ವಿಷಯಕ್ಕೆ ಹೋಗು

ತನುವನುವಾಯಿತ್ತು, ಮನವನುವಾಯಿತ್ತು, ಪ್ರಾಣವನುವಾಯಿತ್ತು.

ವಿಕಿಸೋರ್ಸ್ದಿಂದ
ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ತನುವನುವಾಯಿತ್ತು
ಮನವನುವಾಯಿತ್ತು
ಪ್ರಾಣವನುವಾಯಿತ್ತು. ಮುನಿದು ಬಾರದ ಪರಿ ಇನ್ನೆಂತು ಹೇಳಾ ? ಎನ್ನ ಪ್ರಾಣದಲ್ಲಿ ಸಂದು
ಎನ್ನ ಮನಕ್ಕೆ ಮನವಾಗಿ ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಕಾಣದಡೆ ಆನೆಂತು ಬದುಕುವೆನಯ್ಯಾ ?