Transclusion_Status_Detection_Tool

ತನುವನು ಶ್ರೀಗುರುವು ಕ್ರಿಯಾದೀಕ್ಷೆಯಿಂದ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ತನುವನು ಶ್ರೀಗುರುವು ಕ್ರಿಯಾದೀಕ್ಷೆಯಿಂದ ತನುಗುಣವನು ಭಸ್ಮೀಕೃತವ ಮಾಡಿದಬಳಿಕ
ಅದು ದೃಶ್ಯ ಜಡ ತನುವಲ್ಲ. ಶಿವಸತ್ಕಿ ್ರಯಾಚಾರದ ಮೂಲಸೂತ್ರವೆ ತನ್ನ ತನುವೆಂದರಿವುದು. ಶ್ರೀಗುರು ಮಂತ್ರದೀಕ್ಷೆಯಿಂದ ಮನದ ಪೂರ್ವಾಶ್ರಯವ ಕಳೆದು ಮನಕ್ಕೆ ಘನ ನೆನಹ ಸಂಬಂಧಿಸಿದನಾಗಿ
ಮನ ನಿರ್ಮಲವಾಗಿ ಲಿಂಗಕ್ಕಾಶ್ರಯವೆಂದು ಅರಿವುದು. ಶ್ರೀಗುರು ಜ್ಞಾನದೀಕ್ಷೆಯಿಂದ ಪ್ರಾಣನ ಪ್ರಪಂಚಿನ ಪಶುಭಾವವ ಕಳೆದು ಅಖಂಡಿತ ಜ್ಞಾನಲಿಂಗಕಳೆಯು ತನ್ನ ಪ್ರಾಣನಾಥನೆಂದು ತಿಳುಹಿದನಾಗಿ
ಪ್ರಾಣನ ಮಲಿನವೆಂಬುದು ಪಶುಭಾವವಲ್ಲದೆ ಲಿಂಗಭಾವವಲ್ಲ. ಈ ಸಂದೇಹ ಭ್ರಾಂತಿಯುಳ್ಳ ಕಾರಣ
ಶೈವ ಹೊಲ್ಲ ಎನ್ನುತ್ತಿರ್ದೆನಯ್ಯ. ತಮ್ಮ ತಾವರಿದು ನಿಶ್ಚೆ ೈಸದಿರ್ದಡೆ ಮಾಣಲಿ
ಗುರೂಪದೇಶದಿಂದ ನಿಶ್ಚೆ ೈಸುವುದು. ಇದು ಸಂದೇಹವಿಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.