Library-logo-blue-outline.png
View-refresh.svg
Transclusion_Status_Detection_Tool

ತನುತ್ರಯಂಗಳು ಸದ್ರೂಪವಪ್ಪ ಗುರುವಿನಲ್ಲಡಗಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತನುತ್ರಯಂಗಳು ಸದ್ರೂಪವಪ್ಪ ಗುರುವಿನಲ್ಲಡಗಿ ತನು ನಿರ್ವಯಲಾಯಿತ್ತು. ಮನತ್ರಯಂಗಳು ಚಿದ್ರೂಪವಪ್ಪ ಲಿಂಗದಲ್ಲಿ ಅಡಗಿ ಮನ ನಿರ್ವಯಲಾಯಿತ್ತು. ಧನವೆಂದರೆ ಅರ್ಥ
ಅರ್ಥವೆಂದರೆ ಜೀವಾತ್ಮ. ಜೀವಾತ್ಮ
ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯಂಗಳು ಪರಮಾನಂದವೆಂಬ ಜಂಗಮದಲ್ಲಡಗಿ ಏಕಾರ್ಥವಾದವಾಗಿ ಧನ ನಿರ್ವಯಲಾಯಿತ್ತು. ಈ ಸಚ್ಚಿದಾನಂದ ನಿತ್ಯ ಪರಿಪೂರ್ಣ ನಿರಾಕಾರ ಪರವಸ್ತುವಿನಲ್ಲಡಗಿತ್ತಾಗಿ ಲಿಂಗೈಕ್ಯವಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.