Library-logo-blue-outline.png
View-refresh.svg
Transclusion_Status_Detection_Tool

ಜ್ಞಾನಜ್ಯೋತಿಯ ಉದಯ, ಭಾನು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜ್ಞಾನಜ್ಯೋತಿಯ ಉದಯ
ಭಾನು ಕೋಟಿಸೂರ್ಯರ ಬೆಳಗು ನೋಡಾ. ತನುತ್ರಯ
ಜೀವತ್ರಯ
ಅವಸ್ಥಾತ್ರಯಾದಿಯಾದ ಎಲ್ಲ ತೋರಿಕೆಯನೊಳಗೊಂಡು ಜ್ಯೋತಿ ಕರ್ಪುರವ[ನು] ನೆರೆದಂತಿದೆ ನೋಡಾ. ಷಡಾಧಾರಂಗಳಲ್ಲಿ ತೊಳಗಿ ಬೆಳಗಿ ಬ್ರಹ್ಮರಂಧ್ರದಲ್ಲಿ ವಿಶ್ರಾಂತಿಯನೆಯ್ದಿದ ಅಖಂಡ ಜ್ಞಾನಜ್ಯೋತಿ ನೋಡಾ. ಆ ಮಹಾಪ್ರಕಾಶದ ಬೆಳಗಿನೊಳಗೆ ಮಹವ ಕಂಡು ಮಹಕೆ ಮಹ
ಪರಕೆ ಪರವಾಗಿ
ಎನ್ನಿಂದನ್ಯವಾಗಿ ಮತ್ತೊಂದು ಪರವಿಲ್ಲದೆ
ನಾನೇ ಪರವಸ್ತುವಾಗಿರ್ದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.