ವಿಷಯಕ್ಕೆ ಹೋಗು

ತನುವನೆಲ್ಲವ ಜರಿದು ಮನವ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1130-1160 AD
ಪ್ರಕಾಶಕರು: anubhava mantapa
ಮೂಲ: vachana saahitya

ತನುವನೆಲ್ಲವ ಜರಿದು ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯಾ ಎನಗೆ. ಭಾವವಿಲ್ಲದ ಬಯಲಸುಖವು ಭಾವಿಸಿದಡೆಂತಹುದು ಬಹುಮುಖರುಗಳಿಗೆ ? ಕೇಳಯ್ಯಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವಾ ನಾನಳಿದು ನೀನುಳಿದ ಪರಿಯ ತೋರಯ್ಯಾ ಪ್ರಭುವೆ.