Library-logo-blue-outline.png
View-refresh.svg
Transclusion_Status_Detection_Tool

ಜೇನುತುಪ್ಪದಲ್ಲಿ ಬಿದ್ದು ಸಾವ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜೇನುತುಪ್ಪದಲ್ಲಿ ಬಿದ್ದು ಸಾವ ನೊಣನಂತೆ
ಕೀಳುಮಾಂಸದ ಸವಿಗೆ
ಗಂಟಲಗಾಣದಲ್ಲಿ ಸಿಕ್ಕಿ ಸಾವ ಮೀನಿನಂತೆ
ಹೀನವಿಷಯಕ್ಕೆ ನಚ್ಚಿ ಮಚ್ಚದಿರಾ ಎಲೆಲೆ ಹುಚ್ಚ ಮನವೇ. ಅಲ್ಪಸುಖಕ್ಕೆ ಮಚ್ಚಿ
ಅನಂತ ಭವಭಾರಕ್ಕೊಳಗಾಗಿ ದುರ್ಗತಿಗಿಳಿಯದಿರಯ್ಯ ಬೆಂದ ಮನವೇ. ಹರಹರಾ ಶಿವಶಿವಾಯೆಂಬುವದ ಮರೆಯದಿರು; ಮರೆದೊರಗದಿರು. ನಾಯ ಸಾವ ಸಾವೆ ಕಂಡಾ ಎಲೆಲೆಲೆ ಮನವೇ. ಈ ಮರುಳುತನವ ಬಿಟ್ಟು
ಎನ್ನೊಡೆಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿಗೆ ಶರಣು ಶರಣೆನ್ನಕಲಿಯಾ ಸುಖಿಯಾಗಬಲ್ಲರೆಲೆ[ಲೆಲೆ] ಮನವೇ.