ಜ್ಞಾನದಿಂದಾದಡಾಗಲಿ ಆವ ಅಜ್ಞಾನದಿಂದಾದಡಾಗಲಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಜ್ಞಾನದಿಂದಾದಡಾಗಲಿ ಅಜ್ಞಾನದಿಂದಾದಡಾಗಲಿ
ಬ್ಥೀತಿಯಿಂದಾದಡಾಗಲಿ ನಿಬ್ರ್ಥೀತಿಯಿಂದಾದಡಾಗಲಿ
ಸದ್ಭಾವದಿಂದಾದಡಾಗಲಿ ದುರ್ಭಾವದಿಂದಾದಡಾಗಲಿ
ಆವ ಪರಿಯಿಂದಾದಡಾಗಲಿ ಪರಮಶಿವಲಿಂಗದರ್ಶನಮಾತ್ರದಿಂದ ಜಾತಿಸ್ಮರತ್ವ ಮಹದೈಶ್ವರ್ಯ ಪರಮಾಯುಷ್ಯ ಶುದ್ಧವಿದ್ಯಂಗಳು ಸಮ್ಯಕ್‍ಜ್ಞಾನ ಸಕಲಸಂಪತ್ತುಗಳು ದೊರೆಕೊಂಬುವು ನೋಡಾ ಅಖಂಡೇಶ್ವರಾ.