ ರುವನು ವಿಜಯನಗರ ಎಂಬ ದೊಡ್ಡ ಪಟ್ಟಣವು ಬಹು ನಿಡಿದಾಗಿರುವ ಪರ್ವ ತಗಳ ಹತ್ತಿರ ಕಟ್ಟಲ್ಪಟ್ಟಿದೆ, ಆ ಪಟ್ಟಣದ ಸುತ್ತಳತೆ ಇಪ್ಪತ್ತು ಮೈಲುಗ ೪ವೆ. ಆ ಪಟ್ಟಣದಲ್ಲಿ ಆಯುಧಗಳನ್ನು ಧರಿಸಲು ಸಮರ್ಥರಾದವರು ತೊಂಬತ್ತು ಸಾವಿರ ಭಟರಿದ್ದಾರೆ. ಮತ್ತು ಆ ಪ್ರಾಂತಗಳಲ್ಲಿ ವಾಸಮಾಡುತ್ತಿ ರುವ ಜನರು ತಮ್ಮ ಇಷ್ಟಾನುಸಾರ ಬಹು ಭಾರೈಯರನ್ನು ಪರಿಗ್ರಹಿಸು ತಿರುವರು, ಅವರು ಬೇವಯಾತ್ರೆಯನ್ನು ಮುಗಿಸಿದ ತಮ್ಮ ಪತಿಯೊಂದಿಗೆ ಸುಡಲ್ಪಡುತ್ತಿರುವರು, ಅವರ ದೊರೆಯು ಹಿಂದೂಸ್ಥಾನದಲ್ಲಿರುವ ಉಳಿದ ರಾಜರಿಗಿಂತ ತುಂಬಾ ಬಲಿಷ್ಠನು, ಆತನಿಗೆ ಹನ್ನೆರಡು ಸಾವಿರಮಂದಿ ಹೆಂಡತಿ ಯರಿರುವರು. ಅವರಲ್ಲಿ ನಾಲ್ಕು ಸಾವಿರಮಂದಿ ದೊರೆಯು ಎಲ್ಲಿಗೆ ಹೋ ಗುವನೋ ಅಲ್ಲಿಗೆ ಕಾಲುನಡೆಯಿಂದ ನಡೆದು ಬರುವರು ಇನ್ನು ನಾಲ್ಕು ಸಾವಿರ ಸ್ತ್ರೀಯರು ಸುಂದರಾಲಂಕಾರ ಭೂಷಿತೆಯರಾಗಿ ಕುದರಗಳಮೇಲೆ ಕೂತುಕೊಂಡು ಹಿಂದೆ ಬರುತ್ತಿರುವರು. ಎರಡು ಮೂರು ಸಾವಿರ ಜೀರ್ಣವಿಜಯನಗರಾದರ್ಶo ೧೩ wnAnunnqvynsvvvvvvvvvownqwwwnMorinnwww ಪತ್ನಿಯರು ಆತನು ಮೃತನಾದ ಅವನ ಶವದೊಂದಿಗೆ ಅಗ್ನಿ ಪ್ರವೇಶ ನಿ ಯಿಸಿಕೊಂಡಿದ್ದಾರೆ. ಸಂವತ್ಸರದಲ್ಲಿ ಬಂದಾನೊಂದು ಕಾಲದಲ್ಲಿ ತಮ್ಮ ಮನೆದೇವತೆಯಾಗಿ ಪೂಜಿಸುವ ವಿಗ್ರಹವನ್ನು ಎರಡು ರಥಗಳ ಮಧ್ಯದಲ್ಲಿಟ್ಟು ಪಟ್ಟಣದ ಬೀದಿ ಗಳಲ್ಲಿ ಮೆರವಣಿಗೆ ಮಾಡುವರು. ಹರೆಯದ ಹುಡುಗಿಯರು ದಿವ್ಯವಸ್ತು ಲಂಕಾರಭೂಷಿತೆಯರಾಗಿ ದೇವರನ್ನು ಕುರಿತು ಹಾಡುಗಳನ್ನು ಹಾಡುತ್ತಾ ಹಿಂಬಾಲಿಸಿ ಬರುವರು. ಅನೇಕರು ಭಕ್ಖಾವೇಶಪರವಶರಾಗಿ ದೇವರ ರಥಚಕ್ರಗಳ ಕೆಳಗೆ ಬಿದ್ದು ಮೃತಿಹೊಂದಿದರೆ ಭಗವಂತನು ಮೋಕ್ಷ ವನ್ನು ಕೊಡುವನೆಂಬ ನಂಬುಗೆಯಿಂದ ಅಮೇರೆಗೆ ಮಾಡಿ ಚಿತ್ರಣಗಳನ್ನು ಕಳೆದುಕೊಳ್ಳುವರು. ಮತ್ತೆ ಕೆಲವರು ಕೊರಳಿಗೆ ಉರುಲುಹಾಕಿಕೊಂಡು ರಥಕ್ಕೆ ಕಟ್ಟಿಕೊಂಡು ಬಾಧೆಪಡುತ್ತ ಪ್ರಾಣಗಳನ್ನು ಬಿಡುವರು. ಆ ಜನರು ವರ್ಷಕ್ಕೆ ಮರು ದೊಡ್ಡ ಹಬ್ಬಗಳನ್ನಾಚರಿಸುವರು. ಅವುಗಳಲ್ಲಿ ಬಂದು ಹಬ್ಬದದಿನ ಆಬಾಲವೃದ್ಧರಾದ ಸ್ತ್ರೀಪುರುಷರೂ ನದಿಗಳಲ್ಲಿ ಯ ಸಮುದ್ರಗಳಲ್ಲಿಯ ಸ್ನಾನಗಳನ್ನು ಮಾಡಿ, ನೂತನವಸ್ತ್ರಗಳನ್ನು ಧರಿಸಿ, ಶುಜವ್ರತರಾಗಿ ಭಜನೆಗಳನ್ನೂ, ನರ್ತನಗಳನ್ನೂ, ಆತನಗಳನ್ನೂ ಮಾ ಡುತ್ತ ಮರುರಾತ್ರಿಗಳನ್ನು ಕಳೆಯುವರು, ಮತ್ತೊಂದು ಹಬ್ಬದದಿನ ದೇವಾಲಯಗಳ ಒಳಗೂ, ಹೊರಗೂ, ದೀಪಾರಾಧನೆಗಳನ್ನು ಮಾಡುತ್ತಿರು ವರು. ಮರನೇ ಹಬ್ಬವು ನವರಾತ್ರಿಯತನಕ ಜರುಗಿಸಲ್ಪಡುವುದು. ಆ ದಿನಗಳಲ್ಲಿ ಬೀದಿಗಳಲ್ಲಿ ಕಂಭಗಳನ್ನು ನಿಲ್ಲಿಸಿ ಅವುಗಳ ಕೊನೆಗೆ ವಿಧವಿಧ ವರ್ಣದ ವಸ್ತ್ರಗಳನ್ನೂ ಬರೀಬಟ್ಟೆಗಳನ್ನೂ ಕಟ್ಟುವರು, ಮತ್ತು ಒಂದೊಂ ದುದಿನ ಸಮಸ್ತ ಭೂತಗಳನ್ನೂ ಸಮದೃಷ್ಟಿಯಿಂದ ನೋಡುವ ಒಬ್ಬೊಬ್ಬ ಭಕ್ಕವರ್ ನನ್ನು ಆ ಕಂಭಗಳ ತುದಿಯಲ್ಲಿ ಕುಳ್ಳಿರಿಸಿ, ಅವನನ್ನು ನಾನಾ ವಿಧವಾದ ಹಣ್ಣುಗಳಿಂದ ಹೊಡೆಯುತ್ತಿರುವರು. ಆ ಸೆಟ್ಟುಗಳನ್ನು ಅವರು ಬ ಬ W) ೩೪ ಕರ್ನಾಟಕ ಗ್ರಂಥಮಾಲೆ ತುಂಬಾ ಸೈರಣೆಯಿಂದ ಸಹಿಸಿಕೊಂಡಿರುವರು. ಈ ಮರು ಹಬ್ಬಗಳ ಲ್ಲದೆ ಮತ್ತೊಂದು ಹಬ್ಬವು ಮೂರು ರಾತ್ರಿಗಳು ಆಚರಿಸಲ್ಪಡುವುದು. ಆ ದಿನಗಳಲ್ಲಿ ವಸಂತವೆಂಬ ಹೆಸರಿನಿಂದ ಅರಿಸಿನದ ನೀರನ್ನು ರಾಜಮಾರ್ಗ ಗಳಲ್ಲಿ ನಡೆಯುವ ಜನರಮೇಲೆ ಚೆಲ್ಲುತ್ತಿರುವರು. ಎಂದು ಬರೆದಿರುವನು, ಈ ನಿಕೋಲೋಡೆಯ ಕೊಂಟೆ ವಿದೇಶೀ ಯನಾದುದರಿಂದ ರಾಣಿಗಳ ಪರಿಚಾರಿಕೆಯರನ್ನು ಕೂಡ ರಾಜಭಾರೈಯ ರೆಂದು ಊಹಿಸಿ ತಪ್ಪು ತಿಳಿವಳಿಕೆಯಿಂದ ಹನ್ನೆರಡುಸಾವಿರ ಪತ್ನಿಯರಿರು ವರೆಂದು ಬರೆದಿರಬಹುದು, ಆತನು ತಿಳಿಸಿರುವ ನಾಲ್ಕು ಹಬ್ಬಗಳು ಯಾವು ವೆಂದರೆ-(೧) ಯುಗಾದಿಹಬ್ಬ, (೨) ದೀವಳಿಗೆ, (೩) ಮಹಾನವಮಿ ಹಬ್ಬ, (೨) ಹೋಳಿಹಬ್ಬ ವಿಜಯನಗರವು ವಜ್ರಗಳಿಗೂ ಪ್ರಸಿದ್ಧವಾಗಿರು ತದೆಂದು ಆತನು ತಿಳಿಸಿದ್ದಾನೆ. ತರುವಾಯ ೧೪೪೩ ನೇ ವರುಷದಲ್ಲಿ ( ಅಬ್ದುಲ್ ರಜಾಕ್ ” ಎಂಬಾ ತನು ವಿಜಯನಗರವನ್ನು ನೋಡಲಿಕ್ಕೆ ಬಂದು ಆ ನಗರವನ್ನು ಹೀಗೆ ವರ್ಣಿ ನಿರುವನು. “ ೧೪೪೩ ನೇ ಇಸವಿ ಏಪ್ರಿಲ್ ತಿಂಗಳ ಕೊನೆಯಲ್ಲಿ ವಿಜಯನಗರ ವನ್ನು ಪ್ರವೇಶಿಸಿದೆ. ನಮ್ಮನ್ನು ಕರೆದೆಯಾ ದಕ್ಕಾಗಿ ಪರಿವಾರ ಜನರ ನಮಗೆ ಎದುರಾಗಿ ಬಂದು ನಮ್ಮನ್ನೊಡಗೊಂಡು ಹೋದರು. ನಮ್ಮ ವಾಸಕ್ಕಾಗಿ ರಾಜನು ಸುಂದರವಾದ ಅರಮನೆಯನ್ನು ಕೊಡಿಸಿದನು. ಆತನ ರಾಷ್ಟ್ರವು ಕೃಷ್ಣಾ ನದಿಯಿಂದ ಕನ್ಯಾಕುಮಾರಿಯ ತನಕ ವ್ಯಾಪಿ ನಿದೆ ಆ ರಾಜಧಾನಿಯಲ್ಲಿ ಪರ್ವತಗಳನ್ನು ಹೋಲುತ್ತಾ ವಿಕಾರವಾದ ಆಕಾರವನ್ನುಳ್ಳ ಸಾವಿರ ಆನೆಗಳಿರುವುವು. ಇವರಲ್ಲಿ ಹನ್ನೊಂದುಲಕ್ಷ ಸೈನ್ಯವಿರುವುದು, ಈ ಕಾಲದಲ್ಲಿ ಹಿಂದೂಸ್ಥಾನದಲ್ಲಿ ಈತನಂತೆ ನಿರಂಕು ಶಾಧಿಕಾರವುಳ್ಳ ಮತ್ತೊಬ್ಬ ರಾಜನು ಯಾವನೂ ಕಾಣಿಸಲಿಲ್ಲ. ವಿಜಯ ಆಡು ಜೀರ್ಣವಿಜಯನಗರಾದಶ#೦. ೩೫ ನಗರದಂತಹ ದೊಡ್ಡ ಪಟ್ಟಣವನ್ನು ಇದುವರೆಗೆ ನಾನು ಎಲ್ಲಿಯ ಕಣ್ಣು ಗಳಿಂದ ನೋಡಲಿಲ್ಲ, ಪ್ರಪಂಚದಲ್ಲಿ ಆ ನಗರವನ್ನು ಹೋಲುವ ಮತ್ತೊಂ ದು ಪಟ್ಟಣವಿರುವುದೆಂಬುದನ್ನು ನನ್ನ ಕಿವಿಗಳಿಂದ ಇದುವರೆಗೆ ಕೇಳಲಿಲ್ಲ. ಸಸ್ಯ ಪ್ರಕಾರಗಳಿಂದ ಸುತ್ತಲ್ಪಟ್ಟ ಏಳು ದುರ್ಗಗಳಿಂದ ಸುರಕ್ಷಿತವಾಗಿ ಆ ನಗರವು ಕಂಗೊಳಿಸುತ್ತಲಿದೆ. ಮೊದಲನೆಯ ದುರ್ಗದ ಸುತ್ತಲೂ ಎತ್ತರ ವಾಗಿರುವ ಕಲ್ಲುಗಳು ಕುದುರೆಗಳಾಗಲಿ, ಭಟರ್ರಾ ಲಿ ಪ್ರವೇಶಿಸುವುದಕ್ಕೆ ಅವಕಾಶವಿಲ್ಲದಹಾಗೆ ಭೂಮಿಯಲ್ಲಿ ಅರ್ಧದಮಟ್ಟಿಗೆ ನೆಡಲ್ಪಟ್ಟಿದೆ, ಉತ್ತರ ಭಾಗದಲ್ಲಿರುವ ಏಳನೇ ದುರ್ಗವೇ ಮಹಾರಾಜರು ವಾಸಮಾಡುವ ಅಂತಃ ಪುರ ಮಂದಿರವಾಗಿದೆ. ಮೊದಲನೆಯ ದುರ್ಗದ ದಕ್ಷಿಣದ ಕೊನೆಯ ಮೊದ ಲುಗೊಂಡು ಉತ್ತರದ ಕೊನೆಯ ತನಕ ಇರುವ ದೂರ ಎಂಟುಮೈಲುಗಳು ಗಿವೆ, ಮೊದಲನೆಯ ದುರ್ಗ ಮೊದಲು ಮೂರನೆಯ ದುರ್ಗದತನಕ ಇರುವ ಪ್ರದೇಶವೆಲ್ಲವೂ ಸಾಗುವಳಿ ಮಾಡಲ್ಪಟ್ಟ ಹೊಲಗಳಿಂದ, ಗೃಹಗಳಿ೦ ದಲೂ, ಉದ್ಯಾನವನಗಳಿಂದಲೂ, ಫಲವೃಕ್ಷಗಳಿಂದಲೂ ತುಂಬಿವೆ. ಮರಿ ನೆಯ ದುರ್ಗ ಮೊದಲುಗೊಂಡು, ಏಳನೆಯದುರ್ಗದತನಕ ಇರುವ ಪ್ರದೇ ಶವೆಲ್ಲವೂ ಅಸಂಖ್ಯಾತಗಳಾದ ಜನಸಂಫುಗಳಿಂದ ತುಂಬಿ ಆಂಗಡಿಗಳಿಂದಲೂ ಪುತ್ತಿವೆ ಅರಮನೆಗೆ ಸವಿಾಪವಾಗಿ ನಾಲ್ಕು ಬೀದಿಗಳು ಒಂದಕ್ಕೊಂದು ಎದುರಾಗಿ ಸಾಲುಗೊಂಡಿವೆ. ಉತ್ತರದಿಕ್ಕಿನಲ್ಲಿ ರಾಜಮಂದಿರದದ್ವಾರಮಂ ಟಪವಿರುವುದು. ಪ್ರತಿ ಬೀದಿಯಲ್ಲಿಯ ಅಂದವಾದ ತಳಿರುಗಳಿಂದ ಕೂಡಿದ ಉನ್ನ ತಗಳಾದ ಕಮಾನುಗಳು ನಿರ್ಮಿಸಲ್ಪಟ್ಟಿವೆ. ಎಲ್ಲವುಗಳಿಗಿಂತಲೂ, ರಾಯರ ಆಸಾನಮಂಟಪವು ಅತ್ಯುನ್ನತವಾಗಿದೆ. ಬೀದಿಗಳು ವಿಶಾಲವಾಗಿಯೂ, ದೀರ್ಘವಾಗಿಯ, ರಮಣೀಯವಾಗಿಯೂ ಇವೆ. ಎಲ್ಲಾ ಕಡೆಯಲ್ಲಿಯೂ, ಗುಲಾಬಿಹೂವುಗಳು ಮಾರಲ್ಪಡುತ್ತವೆ. ಅಲ್ಲಿನ ಪ್ರಜೆಗಳು ಗುಲಾಬಿ (೬ ಕರ್ಣಾಟಕ ಗ್ರಂಥಮಾಲೆ m ಹೂವುಗಳನ್ನು ಆಹಾರಕ್ಕಿಂತಲೂ ಆವಶ್ಯಕವಾದವುಗಳೆಂದು ಭಾವಿಸು ತಾರೆ, ಮುತ್ತುಗಳು, ಕಂಪುಗಳು, ನೀಲಗಳು, ವಜ್ರಗಳು ಮೊದಲಾದವು ಬಹಿರಂಗವಾಗಿ ಅಂಗಡಿಗಳಲ್ಲಿ ವಿಕ್ರಯಿಸಲ್ಪಡುತ್ತವೆ. ಈ ಪ್ರದೇಶಗಳ "ಯ ರಾಜಾಂತಃಪುರಪ್ರದೇಶಗಳಲ್ಲಿಯೂ, ನಯವಾಗಿ ಹಾಲುಗಾರ ಮಾಡಲ್ಪಟ್ಟ ಕಲ್ಲಿನ ಕೊಳಾಯಿಗಳ ಮೂಲಕ ಹಲವು ಕಾಲುವೆಗಳು ಜಲ ಪೂರ್ಣವಾಗಿ ಪ್ರವಹಿಸುತ್ತಲಿವೆ. ರಾಯರ ಅರಮನೆಯ ದ್ವಾರಮಂಟಪಕ್ಕೆ ಎಡಭಾಗದಲ್ಲಿ ರಾಜನಗರಿಯಂತೆ ಇರುವ ” ದಿರ್ವಾಖಾನಾ “ ಎಂಬ ಮಂದಿ ರವಿದೆ. ಅದಕ್ಕೆ ಎದುರಾಗಿ ಒಂದು ಸಭಾಭವನವಿದೆ. ಆ ಸಭಾಭವನದ ಕೊನೆಯಲ್ಲಿ ಟೊಬೆದಾರರು ನಿಂತುಕೊಂಡು ಇರುವರು. ಆ ಸಭಾಮಂ ಟಪದ ಮಧ್ಯಭಾಗದಲ್ಲಿ ದಿವಾನನು ಕುಳಿತುಕೊಳ್ಳುವ ಪೀಠವಿದೆ. ಅಲ್ಲಿ ದಿವಾನನು ಅಥವಾ ದಂಡನಾಯಕನು ಕುಳಿತುಕೊಂಡು ಪ್ರಜೆಗಳ ಬಿನ್ನಹ ಗಳನ್ನು ವಿಮರ್ಶಿಸುತ್ತಲಿರುವನು. ಆತನ ತೀರ್ಪಿನಮೇಲೆ ಅಪೀಲೇ ಇಲ್ಲ ಕಲಸವನ್ನು ಮುಗಿಸಿದ ಮೇಲೆ ದಂಡನಾಯಕನು ಸಪ್ತದ್ವಾರಗಳನ್ನು ದಾಂಟಿ ಅಂತಃಪುರವನ್ನು ಪ್ರವೇಶಿಸಿ, ರಾಜನಿಗೆ ಎಲ್ಲವನ್ನೂ ವಿಜ್ಞಾಪಿಸುವನು. ರಾಜಮಂದಿರದ ಹಿಂದುಗಡೆ ದಂಡನಾಯಕನ ಮನೆ ಇರುವುದು, ಆ ಮನೆಯ ಎಡಪರ್ಕ್ಷದಲ್ಲಿ ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆ ಇದೆ, ದಿವಾನ ಖಾನೆಗೆ ಎದುರಾಗಿ ಆನೆಗಳನ್ನು ಕಟ್ಟುವ ಕಟ್ಟಡ ಉಂಟು, ಅದರಲ್ಲಿ ಒಂದೊಂದು ಕೋಣೆಯಂತೆ ಏರ್ಪಾಡು ಮಾಡಲ್ಪಟ್ಟಿದೆ. ನಾಣ್ಯಗಳನ್ನು ಮುದ್ರಿಸುವ ಟಂಕಸಾಲೆಗೆ ಎದುರಾಗಿ ನಗರಪಾಲಕ (ಟವು ಮೇಜ ಓಟ್) ನ ಮನೆ ಇರುವುದು, ಆತನ ಕೈಕೆಳಗೆ ಹನ್ನೆರಡುಸಾವಿರ ಭಟ ರಿದ್ದಾರೆ. ಟಂಕಸಾಲೆಯ ಹಿಂದುಗಡೆ ಹದಿನೈದು ಗಜಗಳ ಅಗಲವುಳ್ಳ ಒಂದು ಚಿಕ್ಕ ಬೀದಿ ಇರುವುದು, ಆ ಬೀದಿಯ ಎರಡುಕಡೆಗಳಲ್ಲಿಯೂ ಮನೆಗಳ ಮುಖ್ಯ ಮಂಟಪಗಳ ಕಟ್ಟಲ್ಪಟ್ಟಿವೆ, ಅವುಗಳ ಎದುರಿಗೆ ೩೭ ಜೀರ್ಣವಿಜಯನಗರಾದಶFo www.vv.೧೧ ಸೊಗಸಾದ ಕಲ್ಲುಗಳಿಂದ ಕಟ್ಟಲ್ಪಟ್ಟ ಉನ್ನತಾಸನಗಳಿರುವುವು. ಆಯಾ ಕೊಟ್ಟಡಿಗಳ ಗೋಡೆಗಳ ಮೇಲೆ ನಿಂಹಗಳು, ಹುಲಿಗಳು, ಚಿರತೆಗಳು ಮೊದಲಾದ ಕ್ರೂರಮೃಗಗಳ ಆಕಾರಗಳು ಚಿತ್ರಿಸಲ್ಪಟ್ಟಿವೆ. ಅಲ್ಲಿರುವ ಉನ್ನತಾಸನಗಳು ರತ್ನಾಭರಣಾಲಂಕೃತೆಯರಾದ ವೇಶ್ಯಾಂಗನಾಮಣಿಯ ರಿಂದ ಅಧಿಪ್ಟಿಸಲ್ಪಟ್ಟಿವೆ. ಒಂದುದಿನ ನನ್ನನ್ನು ನೋಡುವುದಕ್ಕಾಗಿ ರಾಯರ ಅಂತಃಪುರದಿಂದ ಕಳುಹಿಸಲ್ಪಟ್ಟ ಕೆಲವರು ದೂತರು ಬಂದು ನನ್ನನ್ನು ಆ ದಿನವೇ ರಾಯರ ಆಸ್ಥಾನಕ್ಕೆ ಕರೆದೊಯ್ದರು. ರಾಜಕುಮಾರನು (ಪ್ರೌಢ ದೇವರಾಯನು) ಸಭಾಮಂಟಪದಲ್ಲಿ ರಾಜಕಾರ್ ಧುರಂಧರರಾದ ಮಂತ್ರಿ ಶಿಖಾಮಣಿಗಳು ತನ್ನ ಸುತ್ತಲೂ ಓಲೈಸುತ್ತಿರಲು ರತ್ನ ಸಿಂಹಾಸನದಲ್ಲಿ ಮಂಡಿಸಿದ್ದನು. ಆತನಿಗೆ ಎರಡು ಕಡೆಗಳಲ್ಲಿಯ ಜನರಗುಂಪು ವೃತ್ತಾ ಕಾರವಾಗಿ ನಿಲ್ಲಿಸಲ್ಪಟ್ಟಿತು. ರಾಯರು ಪಟ್ಟು ಪೀತಾಂಬರಗಳನ್ನು ಧರಿಸಿ ದ್ದರು. ತೆಳುವಾಗಿಯ, ನಿಡಿದಾಗಿಯೂ ಇರುವ ದೇಹವುಳ್ಳವನಾಗಿ ಕಪ್ಪು ಬಿಳುಪುಅಲ್ಲದ ಶ್ಯಾಮಲವರ್ಣವನ್ನು ಹೋಲುವ ರೂಪುಳ್ಳವ ನಾಗಿರುವನು. ಅವನ ಕೆನ್ನೆ ಗಳು ಮೃದುವಾಗಿಯ ತೆಳುವಾಗಿಯೂ ಇವೆ. ಆತನ ಗಡ್ಡದಲ್ಲಿ ಕೂದಲುಗಳಿಲ್ಲ. ಆತನ ದೃಷ್ಟಿಯು ಮನೋಹರವಾಗಿದೆ. ಆತನಿಗೆ ೭೦೦ ಮಂದಿ ಹೆಂಡತಿಯರೂ ಬಂಗಾರದವರೂ ಇರುವರೆಂದು ತಿಳಿ ಯಬಂತು, ಮಹಾನವಮಿಯ ಹಬ್ಬದಲ್ಲಿ ರಾಯನು (ಪ್ರೌಢದೇವರಾ ಯರು) ತನ್ನ ದೇಶದಲ್ಲಿದ್ದುಕೊಂಡು ತನಗೆ ಕಪ್ಪವನ್ನು ಕಟ್ಟುತ್ತಿರುವ ಸೇನಾಪತಿಗಳನ್ನೂ ಪ್ರಭುಗಳನ್ನೂ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ದರ್ಬಾರು ನಡಿಸುತ್ತಾನೆ. ಅವರು ಬಹಳ ಮನೋಹರಗಳಾದ ಹೌದಾಗ ೪ಂದ ಅಲಂಕರಿಸಲ್ಪಟ್ಟ ಸಾವಿರ ಆನೆಗಳನ್ನು ತಮ್ಮ ಸಂಗಡ ತರುತ್ತಾರೆ. ಆದಿನ ಪಟ್ಟಣವೆಲ್ಲವೂ ಬಹು ಶೃಂಗಾರವಾಗಿ ಅಲಂಕರಿಸಲ್ಪಡು ತದೆ, ಆನೆಗಳಲ್ಲವೂ ಒಂದುಕಡೆ ಸೇರಿ ಸಮುದ್ರದ ಅಲೆಗಳಂತೆ ಕಾಣಬ ೩ಳ ಕರ್ಣಾಟಕ ಗ್ರಂಥಮಾಲೆ ರುತ್ತಿರುವುವು, ಅಲ್ಲಿ ನಾಲೆ ದು ಅಂತರಗಳನ್ನುಳ್ಳ ಚಪ್ಪರ (ಪಂದಲ') ಗಳು ನಿರ್ಮಿಸಲ್ಪಡುತ್ತವೆ. ಈ ಮೈದಾನಕ್ಕೆ ದೂರವಾಗಿ ಒಂಭತ್ತು ಚಪ್ಪ ರಗಳಿಂದ ಕೂಡಿದ ಒಂದು ಅರಮನೆಯು ನಿರ್ಮಿಸಲ್ಪಟ್ಟಿದೆ. ಅಂತಃಪು ರಕ್ಕೂ ಚಪ್ಪರಗಳಿಗೂ ನಡುವೆ ನಾಟಕದವರೂ ಹಾಡುವವರೂ ಕಥಾ ಪುರಾಣಗಳನ್ನು ಹೇಳುವವರೂ ಇರುತ್ತಾರೆ. ಬಾಜನ ಎದುರಿಗೆ ಇರುವ ತೆರೆಗೆ ಆಚೆ ಯೌವನಸ್ತ್ರೀಯರು ಸುಂದರವಸ್ತಾಲಂಕಾರಭೂಷಿತೆಯರಾಗಿ ನಾಟ್ಯವನ್ನಾಡುತ್ತಿರುವರು. ಮೂರು ದಿನಗಳು ಈ ವಿಧವಾಗಿ ಆಟಗಳಿ೦ ದಲೂ, ಹಾಡುಗಳಿಂದಲೂ, ವಿನೋದಗಳಿಂದಲೂ ಕಳೆಯಲ್ಪಟ್ಟವು, ಮರ ನೆಯ ದಿನ ನನಗೆ ಮರಳಿ ಮರಳಿ ಮಹಾರಾಯನ 'ರ್ಶನವು ಲಭಿಸಿತು. ತುಂಬಿ ವಿಶಾಲವಾದ ಸಿಂಹಾಸನವು ಸುವರ್ಣದಿಂದ ಮಾಡಲ್ಪಟ್ಟ ಅಮೌಲ್ಯ ಗಳಾದ ರತ್ನಗಳು ಕೆತ್ತಲ್ಪಟ್ಟಿವೆ, ನಿಂಹಾಸನದ ಎದುರಿಗೆ ಚದರವಾಗಿರುವ ತಿವಾಸಿಯೊಂದಿದೆ. ಅದರ ಕೊನೆಗಳಲ್ಲಿ ಮರುವರಸೆಗಳಾಗಿ ಮುತ್ತು ಗಳು ಕಟ್ಟಲ್ಪಟ್ಟಿವೆ. ರಾಜನು ಆ ಮೂರುದಿನಗಳ ಆ ತಿವಾಸಿ (ಮೆತ್ತೆ ಯಮೇಲೆ ಕುಳಿತುಕೊಂಡಿರುವನು. ಆ ಮಂದಿರದ ಗೋಡೆಗಳೂ, ಮೇಲು ಹೊದಿಕೆಯ, ಮಣಿಗಳಿಂದ ಹೊದಿಸಲ್ಪಟ್ಟ ಚಿನ್ನದ ಹಲಗೆಗಳಿಂದ ಆವರಿಸ ಲ್ಪಟ್ಟಿದೆ. ಆ ಹಲಗೆಗಳು ಬಂಗಾರದ ಮೊಳೆಗಳಿಂದ ಬಿಗಿಸಲ್ಪಟ್ಟಿವೆ. ? ಈರೀತಿಯಾಗಿ ವಿದೇಶೀಯರಿಂದ ವರ್ಣಿಸಲ್ಪಟ್ಟ ವಿಜಯನಗರವು ೧೫-೧೬ ನೆಯ ಶತಮಾನಗಳಲ್ಲಿ ತುಂಬಾ ಔನ್ನತ್ಯವನ್ನು ಹೊಂದಿತ್ತೆಂದು ಹೇಳುವುದಕ್ಕೆ ಸ್ವಲ್ಪವಾದರೂ ಸಂಶಯಗೊಳ್ಳಬಹುದೆ ? ಭಜೇನಕಾಲದಲ್ಲಿ ಇಷ್ಟು ಪ್ರಾಭವ, ವೈಭವಗಳಿ೦ದ ಒಪ್ಪು ತಿದ್ದು ಈಗ “ ಹಂಪೆಯ ವಿನಾಶ ' ಎಂಬ ಪ್ರಸಿದ್ದಿ ಯಿಂದ ಅನ್ಯದೇಶೀ ಯರನ್ನು ಕೂಡ ಆಕರ್ಷಿಸುವಂತಹ ಜೀರ್ಣವಿಜಯನಗರವನ್ನೂ ಅದರ ಲ್ಲಿನ ಪ್ರಕೃತಸ್ಥಿತಿಯನ್ನೂ ಕುರಿತು ನಾವು ಈಗ ಮುಖ್ಯವಾಗಿ ತಿಳಿದು ಜೀರ್ಣವಿಜಯನಗರಾದರ್ಶ೦ 46 ಕೂಳ್ಳಬೇಕಾಗಿದೆ. ಅಲ್ಲಿ ಈಗ ಪೂರ್ವಕಾಲದಲ್ಲಿದ್ದ ಕಟ್ಟಡ ಮುಂತಾದ ವುಗಳು ಮೊದಲಿನಂತೆ ಇಲ್ಲವಾದರೂ ಪೂರ್ವಚಾತುರವನ್ನು ತೋರಿ ಸುವ ಸಪ್ತಪತ್ರಕಾರಗಳ ಅನೇಕ ದೇವಾಲಯಗಳ ಗಣನಾತೀತಗಳಾದ ಮಂದಿರಗಳೂ ಶಿಥಿಲಗಳಾಗಿ ಬಿದ್ದಿವೆ. ಈಗಿನ ದರೋಜ, ಮಲಪನಗುಡಿ, ಕಮಲಾಪುರ, ಹಂಪೆ ಮೊದಲಾ ದುವುಗಳೆಲ್ಲವೂ ಪೂರ್ವದ ವಿಜಯನಗರದೊಳಗಿನವೇ, ಹೊಸಪೇಟೆಗೆ ಸವಿಾಪದಲ್ಲಿಯೇ ಆಗಿನ ನಾಶನಸ್ಥಳಗಳು ಕಣಬರುವುವು. ಇದು ಬಳ್ಳಾ ರಿಗೆ ೩೬ ಮೈಲುಗಳ ದೂರದಲ್ಲಿದೆ ಇಲ್ಲಿಂದ (ಹೊಸಪೇಟೆಯಿ೦) ಈಶಾನ್ಯ ದಿಕ್ಕಿಗೆ ಹೋಗುವ ಮಾರ್ಗವನ್ನು ಹಿಡಿದು ಒಂದೂವರೆ ಮೈಲು ದೂರ ನಡೆ ದರೆ ಮಾರ್ಗಕ್ಕೆ ಬಲಗಡೆ ಒಂದು ದೊಡ್ಡ ದೇವಾಲಯವು ಕಾಣಬರುವುದು ಇದು ಕೃಷ್ಣದೇವರಾಯರಿಂದ ಕಟ್ಟಿಸಲ್ಪಟ್ಟ ಅನಂತಶಯನದೇವಾ ಲಯ, ಇದರ ನಿಂಹದ್ವಾರವು ಉತ್ತರಾಭಿಮುಖವಾಗಿದೆ, ಇದರ ಪ್ರಕಾ ರದ ಗೋಡೆ ಶಿಥಿಲವಾಗಿ ಆ ಶಿಲೆಗಳು ಅಲ್ಲಿ ವಾಸಮಾಡುವ ಪ್ರಜೆಗಳ ಮನೆ ಗಳನ್ನಲಂಕರಿಸಿವೆ. ಈ ದೇವಾಲಯವು ಸ್ವಲ್ಪಮಟ್ಟಿಗೆ ತಿಥಿಲರೂಪವನ್ನು ಹೊಂದಿದ್ದರೂ ಬ್ರಿಟಿಷ್ ಸರ್ಕಾರದವರು ಅಲ್ಲಲ್ಲಿ ಸ್ವಲ್ಪ ಕಾಮಗಾರಿ ಮಾಡಿಸಿದ್ದಾರೆ. ಈ ಆಲಯವು ವಿಗ್ರಹಶೂನ್ಯವಾಗಿದೆ ಇಲ್ಲಿನ ವಿಗ್ರಹವು ಈಗ ಹೂವಿನಹಡಗಲಿ ತಾಲ್ಲೂಕು ಧೂಳಲುಗ್ರಾಮದಲ್ಲಿರುತ್ತದೆಂದು ಬ್ರಹ್ಮಶ್ರೀ ಚಿತ್ತವಾಡಿ ಹನುಮಂತಗೌಡರವರು ಬರೆದಿರುವರು. ಈ ದೇವಾಲಯದಿಂದ ರಾಜಮಂದಿರದ ಬಾಗಿಲತನಕ ಗೊಡ್ಡಮಾರ್ಗವೂ, ಅದರ ಉಭಯಶಾರ್ಶ್ವಗಳಲ್ಲಿಯ ವೃಕ್ಷಗಳ, ಅಂಗಡಿಗಳೂ ಇದ್ದುವೆಂದು ಚರಿತ್ರೆಯಲ್ಲಿ ಹೇಳಲ್ಪಟ್ಟಿರುವುದೇ ಹೊರತು ಅದರ ಗುರುತುಗಳು ಈಗ ಯಾವುವೂ ಕಾಣಬಾರವು, ಆ ಕಟ್ಟಡಗಳಲ್ಲವೂ ನೆಲಸಮನಾಗಿ ಹೋಗಿ ರಬಹುದು, ಆದರೂ ದಾರಿಯಲ್ಲಿ ಅಲ್ಲಲ್ಲಿ ವಲಯಾಕಾರವಾಗಿ ಗೋಪುರ m m ಶಿ W M Yo ಕರ್ಣಾಟಕ ಗ್ರಂಥಮಾಲೆ' MMmmmmmmmmmmmmmm ಗಳಿಂದ ಕೂಡಿದ ಕೆಲವು ಹಾಳುಬಿದ್ದ ಗುಡಿಗಳಿವೆ. ಆ ಗುಡಿಗಳನ್ನು ದೂರ ದಿಂದಲೇ ನೋಡಬಹುದು, ಈ ಅನಂತಶಯನಾಲಯದ ಆವರಣದಲ್ಲಿ ಕಲ ವರು ಗೊಲ್ಲರು ಒಂದು ಹಳ್ಳಿಯನ್ನು ಮಾಡಿಕೊಂಡು ಅದಕ್ಕೆ “ ಅಂದನ ಗುಡಿ “ ಎಂದು ಹೆಸರಿಟ್ಟು ಕೊಂಡು ಅಲ್ಲಿ ವಾಸಮಾಡಿಕೊಂಡಿದ್ದಾರೆ. ಇದೇ ಮಾರ್ಗವಾಗಿ ಪೂರ್ವದಿಕ್ಕಿಗೆ ಇನ್ನು ಸ್ವಲ್ಪ ದೂರ ಹೋದರೆ ಹೊಸಪೇಟೆಗೆ ಮೂರೂವರೆ ಮೈಲು ದೂರದಲ್ಲಿ 14 ಮಲ್ಪನಗುಡಿ ” ಎಂಬ ಬಂದು ಗ್ರಾಮವು ದಾರಿಯ ಹತ್ತಿರವೇ ಸಿಕ್ಕುವುದು ಈ ಊರು ಸೇರು ವುದಕ್ಕೆ ಮುಂಚೆಯೇ ಬಂದು ಫರ್ಲಾಂಗ್ ಈಚೆಗೆ ಮಾರ್ಗದ ಎಡಗಡೆ ಇರುವ ಹೊಲದಲ್ಲಿ ಗುಂಡಾಗಿರುವ ಒಂದು ಭಾವಿ ಇರುವ್ರದು. ಇದು ಇ೪ ಯುವ ಭಾವಿ. ಇದರ ಒಳಭಾಗದ ಸುತ್ತಲೂ ಕೈ ಇಲೆ ಇದ್ದು ಎಂಟು ಕಮಾನುಗಳುಳ್ಳದಾಗಿ ಕಟ್ಟಲ್ಪಟ್ಟಿದೆ. ಈ ಕೈಸಾಲೆಯೊಳಕ್ಕೆ ಹೋಗುವು ದಕ್ಕೆ ಹಂತಗಳಿರುವುವು. ಇದು ಪುರಾತನ ಕಟ್ಟಡವಾ...ರೂ ನೋಡುತ್ತಾ ನೋಡುತ್ತಾ ಕಣ್ಣುಗಳಿಗೆ ಸೊಬಗನ್ನು ಬೀರುವುದು, ಇದರಲ್ಲಿನ ನೀರು ಬಹುಶೀತಲವಾಗಿರುವುದರಿಂದ ದೇಹದ ಬಳಲಿಕೆಯನ್ನು ತೀರಿಸಿ ಆರೋಗ್ಯ ವನ್ನುಂಟುಮಾಡತಕ್ಕೆ ಮ್ಯಾಗಿರು ವದು. ಮಲ್ಪನಗುಡಿ ಗ್ರಾಮಕ್ಕೆ ಪೂರ್ವ ದಿಕ್ಕಿನಲ್ಲಿ ಒಂದು ಹೋಲದಲ್ಲಿ ಮಲಗಿಸಿರುವ ಒಂದು ಕಲ್ಲಿನಮೇಲೆ ವಿಜಯನಗರದ ಅರಸನಾದ ದೇವರಾ ಯನು ೧೬೧೦ ನೇ ಇಸವಿಯಲ್ಲಿ ದಾನಮಾಡಿದ ಶಾಸನವೊಂದಿರುವುದೆಂದು ಬರೆಯಲ್ಪಟ್ಟಿದೆ, ಆದರೆ ಎಲ್ಲೆಲ್ಲಿ ನೋಡಿದರೂ ಇದು ಕಾಣಬಂದಿಲ್ಲವಾ ದುದರಿಂದ ನೆಲದಲ್ಲಿ ಹೂತುಹೋಗಿರಬಹುದೆಂದು ಸಂಶಯವುಂಟಾಗಿರು ವುದು, ಮುಂದೆ ಯಾತ್ರಿಕರಿಗೆ ದೊರೆತರೆ ಅದರ ನಿಜವಾದ ಸ್ಥಾನವನ್ನು ತಿಳಿಯಬಹುದು. ಮಲ್ಪನ ಗುಡಿಯನ್ನು ದಾಟಿ ಮತ್ತೆರಡು ಮೈಲುಗಳ ದೂರ ಹೋ ದರೆ ಅಲ್ಲಿ ಧುರಿಯು ಎರಡಾಗಿ ಸೀಳಿ ಬಂದು ಮಡಲಿಗೆ ಕಮಲಾಪುರಕಕ್ಕೆ ಜೀರ್ಣವಿಜಯನಗರಾದರ್ಶo ೪೧ ಮತ್ತೊಂದು ಈಶಾನ್ಯಕ್ಕೆ ಹಂಪೆಗೂ ಹೋಗುವುದು, ಇಲ್ಲಿ ಬಂದು ಸಾಯರು ಕಟ್ಟೆಯ, ಗ್ರಾಮದ ಮಾರ್ಗಗಳನ್ನು ತಿಳಿಸುವ ಮರದ ಕೈ ಕಂಭವೂ ಇರುವುವು. ಪೂರ್ವದಿಕ್ಕಿನ ದಾರಿಯಲ್ಲಿಯೆ ಹೋದರೆ ಕಮಲಾಪುರವನ್ನು ಸೇರಬಹುದು.

ಕಮಲಾಪುರದಿಂದ ಹೊಸಪೇಟೆಗೆ ಏಳು ಮೈಲಿಗಳ ದೂರವಿರು ವುದು. ಈ ಕಮಲಾಪುರದಲ್ಲಿ ಪ್ರಯಾಣಿಕರು ಇಳಿಯುವುದಕ್ಕೆ ಬಂದು ಸತ್ರ ವಿರುವುದು, ಇದು ಪೂರಕಾಲದಲ್ಲಿ ಒಂದು ಪ್ರಾಚೀನ ಮಂಟಪವಾ ಗಿತ್ತು. ಬಳ್ಳಾರಿಯಲ್ಲಿ ಕಲೆಕ್ಟರಾಗಿ ಇದ್ದ ಮಾನ್ಸಿರ್ ಸಾಹೇಬರು ಈ ಮಂಟಪವನ್ನು ಸತ್ಯವಾಗಿ ಮಾರ್ಪಡಿಸಿ ಲೋಕಲ್ ಬೋರ್ಡಿನವರ ವಶಕ್ಕೆ ಕೊಟ್ಟರು. ಮತ್ತು ಈ ಗ್ರಾಮದಲ್ಲಿ ಒಂದು ಪೋಸ್ಟ್ ಆಫೀಸ್, ಬಂದು ಪೋಲೀಸ್ ಸ್ಟೇಷನೂ ಇರುವುವು. ಇಲ್ಲಿಯ ಭಾಷೆ ಕನಡ, ಜೀer-ವಿಜ ಯನಗರವನ್ನು ನೋಡಲಪೇಕ್ಷಿಸುವವರು ಈ ಸತ್ಯವನ್ನು ಬಿಡದಿಮನೆ ಯಾಗಿ ಮಾಡಿಕೊಂಡರೆ ಮುಂದೆ ಹೇಳುವ ನಾಶನಸ್ಥಳಗಳನ್ನು ನೋಡಲು ಅನುಕೂಲವಾಗಿರುವುದು.

- ಸತ್ರದಿಂದ ಉತ್ತರದಿಕ್ಕಿಗೆ ಊರಹೊರಗೆ ಹೊರಟು ಅಲ್ಲಿಂದ ಪೂರ್ವದಿಕ್ಕಿಗೆ ಸುಮಾರು ಒಂದುವರೆಮೈಲು ದೂರ ಹೋದರೆ ಅಲ್ಲಿ ಪಟ್ಟಾಭಿರಾಮಸ್ವಾಮಿಯ ದೇವಾಲಯವು ಕಾಣಬರುವುದು, ಇದರ ಸಿಂಹ ದ್ವಾರವು ಪೂರಾಭಿಮುಖವಾಗಿರುವುದು, ಈ ದೇವಾಲಯವು ಬಹು ದೊಡ್ಡದಾಗಿಯ, ಉಳಿದ ದೇವಾಲಯಗಳ೦ತ ಶಿಲಾನಿರ್ಮಿತಾಕಾರ ವುಳ್ಳದ್ದಾಗಿಯೂ, ವಿಗ್ರಹಹೀನವಾಗಿಯೂ ಇದೆ. ಪ್ರಕಾರದೊಳಗೆ ಆಳವಾಗಿ ನೀರಿಲ್ಲದ ಹಾಳುಬಾವಿಯೊಂದಿರುವುದು, ಗರ್ಭಗೃಹಕ್ಕೆ ದಕ್ಷಿಣ ದಲ್ಲಿ ಬಂದು ಮಂಟಪವಿರುವುದು, ಇದರಲ್ಲಿ ಒಂದೊಂದು ಸಂಭವೂ 20-12 ಚಿಕ್ಕ ಸ್ತಂಭಗಳು ಒಂದೇ ಶಿಲೆಯಲ್ಲಿ ಕೆತ್ತಲ್ಪಟ್ಟಿವೆ, ಈ ಆಲ 6. ೪೨ ಕರ್ಣಾಟಕ ಗ್ರಂಥಮಾಲೆ ಯದ ಸಿಂಹಪ್ಪಾ ರದ ಮೇಲೆ ಸಾಮಾನ್ಯ ಮನುಷ್ಯನು ಕಲ್ಲೆಸೆಯಲಾರ ದಪ್ಪು ಉನ್ನತವಾಗಿರುವ ಗೋಪುರವೊಂದಿರುವುದು, ಇದು ಸ್ವಲ್ಪಮಟ್ಟಿಗೆ ಶಿಥಿಲವಾಗಿರುವುದು. ಈ ಗುಡಿಗೆ ಸ್ವಲ್ಪ ದೂರದಲ್ಲಿ ಮಾರ್ಗಕ್ಕೆ ಎಡಗಡೆ ಸುತ್ತಲೂ ಮಂಟಪಗಳುಳ್ಳ ಒಂದು ಕೊಳವಿರುವುದು, ಈಗ ಇದರಲ್ಲಿ ನೀರು ಇಲ್ಲ. ಪೂರ್ವಕಾಲದಲ್ಲಿ ಕಮಲಾಪುರದ ಹತ್ತಿರವಿರುವ ಕೆರೆಯಿಂದ ನೀರನ್ನು ತರು ತಿರಬಹುದು, ಇನ್ನೂ ಪೂರ್ವದಿಕ್ಕಿಗೆ ಹೋದರೆ ಹಾಳುಬಿದ್ದಿರುವ ಗುಡಿ ಗಳು ಅನೇಕವಾಗಿರುವುವು, ಅವುಗಳೆಲ್ಲವನ್ನೂ ನೋಡಿದಮೇಲೆ ಕಮಲಾ ಪುರದಿಂದ ಬಿಡದಿಗೆ ಹಿಂದಿರುಗಬಹುದು. ಸತ್ರದಿಂದ ಉತ್ತರಕ್ಕೆ ಡಿ, ಏ, ಡಬ ರ್ಇ ಸ್ಪೆರ್ಕ್ಟ ಬಂಗಲೆಯು ಇದೆ. ಮುಂದುಗಡೆ ಹೋಗುವ ಸೊಟ್ಟಿಯಾದ ಮಾರ್ಗದ ಮೂಲಕ “ ಹಾಳು ಪಟ್ಟಣ ” ಎಂದು ಈಗ ಕರೆಯಲ್ಪಡುವ ನಗರಮಧ್ಯಕ್ಕೆ ಹೋಗ ಬಹುದು. ಮಾರ್ಗಕ್ಕೆ ಬಲಪಾರ್ಶ್ವದಲ್ಲಿ ಸುಮಾರು 200 ಗಜಗಳ ದೂರದಲ್ಲಿ ಚಂದ್ರಶೇಖರಮಠವೆಂಬ ಬಂದು ಆಲಯವನ್ನು ಕಾಣಲಾಗುವುದು ಇದರ ನಿಂಹದ್ವಾರವು ಪೂJಾಭಿಮುಖವಾಗಿರುವುದು ಸುತ್ತಲೂ ಇರುವ ಪ ಕಾರದ ಗೋಡೆ ಶಿಥಿಲರೂಪವನ್ನು ಹೊಂದಿದೆ ; ಗರ್ಭಗೃಹಕ್ಕೆ ದಕ್ಷಿಣ ಕಡೆ ಪ್ರಕಾರದ ಎರಡು ಮಲೆಗಳಲ್ಲಿಯ, ಶಿಥಿಲಗಳಾದ ಎರಡು ಮಂಟಪಗ ೪ರುವುವು. ನಿಂಹದ್ವಾರದ ಗೋಪುರವಿದ್ದರೂ ಅದು ಅಷ್ಟು ಎತ್ತರವಾ ಗಿಲ್ಲ, ಇದರಲ್ಲಿ ವಿಶೇಷವಾದುದಾಗಲಿ ರಮ್ಯವಾದುದಾಗಲೀ ಯಾವುದೂ ಇಲ್ಲದುದರಿಂದ ಪರರಾಜರು ಅದನ್ನು ಹಾಳುಮಾಡದೆ ಬಿಟ್ಟುಬಿಟ್ಟರು. ಆದ ಕಾರಣ ಇದು ಯಥಾಸ್ಥಿತಿಯಲ್ಲಿದೆ. ಇದೂ ವಿಗ್ರಹಹೀನವಾದುದು - ಇಲ್ಲಿಂದ ಮೊದಲಿನ ಮಾರ್ಗದ ಮೂಲಕ ಪಶ್ಚಿಮಾಭಿಮುಖವಾಗಿ ಸ್ವಲ್ಪ ದೂರ ಹೋದರೆ ಅಂತಃಪುರದ ಸ್ನಾನಗೃಹವನ್ನು ನೋಡಬಹುದು. ೪ರಿ ಜೀರ್ಣವಿಜಯನಗರದರ್ಶo ಒmmmmmmmmmmmmmmmm 6 ಇದರ ಸುತ್ತಲೂ ಒಳಭಾಗದಲ್ಲಿ ಪ್ರತಿಬಂದು ಕಡೆಗೂ ಐದೈದರಂತೆ ಕಮಾ ನುಗಳುಳ್ಳ ಕೈಸಾಲೆಗಳುಳ್ಳದಾಗಿ, ಮಧ್ಯಭಾಗದಲ್ಲಿ ಸುಮಾರು ಏಳು ಅಡಿ ಗಳ ಆಳವೂ, ಸ್ವಲ್ಪ ಹೆಚ್ಚು ಕಡಿಮೆ 30 ಅಡಿಗಳ ಉದ್ದವೂ, ಅಷ್ಟೇಅಗ ಲವೂ ಉಳ್ಳದಾಗಿ ಸುತ್ತಲೂ ತಳಭಾಗದಲ್ಲಿಯ ಗಜ್ಜೆ ಹಾಕಲ್ಪಟ್ಟಿರುವ ಚಚ್‌ಕವಾದ ಹಳ್ಳವೊಂದಿರುವುದು, ಈ ಹಳ್ಳದೊಳಕ್ಕೆ ಇಳಿಯುವುದಕ್ಕೆ ಉತ್ತರದಿಕ್ಕಿನಲ್ಲಿ ಮೆಟ್ಟಲುಗಳಿರುವುವು. ತಿಟ್ಟಿನಮೇಲೆ ತುಂಗಭದ್ರಾ ನದಿ ಯಿಂದ ನೀರನ್ನು ತೆಗೆದುಕೊಂಡುಬರುವ ** ದೂರಿ' ಎಂಬ ಕಾಲುವೆಯು ಈ ಭವನಕ್ಕೆ ಪೂರ್ವ ದಿಕ್ಕಿನಲ್ಲಿದೆ. ಆ ಕಾಲುವೆ ಅಲ್ಲಲ್ಲಿ ಶಿಥಿಲವಾಗಿದೆ. ಅ ಮಂದಿರಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ದ್ವಾರಗಳಿರುವುವು. ಈ ಸ್ನಾನಗೃಹದ ಹತ್ತಿರ ತ್ರಿಭುಜಾಕಾರವಾಗಿ ಎರಡು ಮಾರ್ಗ ಗಳು ಬೆರೆಯುತ್ತವೆ. ಅವುಗಳಲ್ಲಿ ಒಂದು ಮೊದಲು ಸ್ವಲ್ಪ ಮಟ್ಟಿಗೆ ಪಶ್ಚಿಮಕ್ಕೂ, ತರುವಾಯ ಉತ್ತರಕ್ಕೂ ತಿರುಗಿ ಹಂಪೆಯೊಳಗಣ ಮುಖ್ಯ ದೇವಾಲಯವಾದ ಶ್ರೀವಿರೂಪಾಕ್ಷ ದೇವಾಲಯಕ್ಕೆ ಹೋಗುವುದು, ಎರಡ ನೆಯದು ಪಶ್ಚಿಮೋತ್ತರವಾಗಿ ಹೊರಡುವುದು. ಎರಡನೆಯ ಮಾರ್ಗದಮಲಕ ಸುಮಾರು ಎರಡು ಫರ್ಲಾಂಗುಗಳ ದೂರ ಹೋದರೆ ದಾರಿಗೆ ಎಡಪಾರ್ಶ್ವದಲ್ಲಿ ಸುಮಾರು ಎಂಟು ಅಡಿಗಳ ಆಳವೂ ಅರ್ಧ ಫರ್ಲಾಂಗಿನ ಉದ್ಧವೂ ಮೂವತ್ತು ಗಜಗಳ ಅಗಲವೂ ಉಳ್ಳದ್ದಾಗಿ, ಆಯಾಕಾರವಾಗಿ ಮೊದಲು ನೋಡಲ್ಪಟ್ಟ ಸ್ನಾನಗೃಹದ ಹಳ್ಳದಂತೆಯೇ ಗಚ್ಛೆಮಾಡಲ್ಪಟ್ಟ ಹಳ್ಳ ಬಂದಿರುವುದು, ತುಂಗಭದ್ರಾ ನದಿ ಯಿಂದ ನೀರನ್ನು ತೆಗೆದುಕೊಂಡು ಬರುವ “ ಮೋರಿ ” ಎಂಬ ಕಾಲುವೆಯು ಈ ಹಳ್ಳಕ್ಕೆ ಅನತಿದೂರದಲ್ಲಿ ಯೇ ಭೂಮಟ್ಟಕ್ಕೆ ಸುಮಾರು ಹತ್ತಡಿಗಳ ಎತ್ತರದಮೇಲೆ ಸ್ವಲ್ಪ ಸಮವಾಗಿ ಹೋಗುತ್ತಿರುವುದು. ಈ ಹಳ್ಳಕ್ಕೆ ಇದು ಉತ್ತರದಿಕ್ಕಿನಲ್ಲಿರುವುದು, ಆ ಕಾಲುವೆಯಿಂದ ಈ ಹಳ್ಳಕ್ಕೆ m ೪೪ MMwwwnMuruwwwM ಬ ಕರ್ಣಾಟಕ ಗ್ರಂಥಮಾಲೆ ನೀರನ್ನು ತರುವುದಕ್ಕಾಗಿ ಮತ್ತೆರಡುಕಾಲುವೆಗಳನ್ನು ಈ ಹಳ್ಳಕ್ಕೆ ತಂದಿರುವರು. ಈ ಉಪಕಾಲುವೆಗಳಲ್ಲವೂ ಶಿಥಿಲರೂಪವಾಗಿಯೇ ಇವೆ. ಈ ಹಳ್ಳಕ್ಕೆ ಇಂತಹ ಕಾಲುವೆಗಳನ್ನು ತಂದಿರುವುದು ನೋಡಿದರೆ ಇದು ಸ್ನಾನದ ಹಳ್ಳವಾಗಿ ಇರಬಹುದೆಂದು ಊಹಿಸಲಾಗುವುದು, ಇದಕ್ಕೆ ಅನತಿ ದೂರದಲ್ಲಿಯೇ “ಮಹಾನವಮಿಯ ದಿಬ್ಬ” ಎಂದೆನಿಸುವ ವಿಜಯದಶಮಿಯ ಸಿಂಹಾಸನ ಬಂದಿರುವುದು. ಇದು ಸುತ್ತಲೂ ಕಲ್ಲು ಕಟ್ಟಡದಿಂದ ಮಾಡಿದ ದೊಡ್ಡಮಣ್ಣಿನ ಗುಡ್ಡ, ಆ ಕಾಲದಲ್ಲಿ ರಾಜರು ದಸರಾಹಬ್ಬದ ದಿನಗಳಲ್ಲಿ ಅದರಮೇಲೆ ಕುಳಿತು ಅರಣ್ಯ ಮೃಗವಿನೋದಗಳನ್ನೂ, ಜಟ್ಟಿಕಾಳಗಗ ಳನ್ನೂ, ಮಲ್ಲಯುದ್ಧಗಳನ್ನೂ ನೋಡುತ್ತಿರುವರು. ಅದರಮೇಲೆ ಪೂರ್ವಭಾಗದಲ್ಲಿ ಅರ್ಧದರ ಕೆಳಭಾಗದ ತನಕ ಇಳಿಯುವದಕ್ಕೆ ಎರಡು ಕಡೆಗಳಲ್ಲಿಯ ಮಾರ್ಗಗಳಿರುವುವು, ಅದರ ಕೆಳ ಭಾಗದಲ್ಲಿ ಗೋಡೆಯೊಂದಿಗೆ ಕೂಡಿದ ಬಂಡೆಯಲ್ಲಿ ಐದು ವಿಗ್ರಹ ಗಳಿರುವುವು ಅಲ್ಲಿ ಕೆಲವರು ಪಾಮರರು ಆ ವಿಗ್ರಹಗಳನ್ನು ಪಂಚಪಾಂಡ ವರೆಂದು ಭಾವಿಸಿ ಇಂದಿಗೂ ಪೂಜೆಮಾಡುತ್ತಿರುವರು. ಈ ದಿಬ್ಬದ ಪಾರ್ಶ್ವದ ಕಲ್ಲುಗಳ ಮೇಲೆ ಕುದುರೆಗಳ, ಆನೆಗಳ, ಒಂಟೆಗಳ, ಹುಲಿಗಳೂ, ಬೇಟೆಗಾರರು, ಹುಳ್ಳೆಗಳನ್ನು ತರುಬುವ ಬೇಟೆನಾಯಿಗಳು, ಆಟಗಾತಿಯರು ಮೊದಲಾದ ಚಿತ್ರಗಳು ಕೆತ್ತಲ್ಪಟ್ಟಿರುವುವು. - ಈಗ್ಗೆ ನಾಲ್ಕು ವರುಷಗಳ ಹಿಂದೆ ಈ ದಿಬ್ಬದೊಳಕ್ಕೆ ಹೊರಡುವು ದಕ್ಕೆ ಎಲ್ಲಿಯಾದರೂ, ದ್ವಾರವಿದೆಯೋ ಏನೋ ನೋಡಬೇಕೆಂದು ಆ ತಿಟ್ಟಿನ ನಾಲ್ಕು ಪಾರ್ಶ್ವಗಳಲ್ಲಿಯೂ ಸುಮಾರು ಹತ್ತು ಅಡಿಗಳ ಆಳದ ತನಕ ಅಗೆದು ನೋಡಿದರೆಂತಲೂ, ಆಗ ಕೂಲಿಯವರಲ್ಲಿ ಕೆಲವರು ಅಲ್ಲಿ ಮಡಿದದ್ದರಿಂದಲೂ, ದ್ರಾ ರವೂ ಎಲ್ಲಿಯ ಕಾಣಬಾರದ್ದರಿಂದಲೂ, ಆ ಪ್ರಯತ್ನವನ್ನು ಬಿಟ್ಟು, ಆ ಹಳ್ಳವನ್ನು, ಮರಳಿ ಹೂತುಬಿಟ್ಟರೆಂತಲೂ m ಜೀರ್ಣ ವಿಜಯನಗರಾದರ್ಶo ೪೫ ತಿಳಿಯಬಂದಿದೆ. ಇದರ ಸುತ್ತಲೂ ಒಂದು ಪ್ರಕಾರದ ಗೋಡೆಯಿದ್ದು ಈಗ ಅದೆಲ್ಲವೂ ಶಿಥಿಲವಾಗಿ ಉತ್ತರದಿಕ್ಕಿನ ಗೋಡೆ ಮಾತ್ರ ನಿಂತಿದೆ. ಈ ದಿಬ್ಬದ ಮೇಲಕ್ಕೆ ಹತ್ತುವುದಕ್ಕೆ ಪಶ್ಚಿಮದಿಕ್ಕಿನಲ್ಲಿ ಮೆಟ್ಟಲುಗಳಿವೆ. - ಈ ಸಿಂಹಾಸನದ ಪ್ರಕಾರದ ಗೋಡೆಗೆ ಉತ್ತರಪಾರ್ಶ್ವದಲ್ಲಿ ಒಂದು ದೊಡ್ಡ ಕಲ್ಲುಬಾಗಿಲು ಆನಿಸಲ್ಪಟ್ಟಿದೆ. ಇದು ಏಕಶಿಲಾಮಯ ವಾಗಿದೆ. ಇದು ಸುಮಾರು ಹತ್ತು ಅಡಿಗಳ ಎತ್ತರವೂ ಎಂಟು ಅಡಿಗಳ ಮಂದವೂ ಉಳ್ಳದ್ದು, ಇದಕ್ಕೆ ಸಾಮಾನ್ಯವಾದ ಮರದ ಬಾಗಿಲಂತೆಯೇ ಹಿಂಭಾಗದಲ್ಲಿ ಅಗುಳಿಹಾಕುವ ಎರಡು ತೂಬುಗಳಿರುವುವು. - ಇಲ್ಲಿಂದ ಈಶಾನ್ಯಕ್ಕೆ ಸುಮಾರು ಅರ್ಧ ಮೈಲು ದೂರ ಹೋದರೆ ಅಲ್ಲಿ ರಂಗಸ್ವಾಮಿಯ ದೇವಾಲಯವನ್ನು ನೋಡಲಾಗುವುದು. ಇದು ಪೂರ್ವಾಭಿ ಮುಖವಾಗಿರುವುದು. ಇದು ಬಹುಮಟ್ಟಿಗೆ ಶಿಥಿಲವಾಗಿದೆ. ಎಲ್ಲಾ ದೇಗುಲಗಳಂತೆ ಇದಕ್ಕೂ ಅಲ್ಲಲ್ಲಿ ರಿಪೇರಿ ಮಾಡಲ್ಪಟ್ಟಿದೆ. ಅರ್ಧ ಭಾಗದವರೆಗೆ ಹೂತುಹೋಗಿದ್ದುದರಿಂದ ಈಚೆಗೆ ಈ ಹೂಳುಮಣ್ಣನ್ನು ತೆಗೆದುಹಾಕಿಸಿದ್ದಾರೆ. ಇದರಲ್ಲಿ ನೋಡತಕ್ಕೆ ವಿಶೇಷಾಂಶಗಳು ಯಾವುವೂ ಇಲ್ಲ. ಈ ಆಲಯಕ್ಕೆ ದಕ್ಷಿಣಪಾರ್ಶ್ವದಲ್ಲಿ ಒಂದು ಮಂಟಪವಿರುವುದು. ಅಲ್ಲಿ ಸುಮಾರು ಹನ್ನೆರಡು ಅಂಗುಲಗಳ ಉದ್ದವಿರುವ ಆಂಜನೇಯ ಸ್ವಾಮಿಯ ಶಿಲಾವಿಗ್ರಹ ಬಂದಿರುವುದು, ಈ ವಿಗ್ರಹದ ಎದುರಿಗೆ ಅಂದರೆ ಆವರಣದ ದಕ್ಷಿಣಗೋಡೆಯ ಒಳ ಭಾಗದಲ್ಲಿ ಸುಮಾರು ಆರು ಅಡಿಗಳ ಉದ್ದವೂ, ಎರಡಡಿಗಳ ಅಗಲವೂ, ಇರುವ ಬಂಡೆಯಮೇಲೆ ಹಳಗನ್ನಡದ ಅಕ್ಷರಗಳಲ್ಲಿ ಈ ಶಾಸನವು ಕೆತ್ತಲ್ಪಟ್ಟಿರುವುದು. “ ಶಾಲಿವಾಹನಶಕೆ ೧8೩೪ ನೇ ವಿಶ್ವಾವಸು ಸಂವತ್ಸರದ ಚೈತ್ರ ಕುದ್ಧ ತದಿಗೆ ಗುರುವಾರದದಿನ ರಾಜಾಧಿರಾಜಪರಮೇಶ್ವರ ಶ್ರೀ ವೀರಪ್ರತಾಪ ೪೬ ಕರ್ಣಾಟಕ ಗ್ರಂಥಮಾಲೆ ammmmmmmmmmmmmmm ಶ್ರೀ ವೀರಸದಾಶಿವನು ವಿದ್ಯಾನಗರದಲ್ಲಿ ರತ್ನ ಸಿಂಹಾಸನಾರೂಢನಾಗಿ ರಾಜ್ಯವನ್ನಾಳುತ್ತಿರುವಲ್ಲಿ ಶ್ರೀರ್ಮ ಮಹಾಮಂಡಲೇಶ್ವರ ಮಾಧವರಾಯನು ಮಲ್ಲಿರಾಜನ ಮೊಮ್ಮಗನಾದ ವಲ್ಲಭರಾಜನ ಮಗ ತಿಮ್ಮರಾಜಪ್ರಭುವು ವಿದ್ಯಾನಗರದ ದೊಡ್ಡ ಅಂಗಡಿಬೀದಿಯ ಮೈಲಸಂತೆಗೆ ಪಶ್ಚಿಮದಲ್ಲಿರುವ ಮಾಧವದೇವರಿಗೆ ರಂಗಮಂಟಪದ ವೈಶಾಲ್ಯ 25 ಅಂಕಣಗಳು ನಿತ್ಯೋ ತ್ಸವಗಳಲ್ಲಿ ನೃತ್ಯಗೀತವಾದ್ಯಾದಿ ವೈಭವಗಳಿಗೆ ಯೋಗ್ಯವಾಗಿಯೂ ಆ ಚಂದ್ರಾರ್ಕಸ್ಥಾಯಿಯಾಗಿಯೂ ತಮ್ಮ ತಂದೆ ವಲ್ಲಭರಾಜರಿಗೂ ತಮ್ಮ ತಾಯಿ ವೆಂಗಳಮ್ಮನವರಿಗೂ ಪುಣ್ಯವುಂಟಾಗುವಂತೆ ಸಮರ್ಪಿಸಿದನು. “ ಮಂಗಳಂ ಮಹಾ ಶ್ರೀರಸ್ತು” ಎಂದಿದೆ. - ಈ ರಂಗಸ್ವಾಮಿಯ ದೇವಾಲಯಕ್ಕೆ ಉತ್ತರದಲ್ಲಿ ಸ್ವಲ್ಪ ದೂರ ಹೋದರೆ ಮುಂದೆ ಒಂದು ಕೋಟೆಯಗೊಡೆ ಕಾಣಬರುವುದು, ಈ ಕೋಟೆಯ ದಿಡ್ಡಿಬಾಗಿ ಅಲ್ಲಿ ಪ್ರವೇಶಿಸಿ ರಾಜೆಂತಃಪುರಾವರಣವನ್ನು ಸೇರ ಲಾಗುವುದು. - ಈ ಅಂತಃಪುರಾವರಣದಲ್ಲಿ, “ ಸಭಾಭವನ, ” ಎಂಬ ಎರಡಂತಸ್ತು ಗಳ ಕಟ್ಟಡವಿರುವುದು, ಇದರಲ್ಲೆಲ್ಲಾ ಕಮಾನುಗಳು ಕಟ್ಟಲ್ಪಟ್ಟು, ಬಹು ರಮಣೀಯವಾಗಿಕಟ್ಟಲ್ಪಟ್ಟಿರುವುದು. ಇದರ ಉತ್ತರ ಪಾರ್ಶ್ವದಲ್ಲಿ ಮೇಲಿನ ಅಂತಸ್ತಿಗೆ ಹತ್ತುವುದಕ್ಕ ಹಂತಗಳಿರುವುವು. ಮೇಲಿನ ಅಂತಸ್ತು ಕೂಡ ಕೆಳಗಿನಹಾಗೆಯೇ ಕಮಾನುಗಳುಹಾಕಿ ಕಟ್ಟಲ್ಪಟ್ಟಿದೆ. ಇದು ಕಟ ಒಟ್ಟು 500 ವರುಷಗಳಾಗಿದ್ದರೂ ಇಂದಿಗೂ ಸ್ವಲ್ಪವಾದರೂ ಮುಕ್ಕಾ ಗದೆ ಪೂರ್ವದ ಚಾತುರವನ್ನೇ ಮರೆಯಿಸುತ್ತಾ ಅಚ್ಚಳಿಯದೆ ಇದೆ. ಈ ಸಭಾಭವನಕ್ಕೆ ಪಶ್ಚಿಮಭಾಗದಲ್ಲಿ ಗೋಡೆ ಇಲ್ಲದೆ ಎತ್ತರ ವಾಗಿರುವ ತಳಹದಿಯೊಂದಿದೆ. ಇದು ರಾಜಾಂತಃಪುರುವಾಗಿ ಇದ್ದಿರ ಮುದು. ಜೀರ್ಣವಿಜಯನಗರಾದಶFo ೪೭ MM ಈ ತಳಹದಿಗೆ ಈಶಾನ್ಯದಲ್ಲಿ “ ಜನಾನಾ ” ಎಂಬ ಕಟ್ಟಡವಿದೆ. ಇದರ ಒಳಭಾಗದಲ್ಲಿ ಸುತ್ತಲೂ ಕಮಾನುಗಳು ಕಟ್ಟಲ್ಪಟ್ಟಿವೆ. ಇದು ಆಯಾಕೃತಿಯಾಗಿದೆ, ಈ ಪ್ರಕಾರದಲ್ಲಿ ಇನ್ನೂ ಎಷ್ಟೋ ಅರಮನೆ ಗಳು ಇದ್ದಂತೆ ಅಲ್ಲಿ ಬಿದ್ದಿರುವ ಕಲ್ಲುಗಳ ರಾಶಿಯಿಂದ ತಿಳಿದುಕೊಳ್ಳ ಬಹುದು. ಈ ಅಂತಃಪುರ ಪಕಾರಕ್ಕೆ ಹೊರಗಡೆ ರಾಜನನಗರ, ಟಂಕ ಸಾಲೆ, ಸೇನಾಪತಿಗಳ ಮತ್ತು ಸಾಮಂತರಾಜರ ಸೌಧಗಳ, ಮನೋಜ್ಞ ಗಳಾದ ಮನೆಗಳು ಇದ್ದವಂತೆ ! ಅವುಗಳ ಮಧ್ಯದಲ್ಲಿರುವ ಚಾವಡಿಗೆ ಮಹಡಿಯ, ಮೇಲಕ್ಕೆ ಹೋಗಲು ಮೆಟ್ಟಿಲುಗಳ ಇರುವುವು. ಇದು ಬಹುಶಃ ಪಟ್ಟದಾನೆಯನ್ನು ನಿಲ್ಲಿಸುವಸ್ಥಳವಾಗಿರಬಹುದು. ಈ ಗಜಶಾಲೆಯ ಹತ್ತಿರವೇ ಪಶ್ಚಿಮದಿಕ್ಕಿನಲ್ಲಿ ನಾಟ್ಯ ಶಾಲೆ ಇರು ವುದು, ಮುಂಭಾಗದಲ್ಲಿ ಎರಡು ಕಡೆಗಳಲ್ಲಿಯ ಎರಡುದೊಡ್ಡ ಜಗುಲಿ ಗಳಿರುವುವು. ಪ್ರತಿ ಜಗುಲಿಯಮೇಲೆಯೂ ಇದರಂತೆ ಹತ್ತು ಕಂಭಗಳುಳ್ಳ ಪಡಸಾಲೆ ಇರುವುದು, ಒಳಗಡೆ ಕೂಡ ನಾಲ್ಕು ಕಡೆಗಳಲ್ಲಿಯೂ ಜಗಲಿ ಯಂತಹ ದಿಣ್ಣೆಗಳಿರುವುವು, ಅವುಗಳಲ್ಲಿ ಕೂಡ ಮುಂಭಾಗದಹಾಗೆಯೇ ಕಮಾನುಗಳುಳ್ಳ ಪಡಸಾಲೆ ಇರುವುದು, ಮಧ್ಯದಲ್ಲಿ ಚಚ್‌ಕವಾಗಿ ಹಳ್ಳದಪ್ರದೇಶವಿರುವುದು ಬಹುಶಃ ಈ ಸ್ಥಳದಲ್ಲಿ ಇಟ್ಟಿಗಳ, ಮಲ್ಲರೂ ಮಲ್ಲಯುದ್ಧವನ್ನು ಮಾಡುತ್ತಿದ್ದರೆ ಸುತ್ತಲೂ ಇರುವ ವಸಾರೆಯಲ್ಲಿ ರಾಜರು ಕುಳಿತು ನೋಡಲು ಅನುಕೂಲವಾಗಿರಬಹುದು. ಈ ನಾಟ್ಯಶಾ' ಗೆ ಉತ್ತರಕಡೆ ಎರಡು ಫಲಾಂಗುಗಳ ದೂರದಲ್ಲಿ ಚಿಕ್ಕ ಬೆಟ್ಟದಸಾಲೊಂದಿರುವುದು, ಈ ಬೆಟ್ಟ ಸಾಲಿನಮೇಲೆ ಅಲ್ಲಲ್ಲಿ ಅನೇಕ ಕಟ್ಟಡಗಳೂ ಗುಹೆಗಳೂ ಇರುವುವು. ಈಬೆಟ್ಟದ ಸಾಲನ್ನು ಹತ್ತಿ ದರೆ ಅಲ್ಲಿ ಒಂದು ಕೊಠಡಿಯಂತಹ ದೊಡ್ಡ ಗವಿ ಇರುವುದು; ಅದು ಋಷ್ಯಾ ಇಮವಾಗಿರಬಹುದೆಂದು ತೋರುತ್ತದೆ." ೧ ೪೮ ಕರ್ಣಾಟಕ ಗ್ರಂಥಮಾಲೆ ಈ ಪರ್ವತರಾಶಿಗೆ ದಕ್ಷಿಣಪಾರ್ಕ್ಷದ ಕೆಳ ಭಾಗದಲ್ಲಿ ಉದ್ದ ಕೂ ಹಸುರುಹುಲ್ಲಿನಿಂದಲೂ, ಅಲ್ಲಲ್ಲಿ ನಾನಾವಿಧಗಳಾದ ಲತೆಗಳು, ವಿವಿಧ ವರ್ಣಗಳುಳ್ಳ ಹೂಗಳು, ಅರಳಿರುವುದರಿಂದಲೂ, ಅಲ್ಲಿನ ಭೂಮಿಯು ರತ್ನಕಂಬಳಿಯನ್ನು ಹಾಸಿದಹಾಗೆ ಕಣ್ಣುಗಳಿಗೆ ಹಬ್ಬವನ್ನುಂಟುಮಾಡು ತಿರುವುದು, ಇದಕ್ಕೆ ಮುಂದಿನ (ದಕ್ಷಿಣ) ಭಾಗದಲ್ಲಿನ ಭೂಮಿಯು ದೊಡ್ಡಮರಗಳಿಗೆನಲೆಯಾಗದಿದ್ದರೂ ಅಲ್ಲಲ್ಲಿ ವಿವಿಧಜಾತಿಗಳ ಸಣ್ಣಗಿಡ ಗಳ ಪೊದರುಗಳಂತೆ ಹೆಣೆದುಕೊಂಡಿರುವ ಲತಾನಿಕುಂಜಗಳೂ ನೇತ್ರ ಪಕ್ಷವನ್ನೊಡರಿಸುತ್ತಿರುವುವು. ಮೃದುಮಧುರವಾಗಿ ದನಿಗೆಯ ಪಕ್ಷಿಗಳು ಆವೃಕ್ಷಗಳ ಮೇಲೆ ಕುಳಿತುಕೊಂಡು ಇಂಪಾಗಿ ಗಾನಮಾಡುತ್ತಾ ಶ್ರವಣ ರಂಧ್ರಗಳಿಗೆ ಕ್ಷೇತನವನ್ನು ಮಾಡುತ್ತಿರುವುವು, ಕೀರಶಾರಿಕಾದಿ ಪಕ್ಷಿಗಳ ಸವಿನುಡಿಗಳು ತೊತ್ರರಸಾಯನವಾಗಿ ಕೇಳಿಬರುತ್ತ ಗುಡ್ಡವನ್ನು ಹತ್ತಿ ದ್ದರಿಂದ ಉಂಟಾದ ಪರಿಶ್ರಮವನ್ನು ತೋರದಂತೆಮಾಡುವುವು. ಇಂತಹ ಸೊಬಗಿನಿಂದ ಮೆರೆಯುವ ಈ ಭುವನವು ಶರಭ, ಸಿಂಹ, ಶಾರ್ದೂಲಾದಿ ಕೊರಮೃಗಗಳ, ಸಂಚಾರಕ್ಕೆ ತಕ್ಕದ್ದಲ್ಲದೆ ಇದ್ದರೂ, ಸುಂದರ ವಿಶಾಲ ಚಂಚಲಲೋಚನಗಳುಳ್ಳ ಹುಲ್ಲೆಗಳು, ಮೊಲಗಳು, ಮರ್ಕಟಿ, ಮಾರ್ಜಾ ಲಾದಿ ಸಾಧಾರಣಮೃಗಸಮೂಹಗಳು ಇವುಗಳಿಗೆ ಸ್ಥಾನವಾಗಿರುವುದೆಂದು ಹೇಳಲು ಅಡ್ಡಿಯಿಲ್ಲ. ಈ ವನದ ದಕಿ೧ಭಾಗದಲ್ಲಿ ತುಂಗಭದ್ರಾ ನದಿಯು ಸಣ್ಣದಾಗಿ ಪಶ್ಚಿಮದಿಂದ ಪೂರ್ವಕ್ಕೆ ಪ್ರವಹಿಸುತ್ತಲಿರುವುದು, ಈ ಪ್ರವಾ ಹಕ್ಕೆ ಮುಂದುಗಡೆ ಬತ್ತದಗದ್ದೆಗಳು ಸಮೃದ್ಧಿಯಾಗಿ ಬೆಳೆದಿರುವುವು. ಅವುಗಳಲ್ಲಿ ಸುವರ್ಣಛಾಯೆಯುಳ್ಳ ಕೆಲವು ಬತ್ತದಗದ್ದೆಗಳಲ್ಲಿನ ಪೈರು ಗಳು ಹೊರಲಾರದಷ್ಟು ಧಾನ್ಯದಕಾಳುಗಳನ್ನುಳ್ಳ ತೆನೆಗಳನ್ನು ತಳೆದು ವಿದ್ಯಾ, ವಿನಯಸಂಪನ್ನರಾದ ಸಜ್ಜನರತ್ರದಿಂದ ವಸುಂಧರೆಗೆ ತಮ್ಮ ತಲೆ ಗಳನ್ನು ಸೂಕುವಂತೆ ಕೌಬರುವುವು, ಅವುಗಳಲ್ಲಿ ಕೆಲ ಇು ಜೀರ್ಣವಿಜಯನಗರಾದರ್ಶo ೪೯ ೧AM ಕಾಳುಗಳುಳ್ಳವಾಗಿ ವಂಗವಣವುಳ್ಳ ತೆನೆಗಳಿಂದ ಕೂಡಿದ ಪೈರುಗಳು ವಿದ್ಯಾ ವಿಹೀನರಾದ ದುರ್ಜನರ ತೆರದಿಂದ ತಮ್ಮ ಲೋಪಗಳನ್ನು ತೆಳಯದೆ ಡಾಂಭಿಕ ದಿಂದ ತಲೆಎತ್ತಿ ತನ್ನ ಬೆಳ್ಳನವನ್ನೆಲ್ಲರಿಗೂ ತೋರಿಸುತ್ತಿರುವುವು ಮತ್ತು ಅಲ್ಲಿನ ಜಲಪ್ರವಾಹಗಳೂ, ಬಾಳೆ, ಮತ್ತು ಕಬ್ಬಿನತೋಟಗಳ ಅತಿಶಯವಾಗಿ ಬೆಳೆದು ನೇತ್ರಾನಂದವನ್ನುಂಟುಮಾಡುತ್ತಾ ಅಲ್ಲಿಂದ ಬೀಸುವ ಮಂದಮಾರುತವೂ ಮನಸ್ಸಿಗೆ ತುಂಬ ಉಲ್ಲಾಸವನ್ನುಂಟು ಮಾಡುತ್ತಿರುವುವು. ಆ ಹಾ ! ನಗರ ಶೋಚನೆಯು ಹೆಜ್ಜೆ, ಎಲ್ಲಿ ನೋಡಿ ದರೂ ಲತಾಕುಂಜಗಳ, ಪುಪ್ಪೋದ್ಯಾನಗಳ, ದ್ರಾಕ್ಷಾ ತಾಂಬೂಲಾದಿ ತೋಟಗಳ, ಸಮೃದ್ಧಿಯಾಗಿ ಬೆಳೆದು, ವಿವಿಧ ಕುಸುಮ ಪರಿಮಳ ಭಾರ. ವನ್ನು ವಹಿಸಿ, ವಾಯುವು ತನ್ನ ಗಂಧವ ಹನಾವವನ್ನು ಸಾರ್ಥಕಗೊಳಿಸು ವಂತೆ ಬೀಸುತ್ತಿದ್ದಾಗ ಪ್ರಾಚೀನ ಕಾಲದಲ್ಲಿ ಪ್ರಜೆಗಳು ಎಷ್ಟು ಆನಂದವನ್ನು ಹೊಂದುತ್ತಿದ್ದರೆ ಬಣ್ಣಿಸಲಾರಳವು ? ಆವನವು ಅತ್ಯಂತ ಮನೋಹರ ವಾಗಿ ಫಲಭಾರದಿಂದ ಬಾಗಿ ಭೂಮಿಯನ್ನು ಸ್ಪಶಿಸುತ್ತಾ ಹೊಸ ಪೂಗಳ ಕಾಂತಿಯುಳ್ಳ ತರುಗಳಿಂದ ಸೇವಿತವಾಗಿರುವುವು. ಅಲ್ಲಿನ ದೇವಾಲಯ ಗಳು ದಿನದಿನವೂ ಭಗವನ್ನಾಮಗಳನ್ನು ಭಜಿಸುವ ಭಕ್ತರನೆಲೆಯಾಗಿ ಅನು ದಿನವೂ ನೃತ್ಯ ಗೀತ ವಾದ್ಯಾದಿ ವೈಭವಗಳಿಗೆ ಯೋಗ್ಯವಾಗಿ ಮೆರೆಯುತ್ತಿ ರುವ ಆ ಪುಣ್ಯಭೂಮಿಯು ಭೂತಳ ಸ್ವರ್ಗವಾಗಿರುವುದೆಂದು ಹೇಳಲಿಕ್ಕೆ ಲೇಶವಾದರೂ ಸಂದೇಹ ವುಂಟೆ ? - ಇದು ಖವ್ಯಾಶ್ರಮವಾಗಿರಬಹುದೆಂದು ಹೇಳುವುದಕ್ಕೆ ಮೇಲೆ ಹೇಳಲ್ಪಟ್ಟ ಸರತಭಾಗವನ್ನು “ ಮಾತಂಗಸರತ ” ಎಂದು ಕರೆಯುತ್ತಿರು ವುದೇ ಕಾರಣವಾಗಿ ತಿಳಿಯಬಹುದು, ಮತ್ತು ಇದಕ್ಕೆ ಹತ್ತಿರುವ ಬೆಟ್ಟ ಸಾಲುಗಳಿಗೆ 'ಮಾಲ್ಯವಂತ, ಋಷ್ಯಮೂಕ, ಅಂಜನ, ” ಎಂಬ ಹೆಸರುಗಳಿರು ವುವು ಈ ಮಾತಂಗನ ಬೆಟ್ಟದ ಮೇಲೆ ಬಂದು ದೇವಾಲಯವಿರುವುದು. ನಿ ೫ 0 ಕರ್ಣಾಟಕ ಗ್ರಂಥಮಾಲೆ ಒmmmmmmmmmmmmmmmmmmmmmmmmmmmmM ಅದಕ್ಕೆ “ ಮಾತಂಗನ ಗುಡಿ ” ಎನ್ನುವರು. ಇದರ ಪ್ರಾಕಾರದ್ಘಾರವು ದಕ್ಷಿಣಾಭಿಮುಖವಾಗಿರುವುದು, ಇದರಲ್ಲಿ ಅನೇಕ ಮಂಟಪಗಳಿರುವುವು. ಅವುಗಳಲ್ಲಿ ಗರ್ಭಾಲಯವು ಮಾತ್ರ ಉತ್ತರಾಭಿಮುಖವಾಗಿರುವುದು. ಇದರಲ್ಲಿ ಶ್ರೀ ರಾಮಸ್ವಾಮಿಯ ವಿಗ್ರಹವು ಇರುವುದು, ಈ ಆಲಯದಲ್ಲಿ ಇಗೂ ಬೈರಾಗಿಗಳು ವಾಸಮಾಡುತ್ತಾ ಆ ವಿಗ್ರಹಕ್ಕೆ ನಿತ್ಯವೂ ಆರ್ಚನೆ ಮಾಡುತ್ತಿರುವರು. ರಾಮಲಕ್ಷ್ಮಣರು ವಾಲಿವಧಾನಂತರ ಸುಗ್ರೀವನಿಗೆ ಕಿಮ್ಮಿಂಧಾರಾಜಯ್ಯ ಪಟ್ಟಾಭಿಷೇಕಮಾಡಿದತರುವಾಯ ಆಷಾಢಮಾಸವು ಬಂದುದರಿಂದಲ, ಆ ನಾಲ್ಕು ತಿಂಗಳುಗಳು ಗಾಳಿಮಳೆಗಳ ಕಾಲವಾದುದರಿಂದಲೂ ಶತ್ರುಗಳ ಮೇಲೆ ದಂಡೆತ್ತಿ ಹೋಗುವುದು ತರವಲ್ಲ ವೆಂದೆಣಿಸಿ, ಸುಗ್ರೀವನ ಬರುವಿಕೆ ಗಾಗಿ ಕಾರ್ತಿಕಮಾಸದ ತನಕ ಅವರು ಈ ಪರ ತದಮೇಲೆದೆ ನೀತಾ ವಿಯೋಗ ದುಃಖದಿಂದ ವಾಸವಾಗಿದ್ದರೆಂದು ತಿಳಿಯ ಬರುವುದು, ಈ ದೇವಾಲಯದ ಹಿಂದುಗಡೆಬೆಟ್ಟದ ಉತ್ತರದಿಕ್ಕಿನಲ್ಲಿ ಕೂಡ ಕೆಳಕ್ಕೆ ಇಳಿಯು ಇದಕ್ಕೆ ಮೆಟ್ಟುಗಳಿರವು . ಈ ಸಂತ ಗಳನ್ನಿಳಿಯುವಾಗ ಕೋಣೆಗಳ೦ ತಸ ದೊಡ್ಡ ಗುಹೆಗಳು ಕಾಣಲಾಗುವುದು. ಈ ಪ್ರಕಾರ ಮಾಕಂ ದೇವಾಲಯದಿಂದ ಕೆಳಕ್ಕಿಳಿದು ತುಂಗ ಭದ್ರಾನದಿಯ ಕಾಲುವೆ ಋನ್ನು ದಾಟ, ದ ಗದ್ದೆಗಳ ನಡುವೆ ನಡೆದರೆ ಹತ್ತಿರದಲ್ಲಿಯೇ ಒಂದು ದೊಡ್ಡ ಗುಡಿಯನ್ನು ಸೇರಬಹುದು, ಬೆಟ್ಟದಿಂದ ಇಳಿಯುವಾಗಲೇ ಈ ದೆ' ವಾಲಯವು ಕಾ, "ಬರುವುದು, ಇದರ ಸಿಂಹ ದ್ವಾರವು ಉತ್ತರಾಭಿವ ಖವಾಗಿ ಎದು, ಇದಕ್ಕೆದುರಾಗಿ ಐದಾರು ಸದ್ದಾಂಗುಗಳ 'ಉದ್ದಕ್ಕೂ ದೊಡ್ಡ ಬೀದಿಯೊಂದಿರುವುದು, ಆ ವೀಧಿಯ ಉದ್ದಕ್ಕೂ ಇಕ್ಕಡೆಗಳಲ್ಲಿಯ ಅಂಗಡಿಗಳನ್ನಿಡುವುದಕ್ಕೆ ತಕ್ಕ ಚಾವಡಿ ಗಳಿರುವುವು. ಈ ಅಂಗಡೀಬಿ'ದಿ ಯಲ್ಲಿ ಆ ಕಾಲದಲ್ಲಿ ಮುತ್ತುಗಳೂ,

  • m

