ವಿಷಯಕ್ಕೆ ಹೋಗು

ಜ್ಞಾನಚಕ್ರ: ಪರಮ ತತ್ವ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ
ಉನ್ನತ ಪರಶಿವ
ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ
ಶಿವಜ್ಞಾನವೆ ಶೃಂಗಾರ
ಮಹಾಬೆಳಗೆ ವಿಭೂತಿ
ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ
ಆಕಾಶವೆ ಟೊಪ್ಪರ
ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ
ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ
ಅದ್ವೈತವೆ ಯೋಗವಟ್ಟಿಗೆ
ಅಗಮ್ಯವೆ ಯೋಗವಾವುಗೆ
ಅಚಳಿತವೆ ಖರ್ಪರ
ಅಪ್ರಾಮಣವೆ ಲಾಕುಳ
ಅವಿಚಾರವೆ ಸುಳುಹು
ಅಕಲ್ಪಿತವೆ ಭಿಕ್ಷೆ
ಕೊಂಡುದೆ ಗಮನ
ನಿಂದುದೆ ನಿವಾಸ
_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ
ಮಹದಾಕಾಶವೆ ಅಕ್ಷತೆ
ಪರಾಪರವೆ ಪತ್ರೆಪುಷ್ಪ
ನಿರ್ಮಳವೆ ಲಿಂಗಾರ್ಚನೆ
ಮಹಾಪ್ರಕಾಶವೆ ಪೂಜೆ
ನಿತ್ಯನಿರಂಜನವೆ ಧೂಪದೀಪಾರತಿ
ಸಕಲ ಭುವನಾದಿಭುವನಂಗಳೆ ಸಯದಾನ
ಆಚಾರವೆ ಅರ್ಪಿತ
ಮಹತ್ವವೆ ಸಿತಾಳ
ಅಖಂಡಿತವೆ ಅಡಕೆ
ಏಕೋಭಾವವೆ ಎಲೆ
ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ
ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ
ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ
ನಿಶ್ಶಬ್ದವೆ ಅನುಭಾವ
ಅನುಪಮದ ನಿಶ್ಶೂನ್ಯವೆ ವಿಶ್ರಾಮ
ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು
ಗುಹೇಶ್ವರಾ
ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ
ನಮೋ ನಮೋ ಎಂಬೆನು.