- * ಜೀರ್ಣ ವಿಜಯನಗರಾದರ್ಶo ೫೧ MMAMwwmmmmmmmmmmmm ನವರತ್ನಗಳ, ವಿವಿಧಫಲಗಳ ಮಾರಲ್ಪಡುತ್ತಿದ್ದವಂತೆ ! ಈಗ ಆ ಅಂಗಡೀ ಮನೆಗಳು ಹಾಳುಬಿದ್ದು ಹೋಗಿರುವುದಲ್ಲದೆ ಮಧ್ಯದಲ್ಲಿರುವ ರಸ್ತೆಯು ವ್ಯವಸಾಯಕ್ಕೆ ಉಪಯೋಗಿಸಲ್ಪಟ್ಟಿಗೆ ತರುವಾಯ ಅಲ್ಲಿಂದ ಹಿಂದಿರುಗಿ, ಕಮಲಾಪುರದ ಸತ್ರಕ್ಕೆ ಬಂದು ಅಲ್ಲಿ ಆದಿನವೆಲ್ಲಾ ವಿಶ್ರಮಿಸಿ ಕೊಳ್ಳಲಾಗುವುದು ಮರುದಿನ ಅರುಣೋದಯದಲ್ಲಿಯೇ ಎದ್ದು ಉದಯರಾಗರಕ್ಕಿ ಮೆಯ ಸೊಬಗನೀಕ್ಷಿಸುತ್ತಾ, ಪ್ರಭಾತಾರೋಗ್ಯವಾಯುವನ್ನಾಫಾಣಿ ಸುತ್ತಾ ಉತ್ತರಾಭಿಮುಖವಾಗಿ ಮುಂದಿನಮಾರ್ಗದಲ್ಲಿಯೇ ಪ್ರಯಾಣ ವಾಡಿ, ವಿಜಯದಶಮಿಯ ಸಿಂಹಾಸನವನ್ನು ದಾಟಿ ಉತ್ತರದಿಕ್ಕಿನಲ್ಲಿ ರಾಜಾಂತಃ ಪುರಾವರಣಕ್ಕೆ ಹೋಗುವ ಮಾರ್ಗವನ್ನು ಬಿಟ್ಟು ಪಶ್ಚಿಮೋತ್ತರ ವಾಗಿ ಹೋಗುವದಾರಿಯಲ್ಲಿಯೇ ನಡೆದರೆ ಮಹಾನವಮಿ ದಿಬ್ಬಕ್ಕೆ ಆ ನತಿದೂರದಲ್ಲಿಯೇ ಸ್ವಲ್ಪ ಹೆಚ್ಚು ಕಡಿಮೆ ನಾಲ್ಪ ತೆಂಟು ಅಡಿಗಳ ಉದ್ದವೂ, ಮೂರು ಅಡಿಗಳ ಅಗಲವೂ, ಎರಡಡಿಗಳ ಎತ್ತರವೂ ಆಗಿ ಗಂಡಶಿಲೆಯನ್ನು ಕೊರೆದು ಮಾಡಲ್ಪಟ್ಟ ತೊಟ್ಟಿಯೊಂದು ಅಲ್ಲಿನ ಮೈದಾನಕ್ಕೆ ಆತು ಕೊಂಡಿರುವುದನ್ನು ನೋಡಲಾಗುವುದು ಇದರ ಒಂದುಕಡೆ ಕೆಳ ಭಾಗದಲ್ಲಿ ತೂಬಿನಂತೆ ವಲಯಾಕಾರವಾಗಿರುವ ರಂಧ್ರವಿರುವುದು. ಆ ಕಾಲದಲ್ಲಿ ಈ ತೊಟ್ಟಿಯಲ್ಲಿ ಹಾಲುತುಂಬಿ ಆನೆಯ ಮರಿಗಳಿಗೆ ಕುಡಿಸುತ್ತಲಿದ್ದರಂತೆ ! - ಇದನ್ನು ಬಿಟ್ಟು ಮುಂದೆ ಸ್ವಲ್ಪ ದೂರ ಹೋದರೆ ಮಾರ್ಗಕ್ಕೆ ಎಡ ಪಾರ್ಶ್ವದಲ್ಲಿ ಹಜಾರ ರಾಮಚಂದ್ರಾಲಯವು ಕಾಣಿಸುವುದು, ಈ ದೇವಾ ಲಯವು ಉಳಿದ ಆಲಯಗಳ ಹಾಗೆ ಅಷ್ಟು ದೊಡ್ಡದಾಗಿಲ್ಲ ಉಳಿದ ಗುಡಿಗ ಳಂತೆ ಇದರಲ್ಲಿ ಯ, ವಿಗ್ರಹ ಹೀನವಾಗಿರುವುದು, ಇದರ ಸಿಂಹದ್ವಾರವು ಪುರ್ವಾಭಿಮುಖವಾಗಿರುವುದು, ಈ ಆಲಯದೊಳಕ್ಕೆ ಪ್ರವೇಶಿಸಿದ ಕೂಡಲೇ ಭಕ್ತಿಯ, ಗೌರವಾಕ್ಟ್ರಗಳ ಉಂಟಾಗುವುವು. ಏತಕ್ಕಂದರೆ ಶಿ ೫೨ ಕರ್ಣಾಟಕ ಗ್ರಂಥಮಾಲೆ m ಲ ಣ ಇದರಲ್ಲಿ ನಗೋಡೆಗಳ ಮೇಲೆ ನಾನಾವಿಧಗಳಾದ ವಿಗ್ರಹಗಳನ್ನು ಕೆತ್ತಿರು ವುದರಿಂದ, ಇದರಲ್ಲಿ ಅಲ್ಲಲ್ಲಿ ಹಳೆಗನ್ನಡದ ಅಕ್ಷರಗಳಲ್ಲಿ ಬರೆದಿರುವ ಶಾಸನಗಳನ್ನು ನೀಡಲಾಗುವುದು. ಗರ್ಭಗೃಹಕ್ಕೆ ಹತ್ತಿಕೊಂಡು ಮುಂದೆ ಇರುವ ಮಂಟಪದಲ್ಲಿ ಕುಯ ಸ್ಥಂಬಗಳ ಮೇಲೆ ಭಕ್ತಿಯನ್ನುಂಟುಮಾ ಡುವ ಅನೇಕ ವಿಗ್ರಹಗಳು ಅತಿ ಮೃದುವಾಗಿ ಕೆತ್ತಲ್ಪಟ್ಟು, ಪೂರ್ವಕಾ ಲದ ಶಿಲೆನ್ನತ್ಯವನ್ನು ತಿಳಿಸುವುದರಿಂದ ಇದನ್ನು ನೋಡಿ ಅಚ್ಚರಿಗೊಳ್ಳ ದವರಿಲ್ಲ, ಗರ್ಭಾಲಯದ ಉತ್ತರಭಾಗದಲ್ಲಿ ಒಂದು ದೊಡ್ಡ ಮಂಟಪ ವಿರುವುದು, ದಕ್ಷಿಣಾಭಿಮುಖವಾದ ಇದರ ದ್ವಾರಕ್ಕೆ ಬಲಗಡೆಯ ಗೋಡೆ ಯಮೇಲೆ ( ತಾಲೀವಾ ಹನಶಕೆ ೧೪೩೫ ನೇ ಮುಖಸಂವತ್ಸರ ಚೈತ್ರ ಶುದ್ಧ ಪಂಚಮಿಯ ದಿನ ಈ ಆಲಯವು ಶ್ರೀ ಕೃಷ್ಣರಾಯರಿಂದ ಕಟ್ಟಿಸಲ್ಪ ಟ್ಟಿದೆ” ಎಂದು ಸ್ಥಿರಪಡಿಸುವ ಶಾಸನ ಒಂದಿರುವುದು, ಈ ಮಂಟಪದಲ್ಲಿ ರಾಮಾಯಣದ ಕಥಾವಿಶೇಷಗಳನ್ನು ತಿಳಿಸುವುವುಗಳಾಗಿ ಕಡು ಮನೋಹರ ಗಳಾದ ವಿಗ್ರಹಗಳು ಗೋಡೆಗಳಲ್ಲಿ ಕೆತ್ತಲ್ಪಟ್ಟಿವೆ. ಹಚಾರವೆಂದರೆ ಪಂಗಣ ರಾಜಪಾಸಾದಾವರಣಗಳಿರುವುದರಿಂದ ಇದಕ್ಕೆ ಆಹೆಸರು ಬಂದಿರ ಬಹುದು. ಈ ದೇವಾಲಯವನ್ನು ಬಿಟ್ಟು ಇನ್ನೂ ಕೆಲವು ಅಡಿಗಳ ದೂರ ಮುಂದಕ್ಕೆ ಹೋದರೆ ಅಲ್ಲಿ ಒಂದು ಕಟ್ಟಡ ಕಾಣಬರುವುದು, ಇದನ್ನು ಅಲ್ಲಿನಜನರು “ ನೆಲಮಾಳಿಗೆ ” ಎಂದು ಹೇಳುವರು ಅದಕ್ಕೆ ಇದು ಎಡ ಪಾರ್ಶ್ವದಲ್ಲಿರುವುದು ಇದು ಭೂಮಟ್ಟಕ್ಕೆ ಸಮಾನವಾಗಿರುವುದರಿಂದ ಹತ್ತಿ ರಕ್ಕೆ ಹೋಗಿ ನೋಡಿದಹೊರತು ಪ್ರೇಕ್ಷಕರಿಗೆ ಇದು ಕಾಣಬಾರದು. ಇದು ಪೂರ್ತಿಯಾಗಿ ಭೂಮಿಯಲ್ಲಿ ಹೂಳಲ್ಪಟ್ಟಿರುವುದರಿಂದ ಅದರ ದ್ವಾರ ವನ್ನು ಇದುವರೆಗೂ ಕಂಡುಹಿಡಿಯಲಿಕ್ಕೆ ಆಗದೆ ಮೇಲುಭಾಗದಲ್ಲಿ ಒಂದು ಕಡೆ ಕೆಳಕ್ಕೆ ಇಳಿಯುವುದಕ್ಕಾಗಿ ಒಂದು ಕಡಂಗು ತೆಗೆದಿರುವರು, ಜೀರ್ಣವಿಜಯನಗರಾದ ರ್ಶo ೫ರಿ ಟ ವ ಕ ಇದರ ಒಳ ಭಾಗದಲ್ಲೆಲ್ಲಾ ಇಬ್ಬರುಮನುಷ್ಯರು 'ಧಾರಾಳವಾಗಿ ನಡೆದು ಹೋಗತಕ್ಕಷ್ಟು ಅಗಲವಾದ ಮಾಳಿಗೆಯಂತಹ ಸಂದು ನೋಟ್ಟಾಬಟ್ಟೆ ಯಾಗಿ ಹೋಗುತ್ತಿರುವುದು, ಇದನ್ನು ವಿತಕ್ಕೆ ಹೀಗೆ ನಿರ್ಮಿಸಿದರೆ ಗೊತ್ತಾಗುವುದಿಲ್ಲ. - ಇದರ ಸವಿಾಪದಲ್ಲಿಯೇ ಗೋಡೆ ಇಲ್ಲದ ಕಲ್ಲಿನ ತಳಹದಿಯೊಂದು ಕಾಣಬರುವುದು, ಇದು ನೆಲಮಟ್ಟಕ್ಕಿಂತ ಅತ್ಯುನ್ನತವಾಗಿ ನಾಲ್ಕು ಕಡೆಗೂ ಚಕವಾಗಿದೆ ಇದೇ ಮಾದರಿಯ ತಳಹದಿಗಳು ಅದರ ಸುತ್ತಲು ಅನೇಕ ವಾಗಿರುವುವು. ಇದರ ಮುಂದುಗಡೆ ಪೂರ್ವ ಭಾಗದಲ್ಲಿರುವ ತಳಹದಿಯು ಸ್ಥಳಸಹಿತವಾಗಿದೆ, ಮತ್ತೆ ಕೆಲವು ಇಳ ಪದಿಗಳು ಮೇಲಕ್ಕೆ ಕಾಣಬಾರದೆ ನೆಲದಲ್ಲಿಯೇ ಹೂತುಹೋಗಿವೆ, ಪೂರ್ವ ಕಾಲದಲ್ಲಿ ಇವು ಕಡುಗಣನಾತೀ ತಗಳಾಗಿ, ದೊಡ್ಡಕೇರಿಯಾಗಿ ಮನೆಗಳಿಂದ ತುಂಬಿ ಬಹುರಮ್ಯಗಳಾಗಿರ ಬಹುದೆಂದು ತೋರುವುದು. - ಇಂದಮುಂದಕ್ಕೆ ಸ್ವಲ್ಪ ದೂರ ಹೋದರೆ ಅಲ್ಲಿ ಪಾತಾಳೇಶ್ವರನ ದೇವಾಲಯವು ಕಾಣಬರುವುದು, ಇದು ಇರುವುದೆಂಬಸಂಗತಿ ಈಗ್ಗೆ ಎರಡುವರುಷಗಳ ಕೆಳಗೆ ಕಂಡುಹಿಡಿಯಲ್ಪಟ್ಟಿತು. ತತ್ತೂರ ಇದು ಹೂತು ಹೋಗಿ ಪ್ರಜೆಗಳಿಗೆ ಅಗೋಚರವಾಗಿ ವ್ಯವಸಾಯಮಾಡಲ್ಪಟ್ಟ ಸ್ಥಾನವಾಗಿ ಇತ್ತು ಈ ಆಲಯವು ನೆಲಮಟ್ಟಕ್ಕೆ ೫-೬ ಗಜಗಳ ಆಳ ದಲ್ಲಿದೆ ಇದರಲ್ಲಿ ಅಲ್ಲಲ್ಲಿ ನೀರೂರುತ್ತಿರುವುವರಿಂದ ಸುತ್ತಲೂ ಒಂದು ಕಾಲುವೆಯನ್ನು ಅಗೆ ಯಿಸಿ ನೀರನ್ನು ಹೊರಕ್ಕೆ ಹೋಗುವಂತೆ ಮಾಡಿರುವರು. ಈ ದೇವಾಲ ಯವು ಪೂರ್ವಾಭಿಮುಖವಾಗಿ ವಿಗ್ರಹ ಹೀನವಾಗಿರುವುದು, ಇದರಲ್ಲಿ ಒಂದು ನಂದಿವಿಗ್ರಹ ವಿರುವುದಾದರೂ ಇದನ್ನು ಯಾರೋ ಭಿನ್ನಮಾಡಿರು ವರು, ಇಲ್ಲಿಂದ ಸ್ವಲ್ಪ ದೂರ ಪಶ್ಚಿಮದಿಕ್ಕಿಗೆ ಹೊರಟು ಎದುರಿಗೆ ಬರು ವರಸ್ತೆಯೊಂದಿಗೆ ಉತ್ತರದಿಕ್ಕಿಗೆ ಹೊರಡಬಹುದು. ೫೪ ಕರ್ಣಾಟಕ ಗ್ರಂಥಮಾಲೆ ಈ ಆಲಕ್ಕೆ ಸುಮಾರು ಒಂದುಮೈಲುದೂರದಲ್ಲಿ ಉದ್ದಾನ ವೀರಭ ದಾಲಯವು ಉತ್ತರಾಭಿ ಮುಖವಾಗಿರುವುದು, ಆ ದೇವರಿಗೆ ಇಂದಿಗೂ ಪೂಜೆಗಳು ಜರುಗುತ್ತಿರುವುವು. ಇದರ ಸವಿಾಪದಲ್ಲಿಯೇ ಪೂರಾಭಿಮ) ಖವಾಗಿ ಚಂಡೀಶ್ವರನ ದೇವಾಲಯವಿರುವುದು, ಇದು ವಿಗ್ರಹಶೂನ್ಯವಾಗಿ ಪಶುಪಕ್ಷಾದಿಗಳಿಗೆ ನಿವಾಸ ಭೂಮಿಯಾಗಿರುವುದು. ಇಲ್ಲಿಂದ ಸುಮಾರು ಮೂರು ಫರಾಂಗುಗಳ ದೂರಹೋದರೆ ದಾರಿಗೆ ಎಡಗಡೆ ಪೂರಾಭಿ ಮುಖವಾಗಿ ಆದಿಶೇಷ ಸಹಿತವಾದ 16ಉಗ್ರನರಸಿಂಹ, ನೆಂಬ ಶಿಲಾವಿಗ್ರಹ ವೊಂದಿರುವುದು, ಈ ವಿಗ್ರಹದ ತಿರಸ್ಸಿನ ಮೇಲೆ ಆದಿ ಶೇಪನ ಹೆಡೆಗಳು ಆವರಿಸಿಕೊಂಡಿವೆ. ವಿ ಪವು ಒಬ್ಬ ಬ್ರಾಹ್ಮಣನಿಂದ ಕೆತ್ತಲ್ಪಟ್ಟಿತಂತೆ! ಇವರ ಮಗನ್ನು ಯಾರೋ ಒಡೆದುಬಿಟ್ಟಿದ್ದರೂ ನೋ ಡುವುದಕ್ಕೆ ಬಹಳ ಭಯಂಕರವಾಗಿ ಉಗ್ರರಸವೇ ವರ್ತಿಭವಿಸಿದೆ ಯೋ ಎಂಬಂತೆ ತೋರುವುದು, ಕರಾತ್ಮರು ಯಾರೋ ಆದಿಶೇಷನತಲೆ ಯನ್ನೂ, ಉಗ್ರನರಸಿಂಹ ಸ್ವಾಮಿಯ ಮಗನ್ನೂ, ಕೈಗಳನ್ನೂ, ಎದೆ ಯನ್ನೂ, ಕಡಿದು ಹಾಕಿರುವರು. ಇದು ಸುಮಾರು ಇಪ್ಪತ್ತೈದು ಅಡಿ ಎತ್ತರವಿರುವ ಏಕ ಶಿಲಾಮಯ ವಿಗ್ರಹವು, ಇದರತುದಿಯಲ್ಲಿ ಒಂದು ಶಾಸ ನವು ಕೆತ್ತಲ್ಪಟ್ಟಿರುವುದು, ಈ ವಿಗ್ರಹದ ಇರ್ಕಡೆಗಳಲ್ಲಿಯೂ ಕೆಳಕ್ಕೆ ಬಿದ್ದಿರುವ ಕಲ್ಲುಗಳ ರಾಶಿಯನ್ನು ಪರೀಕ್ಷಿಸಿ ನೋಡಿದರೆ ಇದರ ವಕ್ಷಸ ಳದಲ್ಲಿ ಲಕ್ಷ್ಮಿದೇವಿ ಇದ್ದಂತೆ ತಿಳಿಯ ಬರುವುದು. ಈ ವಿಗ್ರಹದ ಪ್ರಕಾರಕ್ಕೆ ಅನತಿದೂರದಲ್ಲಿಯೇ ಉತ್ತರ ಪಾರ್ಶ್ವ ದಲ್ಲಿ ಸುಮಾರು ಹತ್ತು ಅಡಿಗಳ ಎತ್ತರದದೊಡ್ಡ ಲಿಂಗವಿರುವ ದೇವಾಲಯ ವೊಂದಿರುವುದು, ಇದರಲ್ಲಿ ಯಾವಾಗಲೂ ನೀರು ನಿಂತಿರುವುದರಿಂದ ಅನಾ ರೋಗ್ಯವಾಗಿರುವುದು, ಈ ನರಸಿಂಹಸ್ವಾಮಿಯ ದೇವಾಲಯವನ್ನು ಬಿಟ್ಟು ಸುಮಾರು ನೂರು ಗಜಗಳ ದೂರ ಹೋದರೆ ಅಲ್ಲಿ ಕೃಷ್ಣಸ್ವಾಮಿಯ ದೇವಾಲಯ ಕ ೪ ಡಿar ಣ | ಜೀರ್ಣವಿಜಯನಗರಾದರ್ಶo ೫೫. ಓ ..

ವಿರುವುದು, ಇದು ಈಗ ಹಾಳುಬಿದ್ದು ಹೋಗಿರುವುದು, ಈ ಗುಡಿಯಲ್ಲಿ ಅನೇಕ ಶಾಸನ ಗಳಿರುವುವು, ಪತ್ರಿಕಾರಕ್ಕೆ ನಾಲ್ಕು ಬಾಗಿಲುಗಳಿರುವುವು ಇದು ದೊಡ್ಡದೊಡ್ಡ ಕಲ್ಲುಗಳಿಂದ ಸ್ವಲ್ಪ ಒರಟಾಗಿ ಕಟ್ಟಲ್ಪಟ್ಟಿದೆ ಗರ್ಭ ಗೃಹದ ಮೇಲುಭಾಗದಲ್ಲಿರುವ ಗೋಪುರದಲ್ಲಿ ಶ್ರೀ ಕೃಷ್ಣಮೂರ್ತಿಯ ಚರೈಗಳನ್ನು ತಿಳಿಸುವ ವಿಗ್ರಹಗಳಿರುವುವು, ಇದಕ್ಕೆದುರಾಗಿ (ಪೂರ ದಿಕ್ಕಿ ನಲ್ಲಿ) ದೊಡ್ಡ ವಿಧಿಯೆಂದಿರು ವುದು ಈ ವಿಧಿ ವ ಉದ್ದಕ್ಕೂ ಪಡಸಾಲೆ ಗಳಿರುವುವು, ಮಧ್ಯದಲ್ಲಿರುವ ಮಾರ್ಗವು ವ್ಯವಸಾಯಕ್ಕೆ ಉಪಯೋಗಿಸ ಲ್ಪಡುತ್ತಿರುವುದು. ಈ ಆಲಯಕ್ಕೆ ಪತ್ನಿ ವೆತ್ಯದಲ್ಲಿ (ವಾಯುವ್ಯದಲ್ಲಿ ಗಣೇಶನ ಆಲಯ ವಿರುವುದು, ಇದರ ಸುತ್ತ).6 Jಣೆಗಳ ಇಲ್ಲದೆ ಇಪ್ಪತ್ತೆಂಟು ಸಂಭಗಳ ಮೇಲೆ ಕಟ್ಟಲ್ಪಟ್ಟಿರುವ್ರದು ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಹದಿನಾರು ಅಡಿಗಳ ಉದ್ದವಿರುವ ವಿನ್ನಿ ಶ್ವರನ ವಿಗ್ರಹವಿರುವುದು, ದುಷ್ಟ ರುಯಾರೋ, ಈ ವಿಗ್ರಹದ ಎಡಗೈಯನ್ನೂ ಸುಂಡಿಲವನ್ನೂ ಕಡಿದು ಹಾಕಿರುವರು. ಈ ವಿಗ್ರಹಕ್ಕೆ ಈಶಾನ್ಯ ದಿಕ್ಕಿನಲ್ಲಿ ಮತ್ತೊಂದು ವಿಘ್ನ ಶರ}ಲಯ ನಿರುವುದು, ಇದು ಉನ್ನತ ಪ್ರದೇಶದಲ್ಲಿರುವುದು, ಇದೂ ಕೂಡ ಮೇಲೆಹೇ ಇಲ್ಪಟ್ಟ ವಿಗ್ರಹದಷ್ಟೇ ಇರುವುದು ಇದು ಶಿಥಿಲವಾಗದೆ ಇ, ಪೂಜೆಯಿಲ್ಲ ಗೆಯ, ವಿಶೇಷವಾಗಿ ಕಪಟದ ಹಕ್ಕಿಗಳ ಹಿಕ್ಕೆಯ ದುರ್ಗಂಧದಿಂದ ಅನಾ ರೋಗ್ಯಕರವಾಗಿಯೂ ಇದೆ, ಈ ದೇವಾಲಯದ ಉತ್ತರದಲ್ಲಿ ಜೈನಾಲಯ ಗಳು ಕೆಲವಿರುವುವು, ಈ ಜೈನಾಲಯಗಳ ಸವಿಾಪದಲ್ಲಿಯೇ ಉತ್ತರ ಭಾಗದಲ್ಲಿ ಸಂಪಾಪತಿಯಾದ ಶ್ರೀ ವಿರುಪಾಕ್ಷ ಸ್ವಾಮಿಯ ಆಲಯವಿರು ವುದು, ಶ್ರೀ ಹೇಮ ಕೋಟಾದಿಯಲ್ಲಿ ತುಂಗಭದ್ರಾ ತೀರದಲ್ಲಿ ಪಂಪಾದೇ ವಿಯು ಶ್ರೀ ವಿರುಪಾಕ್ಷ ಸ್ವಾಮಿಯನ್ನು ಕುರಿತು ತಪಸ್ಸು ಮಾಡಿ ಅವನ tn T) ೫೬ ಕರ್ಣಾಟಕ ಗ್ರಂಥಮಾಲೆ MMMuvvvvvvvv 1 ##* 0 ಅನುಗ್ರಹವನ್ನು ಹೊಂದಿ, ಆತನನ್ನೇ ಪತಿಯಾಗಿ ಸ್ವೀಕರಿಸಿದಳಂತೆ; ಆವಿ ರೂಪಾಕ್ಷೇಶ್ವರನ ಆಲಯವು ಕೃಷ್ಣದೇವರಾಯನ ಕಾಲಕ್ಕಿಂತ ಪೂರ ಕಾ ಲದ್ದು, ಗುಡಿಯು ಪೂರಾಭಿಮುಖವಾಗಿದೆ, ಇದು ದೊಡ್ಡದಾಗಿಯೂ ಎರಡು ಗೋಪುರ ಗಳುಳ್ಳದ್ದಾಗಿಯೂ ಇದೆ. ನಿಂಹದ್ವಾರದ ಮೇಲಿರುವ ಗೋಪು ರವು ಬಹಳ ಎತ್ತರ ವಾಗಿಯ, ಏಳು ಅಂತಸ್ತುಗಳನ್ನುಳ್ಳದ್ದಾಗಿಯೂ, ಒಳಗಡೆ ಟೊಳ್ಳಾಗಿಯೂ ಇದೆ. ಇದರ ಮೇಲಕ್ಕೆ ಹತ್ತುವುದಕ್ಕೆ ಎರಡು ಕಡೆಯಲ್ಲಿಯ ಮೆಟ್ಟಲುಗಳಿವೆ, ಇದಕ್ಕೆ ಗಾಳಿಯ ಗೋಪುರ' ಎಂದು ಹೆಸರು, ಇದು ಶ್ರೀ ಕೃಷ್ಣದೇವರಾಯರ ಸಹಾಯದಿಂದ “ವಿದ್ದಪ್ಪಯ್ಯ ? ಎಂಬ ಫುನಶಿಲ್ಪಿಯಿಂದ ನಿಮ್ಮಿಸಲ್ಪಟ್ಟಿದ್ದು, ಪಾಶ್ಚಾತ್ಯರಾದ ಇಂಜನೀಯರು ಗಳು ಕೂಡ ಇದರ ಈಶಿಲ್ಪವಿದ್ಯಾನೈಪುಣ್ಯವನ್ನು ಬಹಳ ವಾಗಿ ಕೊಂಡಾಡು ತಿರುವರು. ಎರಡನೆಯ ಗೋ ಪುಲವನ್ನು ೧೮ರಾಯಲ ಗೆಪುರ್ ಎಂದೆ ನ್ನು ವರು, ಇದು ಗಾಳಿಯ ಗೋಪುರಕ್ಕಿಂತಲೂ ಸಣ್ಣದು, ಇದರ ಮೇಲಕ್ಕೆ ಹತ್ತುವುದಕ್ಕೆ ಸಲಭವಾದ ಮಾರ್ಗವಿರುವುದು ಇಃ ಗೋಪುರವು ಕನಕ ಗಿರಿ ರಾಜನಿಂದ ನಿಸ ಲ್ಪಟ್ಟಿದ್ದು, ಆ ಗುಡಿಗೆ ಎಡ ಪಾ ಕಾರಗಳ ಮಧ್ಯದಲ್ಲಿ ಗೋಡೆಯ ಇಧ ವುವು, ಹಿಂದಿನ ಪಾ ಕಾಗದ ನಡುವೆ ತುಂಗ ಭದ್ರಾ ನದಿಯ ಕಾಲುವೆ ಪ್ರವಹಿಸುತ್ತಿರುವುದು, ಇದರಲ್ಲಿ ಯಾವಾಗಲೂ ನೀರು ಹರಿಯುತ್ತಿರುವುದು, ಒಳಗಿನ ಪ್ರಾಕಾರದಲ್ಲಿ ಗರ್ಭಗೃಹವೂ, ಇತರ ಆಲಯಗಳ ಇರುವುವು, ಈ ಆಲಯದಲ್ಲಿ ವಿಗ್ರಹವಿರುವುದು, ಇದಕ್ಕೆ ಈಗಲೂ ಚೆನ್ನಾಗಿ ಪೂಜೆ ನಡೆ ಯುತ್ತಿರುವುದು ಯಾತ್ರಿಕರು ಈಗ ಆಗ ಎನ್ನದೆ ಯಾವಾಗಲೂ ಶಕಟಾರೂಢರಾಗಿ ಈ ಪುಣ್ಯ ಕ್ಷೇತ್ರವನ್ನು ನೋಡಲಿಕ್ಕೆ ಬಂದು ಬಹುಭಕ್ತಿಯಿಂದ ಈ ವಿರೂಪಾಕ್ಷನನ್ನು ದರ್ಶನಮಾಡಿ ಕೊಂಡು ಪೂಜೆಯನ್ನು ಸಮರ್ಪಿಸಿ ಹೋಗುತ್ತಿರುವರು. ರಥೋತ್ಸವ ಕಾಲಗಳಲ್ಲಿಯ ಲೆಕ್ಕಿಸಲಾರದಷ್ಟು ಪ್ರಜೆಗಳು ಇಲ್ಲಿ ಕಿಕ್ಕಿರಿದು ಸಂತೋಷ ಕಾಲಗಳಲಿ | ಜೀರ್ಣವಿಜಯನಗರಾದರ್ಶo ೫. MMAN ಭರಿತರಾಗಿ ಪರಿಪೂರ್ಣ ಭಕ್ತಿಯಿಂದ ಪೂಜಾದಿಗಳನ್ನು ಸಮರ್ಪಿಸಿ ವೈಭವ ವನ್ನು ಮೆರೆಯಿಸುವರು. ಈ ದೇವಾಲಯಕ್ಕೆ ಎದುರಾಗಿಯೇ ತೇರು ನಡೆ ಯಲು ಅನುಕೂಲವಾದ ವಿಶಾಲರಮಣೀಯವಾದ ವೀಧಿಯೊಂದಿರುವುದು. ಇದಕ್ಕೆ ಎರಡು ಕಡೆಗಳಲ್ಲಿಯ ಅಚ್ಚುತಸ್ವಾಮಿಯ ದೇವಾಲಯಕ್ಕೆ ಎದು ರಾಗಿರುವಹಾಗೆ ಕೈಸಾಲೆಗಳಿರುವುವು, ಉತ್ತರಪ್ರಾಕಾರದಲ್ಲಿ ವಾಸಪ್ಪ ತೀರ್ಥವಾದ ತುಂಗಭದ್ರೆಗೆ ಹೋಗುವ ಮಾರ್ಗವಿರುವುದು, - ಶ್ರೀ ವಿರೂಪಾಕ್ಷೇಶ್ವರ ದೇವಾಲಯದಿಂದ ಪೂರ್ವಕ್ಕೆ ಸುಮಾರು ಆರು ಫರ್ಲಾಂಗುಗಳ ದರಾ ನಡೆದುಹೋದರೆ ಶ್ರೀ ಕೋದಂಡರಾಮಸ್ವಾ ಮಿಯ ದೇವಾಲಯವು ಸಿಕ್ಕುವುದು. ಇದು ಉತ್ತರಾಭಿಮುಖವಾಗಿರು ವುದು, ಇದರಲ್ಲಿರುವ ಶ್ರೀ ಸೀತಾ ರಾಮ ಲಕ್ಷ್ಮಣ ವಿಗ ಹಗಳು ಅತಿಮ ನೋಜ್ಞಗಳಾಗಿರುವುವು. ಶ್ರೀ ರಾಮ ಲಕ್ಷ್ಮಣರು ಧನುರ್ಬಾಣವಾಣಿಗೆ ೪ಾಗಿ ಸೀತೆಯೊಂದಿಗೆ ನಿಂತಿರುವ ವಿಗ್ರಹಗಳು, ಪೂಜಾರೋಗ್ಯಗಳಾದ ಈ ವಿಗ್ರಹಗಳನ್ನು ನೋಡುವ ಜನರಿಗೆ ಕೂಡಲೇ ಭಯ ಭಕ್ತಿ ವಿನಯ ಸಂಭ ಮಗಳು ಉದ್ಭವಿಸುವುದಲ್ಲದೆ ರಾಮನ ಕಲ್ಯಾಣಗುಣಗಣಗಳು ಅಸದೃಶ ಗಳೆಂತಲೂ, ಅಗಣ್ಯಗಳೆಂತಲ ಸೀತೆಯ ಪತಿಭಕ್ತಿಯ ಅಪ್ರತಿಮವಾದು ದೆಂತಲೂ, ರಾಮ ಲಕ್ಷ್ಮಣರ ಸೌಭಾತವು ಸರ್ವಜನ ಸ್ತುತಿಪಾತ್ರವೆಂ ತಲೂ ಸ್ಫೂರ್ತಿಸದೆ ಇರದು. ಈ ನೀತಾ ರಾಮ ಲಕ್ಷ್ಮಣರಿಗೆ ಈಗಲೂ ನಿರಾತಂಕವಾಗಿ ಪೂಜೆಗಳು ಜರುಗುತ್ತಿರುವುವು. ಇಲ್ಲಿಯೇ ಚಕ್ರತೀರ್ಥವೆಂದು ಕರೆಯಲ್ಪಡುವ ತುಂಗಭದ್ರೆಯು ಪ್ರವಹಿಸುತ್ತಿರುವುದು, ಇಲ್ಲಿ ರುವ ಬಂಡೆಗಳ ಮೇಲೆ ಅನೇಕ ವಿಗ್ರಹಗಳ ಆ ವಿಗ್ರಹಗಳಿಗೆ ನಮಸ್ಕರಿಸುವ ಭಕ್ತರ ವಿಗ್ರಹಗಳ ಕೆತ್ತಲ್ಪಟ್ಟರು ವುವು ಇಲ್ಲಿ ತುಂಗಭದ್ರಾ ನದಿಯು ಚಕ್ರಾಕಾರವಾಗಿ ಪ್ರವಹಿಸುತ್ತಿರು ವುದರಿಂದ ಇಲ್ಲಿಯ ಜಲಕ್ಕೆ ಚಕ್ರತೀರ್ಥವೆಂಬ ಹೆಸರು ಬಂದಿದೆ. ೫೮ ಕರ್ಣಾಟಕ ಗ್ರಂಥಮಾಲೆ ಇಲಿಂದ ಪೂರ್ವದಿಕ್ಕಿಗೆ ಸುಮಾರು ಆರು ಫರ್ಲಾಂಗುಗಳ ದೂರಾ ಹೋದರೆ ಗುಡ್ಡದಮೇಲೆ ಇರುವ ಶ್ರೀ ವಿಠಲಸ್ವಾಮಿಯ ದೇವಾಲಯವು ಕಾಣಬರುವುದು, ಇದು ಶ್ರೀ ವಿದ್ಯಾನಗರದ ಪೂರ್ವದಿಕ್ಕಿನಲ್ಲಿ ತುಂಗಭದ್ರಾ ನದಿಯ ಓರೆಯಲ್ಲಿ ಕಟ್ಟಲ್ಪಟ್ಟಿರುವುದು, ಈ ದೇವಾಲಯವು ಒಬ್ಬ ರಾಜನ ಕಾಲದಲ್ಲಿಯೇ ಕಟ್ಟಲ್ಪಟ್ಟುದಲ್ಲ, ಕೃಷ್ಣದೇವರಾಜರು ವಿಷ್ಣು ಭಕ್ತಿ ಪರಾಯಣರಾಗಿ ಇದನ್ನು ಕಟ್ಟಿಸಲಾರಂಭಿಸಿದರೆಂದು ಹೇಳುತ್ತಾರೆ. ಈ ದೇವಾಲಯದ ಸಿಂಹದಾ ರವು ಪೂರ್ವಾಭಿಮುಖವಾಗಿರುವುದು, ಗರ್ಭಾಲ ಯದ ಎರಡು ಪಾರ್ಶ್ವಗಳಲ್ಲಿಯೂ ಇರುವ ಮಂಟಪಗಳ ಶಿಲ್ಪಿಕಳಾನೈಪು ನ್ಯವನ್ನು ಹೊಗಳಲು ಸಾವಿರ ನಾಲಿಗೆಗಳಾದರೂ ತೀರದು. ಏಕ ಶಿಲಾಮ ಯವಾಗಿ ಒಂದೊಂದು ಕಲ್ಲು ಕಂಭದಲ್ಲಿ ಹದಿನಾರು ಕಂಭಗಳು ವಿಂಗಡಿ ಸಲ್ಪಟ್ಟು, ಅವುಗಳಲ್ಲಿ ನಾನಾ ವಿಧವಾದ ವಿಗ್ರಹಗಳು ಸಹಿತ ಕೆತ್ತಲ್ಪಟ್ಟರು ವುವು ದೇವಾಲಯದ ಛಾವಣಿ ಕೂಡ ಶಿಲಾಮಯ ವಾಗಿ, ಅರುನ ಶಿಲ್ಪ ಕೆಲಸಗಳನ್ನು ನೋಡಿದರೆ ಆ ಕಾಲದಲ್ಲಿನ ಶಿಲ್ಪ ಕೆಳಾವಿಜ್ಞಾನದ ಔನ್ನತ್ಯ ವನ್ನು ಸಾರಿ ಹೇಳುವಂತಿರುವುದು, ದೇವಾಲಯದ ಹೊದಿಕೆ .. ಸೂರುಗ ೪೦ದ ಮೂಲೆಗಳಲ್ಲಿ ಜೋಲಾಡುತ್ತಿರುವ ಕಲ್ಲಿನ ಸರಪಣಿ/ಗಳಿಗೆ ದೀಪದ ಬಟ್ಟಲುಗಳನ್ನು ತಗುಲಿಸುತ್ತಿದ್ದರಂತೆ. ಈಗ ಈ ಸರಪಣಿಗಳು ಮಾತ್ರ) ಕಾಣಬರುವುವು. ಆ ದೇವಾಲಯವು ಉಳಿದ ದೇವಾಲಯಗಳಂತೆಯೇ ಶಿಲಾ ಮಯನಿಕ್ಕಿ ತವಾದುದು, ಕಬ್ಬಿಣವಾಗಲಿ, ಮರವಾಗಲಿ, ಮೊಳೆಗಳಾಗಲಿ ಇಲ್ಲ ದೆ ಸಿಕ್ಕಿಸಲ್ಪಟ್ಟಿರುವುದನ್ನು ನೋಡಿದ ಜನರು ಆತ್ಮರನಿಮಗ್ನಮಾನಸ್ಕರಾ ಗದೆ ಹೋಗಲಾರರು, ಚೆನ್ನಾಗಿ ಪರಿಶೀಲಿಸಿ ನೋಡಿದರೆ ಈ ಆಲಯವು ಸಂಪೂರ್ಣ ವೈಭವದಿಂದಿದ್ದಾಗ ಮಾಳಿಗೆಗೂ ಕಂಭಗಳಿಗೂ ವಿವಿಧಗಳಾದ ಬಣ್ಣಗಳನ್ನು ಎಳೆಯುತ್ತಿದ್ದಂತೆ ಗುರುತುಗಳು ಕಾಣಬರುತ್ತಿವೆ. ಇಂತಹ ಆಶ್ಚಯ್ಯ ನಿರ್ಮಾಣವನ್ನು ಹೊಂದಿ, ಸುತ್ತಲೂ ದೀಪಮಾಲೆಯು ತೇಜ ST) ଟ ಜೀರ್ಣವಿಜಯನಗರಾದರ್ಶo ಒmmmmmmm ಸೃನ್ನು ಪಸರಿಸುತ್ತಿರಲು, ವಾದ್ಯಘೋಷವು ನಭೋಂತರಾಳವನ್ನು ತುಂಬು ತಿರಲು ಪರಮ ವೈಭವದಿಂದ ಒಪ್ಪುತ್ತಿದ್ದ ಕಾಲದ ಸಾಯಂ ಸಮಯಗಳು ಹೀಗಿದ್ದು ವೋ ಊಹಿಸಲಸಾಧ್ಯವು, ಈಗ ಈ ದೇವಾಲಯವು ವಿಗ್ರಹಹೀನ ವಾಗಿದೆ. ವಿಜಯನಗರವು ಶತ್ರುವಶವಾದಾಗ ಮಹಮ್ಮದೀಯರ ಮೂಲಕ ಹಾಳುಮಾಡಲ್ಪಟ್ಟು ದಲ್ಲದೆ ಈಜೇಚೆಗೆ ನಿಕ್ಷೇಪ ದ್ರವ್ಯಗಳು ಇರುವುವೆಂಬ ಭ್ರಾಂತಿಗೊಂಡ ಬೈರಾಗಿಗಳಿ೦ದ ಅಲ್ಲಿರುವ ವಿಗ್ರಹಗಳೆಲ್ಲ ಸೆಳ್ಳಗಿಸಲ್ಪಟ್ಟ ರುವುವು, ಪೂರ್ವದ ಸ್ಥಿತಿಯನ್ನು ಊಹಿಸಿ ಪ್ರಕೃತದ ಹೀನಸ್ಥಿತಿಯನ್ನು ನೋಡಿದರೆ ಎಂತವನಿಗಾದರೂ ಮನಸ್ಸಂತಾಪ ಉಂಟಾಗದೆ ಇರದು ಪ್ರಾಕಾರಮಧ್ಯದಲ್ಲಿ ಶಿಲಾಮಯವಾದ ಕಲ್ಲಿನ ಗಾಲಿಗಳು, ಈಚು, ಮಕಿಮರಗಳು, ಇವುಗಳನ್ನುಳ್ಳ ತೇರೊಂದಿರುವುದು. ಆ ರಥದ ಸುತ್ತಲೂ ಸೈಯ ರು ಗಿಳಿಗಳ ಮೇಲೆ ಕುಳಿತುಕೊಂಡು ಗಿಳಿಗಳು ಎಳಿಯತಕ್ಕೆ ರಥಗಳನ್ನು ನಡಿಸುತ್ತಿರುವಂತೆ ಕೆತ್ತಲ್ಪಟ್ಟು ಮುದ್ದಿನ ಮಟೆಯನ್ನು ಕಟ್ಟುತ್ತಿರುವುವು. ಈ ತೇರಿಗೆ ಪೂರ ದಿಕ್ಕಿನಲ್ಲಿ ಕಲ್ಲಿನ ಬೃಂದಾವನವೊಂದಿರುವುದು, ಈ ದೇವಾಲಯಕ್ಕೆ ಮೂಡಣ ಭಾಗದಲ್ಲಿ ತಳವಾರನ ಕಟ್ಟೆಯೂ ಇದೆ. ಅಲ್ಲಿಂದ ಗ್ರಾಮದವರೆಗೂ ಕಲ್ಲಿನ ಚಪ್ಪಡಿ ಗಳನ್ನು ಹಾಸಿರುವ ವಿಶಾಲವಾದ ರಸ್ತೆಯ ಒಂದು ಮೈಲಿತನಕ ವ್ಯಾಪಿಸಿ ರುವುದು. - ಈ ದೇವಾಲಯವನ್ನು ಬಿಟ್ಟು ಪರಾಭಿಮುಖವಾಗಿ ತಳವಾರನ ಕಟ್ಟೆಯಿಂದ ಹೋಗಿ ನದಿಯ ಒರೆಯಲ್ಲಿಯೇ ಇರುವ ಖುಷಿಗಳ ಸಮಾಧಿ ಗಳು ಒಂಭತ್ತನ್ನು ನೋಡಿ ಅವುಗಳಿಗೆ ಪೂಜಾಸತ್ತಾರಗಳನ್ನು ಮಾಡ ಬಹುದು. ಈ ಆವರಣದ ಆಚೆ ಹೊಸದಾಗಿ ಕಟ್ಟಲ್ಪಟ್ಟ ಒಂದು ದೇವಾಲ ಯವಿರುವುದು, ಈ ಆಲಯವನ್ನು ಕುರಿತು ಒಂದು ಕಥೆಯನ್ನು ಹೇಳು ವರು.-ಆನೆಗೊಂದಿಸಂಸ್ಥಾನದ ಈಚಿನ ರಾಜರುಗಳಲ್ಲೊಬ್ಬನು ವೇಶ್ಯಾ ܘܧ ಕರ್ಣಾಟಕ ಗ್ರಂಥಮಾಲೆ 9 0 ಪ್ರಿಯನಾಗಿ ಅವರೊಂದಿಗೆ ಅಲ್ಲಿ ವಾಸಮಾಡಿಕೊಂಡಿದ್ದನಂತೆ. ಆಸ್ಥಳವನ್ನು ಬಿಟ್ಟು ಹೋಗೆಂದು ಅವನಿಗೆ ಎಷ್ಟೆಷ್ಟೋ ಕನಸುಗಳು ಬಿದ್ದರೂ ಅವನು ಅವುಗಳನ್ನು ಲಕ್ಷ್ಯ ಮಾಡದೆ ಅಲ್ಲಿಯೇ ಇದ್ದು ಬಿಟ್ಟನಂತೆ ಬಂದುದಿನ ಆ ನದಿಯ ಎರಡು ದಡಗಳಲ್ಲಿಯೂ ತುಂಬಿ ನೀರು ಹರಿಯುತ್ತಿದ್ದಾಗ ಆ ರಾಜನು ತನ್ನ ಪ್ರಯಾಂಗನೆಯರೊಂದಿಗೆ ಆಚಿನ ತಡಿಯಲ್ಲಿರುವ ಆನೆ ಗೊಂದಿಗೆ ಹೋಗುತ್ತಿರುವಾಗ ದೋಣಿ ಮು ಮುಳುಗಿಹೋಗಿ, ಅದರಲ್ಲಿ ದ್ದವರೆಲ್ಲರೂ ಜಲಸಮಾಧಿಯನ್ನು ಹೊಂದಿದರಂತೆ ? - ಇಲ್ಲಿ ತುಂಗಭದ್ರಾ ನದಿಯು ಸ್ವಲ್ಪ ತಿಟ್ಟಿನಮೇಲೆ ಪ್ರವಹಿಸುತ್ತಿರು ವುದರಿಂದ ನದಿಯು ಆಳವಾಗಿ, ಬೇಸಗೆಯಕಾಲದಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಗಾರಾಳವಾಗಿ ಹೋಗಬಹುದು, ಈ ಭಾಗದಲ್ಲಿ ನದಿಯ ಬಂಡೆಯಮೇಲೆ ಪ್ರವಹಿಸುತ್ತಿರುವುದು, ಆ ಬಂಡೆಯಮೇಲೆ ಹಲ ಪ್ರವಾಹಐಾತದಿಂದ ತೋಡಲ್ಪಟ್ಟ ಬಿಲಗಳ ಅಸಂಖ್ಯಾತಗಳಾಗಿವೆ. ಈ ವಿಚಿತ್ರಗಳನ್ನು ನೋಡುತ್ತಾ ನದಿಯನ್ನು ದಾಂಟ ನೈಜಾವರ ರಾಜ್ಯದಲ್ಲಿ ರುವ ಆನೆಗೊಂದಿಯನ್ನು ಸೇರಬಹುದು, ಇಲ್ಲಿ ಶ್ರೀಕೃಷ್ಣದೇವರಾಯರ ಸಂತತಿಯವರಾಗಿ ಮೃದುಮಧುರಸ್ಸ ರಗಳನ್ನುಳ್ಳ ಶ್ರೀರಾಜರಂಗದೇವರಾ ಯರು ಈಗ ವಾಸವಾಗಿರುವರು. ಈ ಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿಯ ದೇವಾಲಯವಿರುವುದು, ಈ ದೇವಸ್ಥಾನದಲ್ಲಿ ದೇವರಪೂಜೆ ಗಳು ಕ್ರಮವಾಗಿ ಜರುಗುತ್ತಲಿರುವುವು. ಆನೆಗೊಂದಿ ಗ್ರಾಮಕ್ಕೆ ಪೂರ ದಿಕ್ಕಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಮಾರ್ಗಕ್ಕೆ ಎಡ ಭಾಗದಗುಡ್ಡದಲ್ಲಿ ಒಂದು ದೊಡ್ಡ ಗವಿ ಇರು ವುದು, ದೀಪದ ಸಹಾಯದಿಂದ ಒಳಗೆ ಪ್ರವೇಶಿಸಿ ನೋಡಿದರೆ ಇದರಲ್ಲಿ ಎರಡು ವಿಗ್ರಹಗಳು ಕಾಣಬರುವುವು, ಅಲ್ಲಿ ವಾಲಿಯು ತಪಸ್ಸು ಮಾಡು ತಿದ್ದನೆಂತಲೂ, ಆತನ ತಸಕ್ಕೆ ರಂಗನಾಥನು ಪ್ರತ್ಯಕ್ಷನಾದನೆಂತಲೂ ಒಂದು ಗಾಧೆಯುಂಟ , ಇದನ್ನು ಗವಿರಂಗ ನಾಯಕನೆಂದು ಹೇಳುವರು. ಜೀರ್ಣವಿಜಯನಗರಾದರ್ಶo ೬೧ m ಇಲ್ಲಿಂದ ಮಡಲಿಗೆ ಸುಮಾರು ಆರು ಫಾಂಗುಗಳ ದೂರ ಹೋದಧೆ ಪಂಪಾಸರೋವರವು ಕಾಣಬರುವುದು, ಇಲ್ಲಿ ಲಕ್ಷ್ಮಿದೇವಾಲಯ ವಿರುವುದು, ಇದರ ಎದುರಿಗೆ ಸ್ವಲ್ಪ ದೂರದಲ್ಲಿ ಶೋಕಹರಣ ಮೊದಲಾದ ಗುಡ್ಡಗಳಿರುವುವು. ಇವುಗಳಲ್ಲಿನ ಸೃಷ್ಟಿ ವೈಚಿತ್ರ ವು ಬಹು ದರ್ಶನೀ ಯವಾಗಿರುವುದು. ಪಂಪಾ ಸರೋವರವನ್ನು ಬಿಟ್ಟು ಅಲ್ಲಿಂದ ಸವಿಾಪ ಮಾರ್ಗದ ಮಲಕ ಹಂಪೆಗೆ ಹೋಗಿ ಅಲ್ಲಿಗೆ ಸುಮಾರು ಎರಡುವರೆ ಮೈಲುಗಳ ದೂರದಲ್ಲಿರುವ ಕಮಲಾ ಪುರಕ್ಕೆ ಹೋಗಿ ಅಲ್ಲಿನ ಸತ್ರದಲ್ಲಿ ಇಳಿದುಕೊಳ್ಳ ಬಹುದು. - ಆಹಾ ! ನಮ್ಮ ಪೂರೀಕರು ಮಾಡಿದ ಚಿತ್ರ ಕೆಲಸ ಗಳನ್ನು ನೋಡಿ ಸ್ವಲ್ಪ ಮಟ್ಟಿಗೆ ಸಂತೋಷ ಪಟ್ಟರೂ ಧನದಾಶೆಯಿಂದ ಆ ಕೆಲಸಗಳುನ್ನು ನಾಶಮಾಡಿದ ಮಹಮ್ಮದೀಯರನ್ನೂ, ಹಿಂದೂ ಬೈರಾಗಿಗಳನ್ನೂ, ಎಷ್ಟು ಮಟ್ಟಿಗೆ ನಿಂದಿಸ ಬಹುದು ? ನಗರ ನಿರಾತೃಗಳು, ಮಾಡಿಸಿದವರೂ, ಶಿಲ್ಪಿ ಗಳ, ಪ್ರಭುಗಳೂ, ಮಂತ್ರಿಗಳೂ, ಮೊದಲಾವರೂ, ಹೇಗೆ ಕಾಲದರ್ಶನ ವನ್ನು ಹೊಂದಿದರೋ ಅವರ ಕೃತ್ಯಗಳು ಕೂಡ ಕಾಲಗತಿಯನ್ನು ವಿಾರ ಲಾರದೆ ಹೋದುವಲ್ಲವೆ ? ಅತ್ಯವಶ್ಯರೇ ! ಈ ವಿಜಯನಗರವನ್ನು ನೋಡಿದ ಒಬ್ಬ ದೊಡ್ಡಮನುಷ್ಯನು ಅಲ್ಪ ಕಾಲ ಅಲ್ಲಿದ್ದು ನೋಡಿದವುಗಳನ್ನು ಸಂಗ್ರಹವಾಗಿ ಬರೆದ ವಿಷಯವಿದು. ಈ ನಗರವನ್ನು ಸಮಗ್ರವಾಗಿ ನೋಡಬೇಕೆಂದರೆ ಕೆಲವು ತಿಂಗಳ ಕಾಲ ಅಲ್ಲಿ - ಹೊರತು ತಿಳಿಯದು, ಪೂರ ದಲ್ಲಿ ಬಂದಾನೊಂದು ಕಾಲದಲ್ಲಿ ವಿಜಯ ನಗರ ಸಾಮ್ರಾಜ್ಯ ಲಕ್ಷ್ಮಿಗೆ ತಿಲಕ ಪಾಯವಾಗಿ ಆಂಧ್ರಭಾಷಾ ಯೋಪಾ ಮಣಿಯು ಯೌವನವನ್ನು ಹೊಂದಿದ ಮಂದಿರವಾಗಿ ಅಪ್ರತಿಮ ವೀರಾಗ್ರ

ಸರರಿಗೆ ಹುಟ್ಟಿದ ಮನೆ ಯೆನಿಸಿ ತುರುರಾಜರ ಎದೆ ಬಿರಿಯುವಂತೆ ದಿನದಿನಾಭಿ ವೃದ್ಧಿಯನ್ನು ಹೊಂದಿ ಐಶ್ವೈರ್ಯ ಶೌರ್ಯ ಪ್ರಾಭವಗಳಲ್ಲಿ ಪ್ರಪಂಚದಲ್ಲಿ ಇದಕ್ಕೆಣೆಯಾದುದು ಮತ್ತೊಂದಿಲ್ಲವೆಂದು ಪಶ್ಚಿಮಖಂಡ ವಾಸಿಗಳಿ೦ದಲೂ ಪೂರ್ವಖಂಡ ವಾಸಿಗಳಿಂದಲೂ ಸಾವಿರ ಬಾಯಿಗಳಿಂದ ಹೊಗಳಿಕೆಯನ್ನು ಪಡೆದು ಶಿಲ್ಪಿಗಳ ನೈಪುಣ್ಯಕ್ಕೆ ವಿಹಾರಭೂಮಿಯಾಗಿ ಶರಣಾಗತರಿಗೆ ರಕ್ಷಕಸ್ಥಾನವಾಗಿ ಹೆಸರುಗೊಂಡ ವಿಜಯನಗರ ಸಂಸ್ಥಾನವು, ಈಗ ರೂಪರಹಿತ ವಾಗಿ, ಜನಶೂನ್ಯವಾಗಿ, ಅನಾರೋಗ್ಯ ಪ್ರದೇಶವಾಗಿ ಅರಣ್ಯವಾಗಿ ನೋಟಕರಿಗೆ ಭಯವನ್ನೂ ಮನಸ್ಸಂತಾಪವನ್ನೂ ಉಂಟುಮಾಡುತ್ತಲಿದೆ. ಆಹಾ ! ಕಾಲಪ್ರಭಾವಕ್ಕೆ ಯಾರೇನು ಮಾಡಬಹುದು !!

ಸ೦ ಪೂ ಣ ೯೦